ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ವಿಧಿವಶ
ಬೆಂಗಳೂರು:ಸ್ಯಾಂಡಲ್‍ವುಡ್ ನಟ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರು ಹೃದಯಾಘಾತದಿಂದ ವಿಧಿವಶರಾಗಿದ್ದಾರೆ.ಅವರು ಪತಿ ಮತ್ತು ಓರ್ವ ಮಗ,ಬಂಧು ಬಳಗವನ್ನು ಅಗಲಿದ್ದಾರೆ.ಪತಿ ವಿಜಯ್ ರಾಘವೇಂದ್ರ ಜತೆ ಸ್ಪಂದನಾ ಅವರು ಬ್ಯಾಂಕಾಕ್‍ಗೆ ತೆರಳಿದ್ದರು,ಅಲ್ಲಿ ಅವರಿಗೆ ಕಾಣಿಸಿಕೊಂಡಿದ್ದ ತೀವೃ ತರಹದ ಎದೆ ನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದರು ಚಿಕಿತ್ಸೆ ಫಲಕಾರಿ ಆಗದೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.2016 ರಲ್ಲಿ ಬಿಡುಗಡೆ ಆಗಿದ್ದ ಅಪೂರ್ವ ಸಿನೆಮಾದಲ್ಲಿ ಅತಿಥಿ ಪಾತ್ರದಲ್ಲಿ ಸ್ಪಂದನಾ ನಟನೆಯನ್ನು ಮಾಡಿದ್ದರು.ಬೆಳ್ತಂಗಡಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ರಕ್ಷಿತ್ ಶಿವರಾಮ್ ಅವರ ಅಕ್ಕ.





















































































































































































































































































































































































































































































































































































































































































































































































































































































































































































































































































































































































































































































































































































































































































