ಮರವಂತೆ ಸಿಆರ್ ಝಡ್ ಕ್ಲಿಯರೆನ್ಸ್ ಗೆ ಸಂಸದ ಬಿ.ವೈ ರಾಘವೇಂದ್ರ ಕೇಂದ್ರ ಸಚಿವರಿಗೆ ಮನವಿ

Share

Advertisement
Advertisement

ಕುಂದಾಪುರ:ಶಿವಮೊಗ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಬೈಂದೂರು ತಾಲೂಕಿನ ಮರವಂತೆ ಹೊರ ಬಂದರಿನ ಎರಡನೇ ಹಂತದ ಕಾಮಗಾರಿ ಕೆಲಸಕ್ಕೆ ಈಗಾಗಲೇ 85 ಕೋಟಿ.ರೂ ಮಂಜೂರಾಗಿದ್ದು ಬಂದರಿನ ಕಾಮಗಾರಿ ಕೆಲಸ ಆದಷ್ಟು ಬೇಗ ಆರಂಭಿಸಲು ಸಿಆರ್ ಝಡ್ ಕ್ಲಿಯರೆನ್ಸ್ ನೀಡುವಂತೆ ಸಂಸದ ಬಿ.ವೈ.ರಾಘವೇಂದ್ರ ಅವರು ಕೆಂದ್ರ ಬಂದರು ಮತ್ತು ಮೀನುಗಾರಿಕೆ ಸಚಿವರಾದ ಸರ್ಬಾನಂದ್ ಸೋನುವಾಲ್ ಅವರನ್ನು ದೆಹಲಿಯಲ್ಲಿ ಭೇಟಿಮಾಡಿ ಮನವಿಯನ್ನು ಮಾಡಿದ್ದಾರೆ.

Advertisement

ಇತ್ತೀಚಿಗೆ ಬೈಂದೂರು ತಾಲೂಕಿನ ಉಪ್ಪುಂದ ಕರ್ಕಿಕಳಿ ಎಂಬಲ್ಲಿ ಸಂಭವಿಸಿದ ದೋಣಿ ದುರಂತದಲ್ಲಿ ಇಬ್ಬರು ಮೀನುಗಾರರು ಮೃತಪಟ್ಟ ವಿಷಯವನ್ನು ಕೇಂದ್ರ ಸಚಿವರ ಗಮನಕ್ಕೆ ತಂದ ಸಂಸದರು ದೋಣಿಗಳ ಸುರಕ್ಷಿತ ಇಳಿದಾಣಕ್ಕೆ ಹಾಗೂ ಮೀನುಗಾರರ ಸುರಕ್ಷತೆ ದೃಷ್ಟಿಯಿಂದ ಉಪ್ಪುಂದದಲ್ಲಿ ಬ್ರೇಕ್ ವಾಟರ್ ಹಾಗೂ ಕಿರು ಬಂದರು ಮಂಜೂರು ಮಾಡುವಂತೆ ಮನವಿಯನ್ನು ಸಲ್ಲಿಸಿದರು.ಬೈಂದೂರಿನಲ್ಲಿ 228.78 ಕೋಟಿ.ರೂ ವೆಚ್ಚದಲ್ಲಿ ಮಲ್ಟಿಪರ್ಪಸ್ ಹಾರ್ಬರ್ ಸ್ಥಾಪನೆಗೆ ಖಾಸಗಿ ಸಹಭಾಗಿತ್ವದಲ್ಲಿ ಟೆಂಡರ್ ಕರೆಯಲಾಗಿದ್ದು,ಯಾವುದೇ ಕಂಪನಿಗಳು ಸದರಿ ಟೆಂಡರ್ ಪ್ರಕ್ರಿಯೆಲ್ಲಿ ಭಾಗವಹಿಸಿರಲಿಲ್ಲ.ಯೋಜನೆಗಳಿಗೆ ಬ್ರೇಕ್‍ವಾಟರ್ ಮತ್ತು ಬರ್ತಿಂಗ್ ಸೌಲಭ್ಯಗಳ ಮೇಲೆ ಹೆಚ್ಚಿನ ಬಂಡವಾಳ ವೆಚ್ಚದ ಅಗತ್ಯವಿರುವುದರಿಂದ ಒಟ್ಟು ಯೋಜನಾ ವೆಚ್ಚಕ್ಕೆ ಪಿಪಿಪಿ ಕಾರ್ಯಸಾಧ್ಯವಾವುದಿಲ್ಲ ಎಂದು ಕೇಂದ್ರ ಸಚಿವರಿಗೆ ವಿವರಣೆ ನೀಡಿದ ಸಂದರು ಸದರಿ ಯೋಜನೆಗಳಿಗೆ 228.78 ಕೋಟಿ ಅವಶ್ಯಕತೆ ಇದ್ದು ಸರಕಾರ ಖುದ್ದಾಗಿ ಕಾಮಗಾರಿ ಕೆಲಸವನ್ನು ಕೈಗೆತ್ತಿಕೊಳ್ಳಬೇಕೆಂದು ವಿನಂಸಿದರು.ಈ ಬಗ್ಗೆ ಸಕಾರಾತ್ಮಕವಾಗಿ ಕೇಂದ್ರ ಸಚಿವರು ಸ್ಪಂದಿಸಿದ್ದಾರೆ ಎಂದು ಸಂಸದರು ತಿಳಿಸಿದ್ದಾರೆ.

Advertisement
Advertisement


Share

Leave a comment

Your email address will not be published. Required fields are marked *

You cannot copy content of this page