ಸಚಿವ ಮಂಕಾಳ ವೈದ್ಯ ಉಪ್ಪುಂದಕ್ಕೆ ಭೇಟಿ, ಪರಿಹಾರದ ಚೆಕ್ ವಿತರಣೆ
ಕುಂದಾಪುರ:ದೋಣಿ ದುರಂತ ಸಂಭವಿಸಿ ಓರ್ವ ಮೀನುಗಾರ ಮೃತರಾಗಿದ್ದು,ಇನ್ನೋರ್ವ ಮೀನುಗಾರ ಸಮುದ್ರದಲ್ಲಿ ನಾಪತ್ತೆ ಆಗಿದ್ದ ಬೈಂದೂರು ತಾಲೂಕಿನ ಉಪ್ಪುಂದ ಕರ್ಕಿಕಳಿಗೆ ಬಂದರು ಮತ್ತು ಮೀನುಗಾರಿಕಾ ಸಚಿವರಾದ ಮಂಕಾಳ ವೈದ್ಯ ಮಂಗಳವಾರ ಘಟನಾ ಸ್ಥಳಕ್ಕೆ ಭೇಟಿ ನೀಡಿ,ಮೀನುಗಾರರ ಮನೆಗೆ ತೆರಳಿದ ಅವರು ಸಾಂತ್ವನದ ಮಾತುಗಳನ್ನು ಹೇಳಿದರು,ದುರಂತದಲ್ಲಿ ಮೃತಪಟ್ಟ ಮೀನುಗಾರರ ಕುಟುಂಬದ ಸದಸ್ಯರಿಗೆ ಪರಿಹಾರದ ಚೆಕ್ ಹಸ್ತಾಂತರ ಮಾಡಿದರು.ಈ ಸಂದರ್ಭದಲ್ಲಿ ಬೈಂದೂರು ಕ್ಷೇತ್ರದ ಶಾಸಕ ಗುರುರಾಜ್ ಗಂಟಿಹೊಳೆ,ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ,ಕಾಂಗ್ರೆಸ್ ಪಕ್ಷದ ಮುಖಂಡರುಗಳಾದ ರಾಜು ಪೂಜಾರಿ,ಪ್ರಕಾಶ್‍ಚಂದ್ರ ಶೆಟ್ಟಿ,ಮದನ್ ಕುಮಾರ್,ಮೀನುಗಾರ ಮುಖಂಡರುಗಳು ಉಪಸ್ಥಿತರಿದ್ದರು.ಸಮುದ್ರದಲ್ಲಿ ನಾಪತ್ತೆ ಆಗಿದ್ದ ಸತೀಶ್ ಖಾರ್ವಿ ಅವರ ಸುಳಿವು ಇನ್ನೂ ಕೂಡ ಪತ್ತೆಯಾಗಿಲ್ಲ.
(ಬಂದರು ಮತ್ತು ಮೀನುಗಾರಿಕಾ ಸಚಿವರಾದ ಮಂಕಾಳ ವೈದ್ಯ ಮಂಗಳವಾರ ಘಟನಾ ಸ್ಥಳಕ್ಕೆ ಭೇಟಿ ನೀಡಿ,ಮೀನುಗಾರರ ಮನೆಗೆ ತೆರಳಿದ ಅವರು ಸಾಂತ್ವನದ ಮಾತುಗಳನ್ನು ಹೇಳಿದರು)
























































































































































































































































































































































































































































































































































































































































































































































































































































































































































































































































































































































































































































































































































































































































































