ಮಣಿಪಾಲ ಆಸ್ಪತ್ರೆಯಿಂದ ಜಯದೇವ ಆಸ್ಪತ್ರೆಗೆ ಮಗು ಶಿಫ್ಟ್: ಈಶ್ವರ ಮಲ್ಪೆ ಸಾಧನೆಗೆ ಜನರ ಮೆಚ್ಚುಗೆ

Share

ಉಡುಪಿ:ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಮಗುವಿಗೆ ತುರ್ತಾಗಿ ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಬೇಕಾಗಿದ್ದರಿಂದ ಆಪತ್ಭಾಂದವ ಈಶ್ವರ್ ಮಲ್ಪೆ ಅವರು ತಮ್ಮ ಆಂಬುಲೆನ್ಸ್ ನಲ್ಲಿ ಮಣಿಪಾಲ ಆಸ್ಪತ್ರೆಯಿಂದ ಜಯದೇವ ಆಸ್ಪತ್ರೆಗೆ ಸಮಯಕ್ಕೆ ಸರಿಯಾಗಿ ತಲುಪಿಸುವುದರ ಮೂಲಕ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ತೀವ್ರ ಸ್ವರೂಪದ ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದ ಮಗುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಪೋಷಕರು ತುರ್ತಾಗಿ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಆಂಬ್ಯುಲೆನ್ಸ್ ಮೂಲಕ ಕರೆದುಕೊಂಡು ಹೋಗಬೇಕಾಗಿತ್ತು.ಖಾಸಗಿ ಆಂಬ್ಯುಲೆನ್ಸ್ ಅವರ ಬಳಿ ಕೇಳಿಕೊಂಡಾಗ ಪ್ರಯಾಣ ವೆಚ್ಚ 28,000.ರೂ ತಗಲುದೆಂದು ಸೂಚಿಸಿದರು.ಆರ್ಥಿಕ ಸಂಕಷ್ಟದಿಂದ ಬಳಲುತ್ತಿದ್ದ ಕುಟುಂಬ ಅಷ್ಟೊಂದು ಹಣವನ್ನು ಹೊಂದಿಸಲು ಸಾಧ್ಯವಾಗದೆ ಈಶ್ವರ ಮಲ್ಪೆ ಅವರ ಬಳಿ ಕೇಳಿಕೊಂಡಿದ್ದಾರೆ.ಮಗುವಿನ ಜೀವಕ್ಕೆ ಬೆಲೆ ಕಟ್ಟದ ಸಮಾಜ ಸೇವಕ ಆಪತ್ಭಾಂದವ ಈಶ್ವರ್ ಮಲ್ಪೆ ಅವರು ಒಂದು ರೂಪಾಯಿಯನ್ನು ಪಡೆದುಕೊಳ್ಳದೆ ತಮ್ಮ ಆಂಬ್ಯುಲೆನ್ಸ್ ನಲ್ಲಿ ಉಚಿತವಾಗಿ ಸಮಯಕ್ಕೆ ಸರಿಯಾಗಿ ಮಗುವನ್ನು ಮಣಿಪಾಲ ಆಸ್ಪತ್ರೆಯಿಂದ ಬೆಂಗಳೂರು ಜಯದೇವ ಆಸ್ಪತ್ರೆಗೆ ರವಾನಿಸುವುದರ ಮೂಲಕ ಸಾಮಾಜಿಕ ಕಾಳಜಿ ಮೆರೆದಿದ್ದಾರೆ ಅವರ ಮಾನವೀಯ ಕಾರ್ಯ ಭಾರಿ ಪ್ರಶಂಸನೆಗೆ ಪಾತ್ರವಾಗಿದೆ.ಈಶ್ವರ ಮಲ್ಪೆ ಅವರ ಜತೆಗೆ ಶಬ್ಬೀರ್ ಮಲ್ಪೆ, ಬಿಲಾಲ್ ಮಲ್ಪೆ‌ ಹಾಗೂ ಎಸ್ಕಾರ್ಟ್ಸ್ ವಾಹನದಲ್ಲಿ ಬುಹ್ರಾನ್ ಮಲ್ಪೆ,ದೀಪು ಮಲ್ಪೆ, ರಕ್ಷಿತ್ ಕಾಪು ಕೈ ಜೋಡಿಸಿದರು.

Advertisement

Share

Leave a comment

Your email address will not be published. Required fields are marked *

You cannot copy content of this page