ನಿವೃತ್ತ ಶಿಕ್ಷಕ ಕರುಣಾಕರ ಶೆಟ್ಟಿಗೆ ಸನ್ಮಾನ
ಕುಂದಾಪುರ:ಬೈಂದೂರು ವಲಯದ ಪ್ರಾಥಮಿಕ ಶಿಕ್ಷಕರ ಸಂಘದ ಮಾಜಿ ಗೌರವಾಧ್ಯಕ್ಷರಾದ,ಶಿಕ್ಷಕ ವೃತ್ತಿಯಿಂದ ಇತ್ತೀಚೆಗೆ ಸೇವಾ ನಿವೃತ್ತಿ ಹೊಂದಿರುವ ಕರುಣಾಕರ ಶೆಟ್ಟಿ ಕೆರಾಡಿ ಅವರನ್ನು ಬೈಂದೂರು ವಲಯದ ಪ್ರಾಥಮಿಕ ಶಿಕ್ಷಕರ ಸಂಘದ ವತಿಯಿಂದ ಸನ್ಮಾನಿಸಲಾಯಿತು.ಈ ಸಂದರ್ಭ ಸಂಘದ ಕಾರ್ಯದರ್ಶಿ ಗಣಪತಿ ಹೋಬಳಿದಾರ್,ಉಪಾಧ್ಯಕ್ಷ ಸುನೀಲ್ ಶೆಟ್ಟಿ,ಖಜಾಂಚಿ ಅಚ್ಚುತ ಬಿಲ್ಲವ ಹಾಗೂ ಸಂಘದ ಪದಾಧಿಕಾರಿಗಳು,ಅನುದಾನಿತ ಶಾಲೆಯ ಶಿಕ್ಷಕರು,ನಿವೃತ್ತ ಶಿಕ್ಷಕರು ಉಪಸ್ಥಿತರಿದ್ದರು.











































































































































































































































































































































































































































































































































































































































































































































































































































































































































































































































































































































































































































































































































































































































































