ಬಿರುಸುಗೊಂಡ ಮಳೆ,ನಾವುಂದ ಸಾಲ್ಬುಡದಲ್ಲಿ ಕೃಷಿ ಭೂಮಿಗಳು ಜಲಾವೃತ
ಕುಂದಾಪುರ:ಬೈಂದೂರು ತಾಲೂಕಿನ ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಕಳೆದ ಮೂರು ದಿನಗಳಿಂದ ಅಬ್ಬರಿಸುತ್ತಿರುವ ಮಳೆಯಿಂದ ಸೌಪರ್ಣಿಕಾ ನದಿಯಲ್ಲಿ ನೀರಿ ಮಟ್ಟ ಏರಿಕೆ ಆಗಿದ್ದರ ಪರಿಣಾಮ ನಾವುಂದ ಸಾಲ್ಬುಡದಲ್ಲಿ ಕೃಷಿ ಭೂಮಿಗಳು ಜಲಾವೃತಗೊಂಡಿದ್ದು,ಸಂಪರ್ಕ ರಸ್ತೆ ಮುಳುಗಡೆ ಆಗಿದೆ.ಸೌಪರ್ಣಿಕಾ ನದಿ ತೀರ ಪ್ರದೇಶಗಳಾದ ಸಾಲ್ಬುಡ,ಪಡುಕೋಣೆ,ಮರವಂತೆ,ಕಡಿಕೆ,ಹಡವು,ತೆಂಗಿನಗುಂಡಿ,ಸೇನಾಪುರ,ದೇವಳಿ,ಆನಗೋಡು,ಬಂಟ್ವಾಡಿ ಹಾಗೂ ಚಕ್ರ ನದಿ ತೀರ ಪ್ರದೇಶಗಳಾದ ಹಕ್ಲಾಡಿ ಗ್ರಾಮದ ಯಳೂರು,ತೊಪ್ಲು ಭಾಗದ ಜನರು ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಮನವಿ ಮಾಡಿಕೊಂಡಿದೆ.
(ಮುನ್ನೆಚ್ಚರಿಕೆ ಕ್ರಮದ ಭಾಗವಾಗಿ ಬೈಂದೂರು ಅಗ್ನಿ ಶಾಮಕದಳದ ಸಿಬ್ಬಂದಿಗಳು ಅಗತ್ಯ ಸಲಕರಣೆಗಳೊಂದಿಗೆ ನೆರೆ ಬಾಧಿತ ಪ್ರದೇಶಗಳಾದ ನಾವುಂದ ಸಾಲ್ಬುಡದಲ್ಲಿ ಬೀಡು ಬಿಟ್ಟಿದ್ದಾರೆ)