ಯೋಗ ತರಬೇತಿ ಕಾರ್ಯಕ್ರಮ
ಕುಂದಾಪುರ:ಹಗಲು ರಾತ್ರಿ ಎನ್ನದೆ ಸದಾ ಸಮಾಜದ ರಕ್ಷಣೆಯಲ್ಲಿ ತೊಡಗಿಕೊಳ್ಳುತ್ತಿರುವ ಪೊಲೀಸ್ ಸಿಬ್ಬಂದಿಗಳಿಗೆ ಕಾರ್ಯದ ಒತ್ತಡವನ್ನು ತಗ್ಗಿಸುವ ದೃಷ್ಟಿಯಿಂದ ಯೋಗ ತರಬೇತಿ ಶಿಬಿರವನ್ನು ತ್ರಾಸಿ ಅಣ್ಣಪ್ಪಯ್ಯ ಸಭಾಭವನದಲ್ಲಿ ಶುಕ್ರವಾರ ಆಯೋಜಿಸಲಾಯಿತು.ಯೋಗ ಶಿಕ್ಷಕರಾದ ಸಂದೀಪ ಯೋಗ ತರಬೇತಿಯನ್ನು ನೀಡಿದರು.ಗಂಗೊಳ್ಳಿ ಠಾಣೆ ಪಿಎಸ್‍ಐ ಹರೀಶ್ ನಾಯ್ಕ್ ಮತ್ತು ಸಿಬ್ಬಂದಿಗಳು ಯೋಗ ಶಿಬಿರದಲ್ಲಿ ಪಾಲ್ಗೊಂಡಿದ್ದರು.






















































































































































































































































































































































































































































































































































































































































































































































































































































































































































































































































































































































































































































































































































































































































































