ಮಲ್ಪೆಯಲ್ಲಿ ದೋಣಿ ಮುಳುಗಡೆ,ಐವರು ಮೀನುಗಾರರ ರಕ್ಷಣೆ
ಉಡುಪಿ:ಮೀನುಗಾರಿಕೆಗೆ ತೆರಳಿದ್ದ ದೋಣಿಯೊಂದು ಸಮುದ್ರದ ಅಲೆಗಳ ಆರ್ಭಟಕ್ಕೆ ಒಡೆದು ನೀರು ತುಂಬಿ ಮುಳುಗುವ ಸ್ಥಿತಿಯಲ್ಲಿದ್ದ
ದೋಣಿಯನ್ನು ಆಪತ್ಭಾಂಧವ ಈಶ್ವರ್ ಮಲ್ಪೆ ಅವರ ತಂಡ ರಕ್ಷಿಸಿದ ಘಟನೆ ಮಲ್ಪೆಯಲ್ಲಿ ನಡೆದಿದೆ.
ಮೀನುಗಾರರಿಗೆ ತೆರಳಿದ್ದ ಸಂದರ್ಭ ದೋಣಿಯೊಂದು ಮುಳುಗುವ ಸ್ಥಿತಿಯಲ್ಲಿ ಇರುವ ವಿಷಯವನ್ನು ಅರಿತ ಮುಳುಗು ತಜ್ಞ ಈಶ್ವರ ಮಲ್ಪೆ ಮತ್ತು ಅವರ ಸ್ನೇಹಿತರು ದೋಣಿಯ ಮೂಲಕ ಘಟನೆ ಸ್ಥಳಕ್ಕೆ ತೆರಳಿ ಐದು ಜನ ಮೀನುಗಾರರನ್ನು ಹಾಗೂ ಮೂರು ಲಕ್ಷಕ್ಕೂ ಅಧಿಕ ಬೆಲೆಬಾಳುವ ಎರಡು ಎಂಜಿನ್ ಮತ್ತು ಇಂಧನಗಳನ್ನು ಸುರಕ್ಷಿತವಾಗಿ ತರುವಲ್ಲಿ ಯಶಸ್ವಿಯಾಗಿದ್ದಾರೆ. ಕಾರ್ಯಾಚರಣೆಯಲ್ಲಿ ಈಶ್ವರ್ ಮಲ್ಪೆ ಜೊತೆಗೆ ಬಿಲಾಲ್ ಮಲ್ಪೆ , ರವಿ ,ಅನಿಲ್ ಹಾಗೂ ಕೈಜೋಡಿಸಿದರು.





















































































































































































































































































































































































































































































































































































































































































































































































































































































































































































































































































































































































































































































































































































































































































