ಶ್ರಮದಾನದ ಮೂಲಕ ಸ್ವಚ್ಛತಾ ಕಾರ್ಯಕ್ರಮ
ಕುಂದಾಪುರ:ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ,ಬಿಸಿ ಟ್ರಸ್ಟ್ ಬೈಂದೂರು ತಾಲೂಕು ಹಾಗೂ ಪಡುಕೋಣೆ ವಲಯದ ವಿಪತ್ತು ನಿರ್ವಹಣಾ ತಂಡದ ಸದಸ್ಯರ ವತಿಯಿಂದ ನಾಡ ಗ್ರಾಮ ಪಂಚಾಯತ್ ನಿಂದ ಪಡುಕೋಣೆ ಶಾಲೆ ವರೆಗಿನ ಮುಖ್ಯ ರಸ್ತೆಯಲ್ಲಿ ಬಾಯಿ ತೆರೆದು ನಿಂತ ಹೊಂಡಗಳನ್ನು ಮುಚ್ಚಿ ರಸ್ತೆಯ ಎರಡು ಬದಿಗಳಲ್ಲ್ಲಿ ಬೆಳದಿರುವ ಗಿಡ ಗಂಟಿಗಳನ್ನು ಕಡಿದು ಶ್ರಮದಾನದ ಮೂಲಕ ಸ್ವಚ್ಛಗೊಳಿಸಲಾಯಿತು.ಮೇಲ್ವಿಚಾರಕಿ ಪಾರ್ವತಿ,ಸೇವಾ ಪ್ರತಿನಿಧಿ ಸವಿತಾ,ಮಾಜಿ ವಲಯಾಧ್ಯಕ್ಷ ವೀಣಾ ಆಚಾರಿ,ಘಟಕದ ಪ್ರತಿನಿಧಿ ಮಂಜುನಾಥ್ ಹಾಗೂ ಸ್ವಯಂ ಸೇವಕರು ಉಪಸ್ಥಿತರಿದ್ದರು.











































































































































































































































































































































































































































































































































































































































































































































































































































































































































































































































































































































































































































































































































































































































































