ಗದ್ದೆಯಲ್ಲಿ ಸಿಲುಕಿಕೊಂಡ ಪವರ್ ಟಿಲ್ಲರ್
ಕುಂದಾಪುರ:ಹೊಸಾಡು ಗ್ರಾಮದ ವಳನಾಡು ಎಂಬಲ್ಲಿ ಯಶೋಧ ಮೊಗವೀರ ಅವರ ಗದ್ದೆಯಲ್ಲಿ ಉಳುಮೆ ಮಾಡುತ್ತಿದ್ದಾಗ ಜಲ ಜೀವನ್ ಮಿಷನ್ ಪೈಪ್‍ಲೈನ್ ಹೊಂಡದಲ್ಲಿ ಪವರ್ ಟಿಲ್ಲರ್ ಸಿಕ್ಕಿ ಹಾಕಿಕೊಂಡ ಘಟನೆ ಬುಧವಾರ ನಡೆದಿದೆ.ಹರಸಾಹಸ ಪಟ್ಟು ರೈತರು ಪವರ್ ಟಿಲ್ಲರ್‍ನ್ನು ಮೇಲಕ್ಕೆ ಎತ್ತಿದರು.
ಮನೆ ಮನೆಗೆ ಕುಡಿಯುವ ನೀರನ್ನು ಒದಗಿಸುವ ನಿಟ್ಟಿನಲ್ಲಿ ಕೈಗೊಂಡಿರುವ ಜಲ ಜೀವನ್ ಮಿಷನ್ ಪೈಪ್‍ಲೈನ್ ಹೊಂಡವನ್ನು ಕೃಷಿ ಭೂಮಿ ಮಧ್ಯದಲ್ಲಿ ತೆಗೆದಿದ್ದರಿಂದ ಗದ್ದೆ ಉಳುಮೆ ಮಾಡುತ್ತಿದ್ದಾಗ ಪವರ್ ಟಿಲ್ಲರ್ ಹೊಂಡದಲ್ಲಿ ಸಿಕ್ಕಿ ಹಾಕಿಕೊಂಡಿದೆ ಎಂದು ರೈತರು ಆರೋಪಿಸಿದ್ದಾರೆ.ಯಂತ್ರದ ಪ್ರಮುಖ ಭಾಗಗಳು ತುಂಡಾಗಿದ್ದರಿಂದ ಯಂತ್ರದ ಮಾಲೀಕರಾದ ದೇವದಾಸ ಬಿಲ್ಲವ ನಾಯಕವಾಡಿ ಅವರಿಗೆ ಸುಮಾರು 28,000.ರೂ ನಷ್ಟ ಸಂಭವಿಸಿದೆ.ಪೈಪ್‍ಲೈನ್ ಕಾಮಗಾರಿ ವಹಿಸಿಕೊಂಡಿರುವ ಕಂಪೆನಿ ಪರಿಹಾರ ನೀಡಬೆಕೆಂದು ಯಂತ್ರದ ಮಾಲೀಕರು ಆಗ್ರಹಿಸಿದ್ದಾರೆ.ಹೊಸಾಡು ಗ್ರಾಮ ಪಂಚಾಯತ್ ಒಂದರಲ್ಲೆ ಜಲಜೀವನ್ ಮಿಷನ್‍ಗೆ ಸಂಬಧಿಸಿದ ಇದು ಮೂರನೇ ಪ್ರಕರಣವಾಗಿದೆ.