ಆಕಸ್ಮಿಕವಾಗಿ ತೋಡಿಗೆ ಬಿದ್ದು ಮಹಿಳೆ ದಾರುಣ ಸಾವು
ಉಡುಪಿ:ಕಾರ್ಕಳ ತಾಲೂಕಿನ ನಲ್ಲೂರು ಗ್ರಾಮದ ನದಾಯಿಪಾಲ್ಕೆ ಎಂಬಲ್ಲಿ ದನವನ್ನು ಹುಡುಕಿಕೊಂಡು ಹೋದ ಮಹಿಳೆಯೊಬ್ಬರು ಆಕಸ್ಮಿಕವಾಗಿ ತೋಡಿಗೆ ಬಿದ್ದು ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ.
ಬೇಬಿ ಶೆಟ್ಟಿ (57) ಮೃತಪಟ್ಟ ದುರ್ದೈವಿ.
ಶುಕ್ರವಾರ ಮದ್ಯಾಹ್ನ 3 ಘಂಟೆ ಸುಮಾರಿಗೆ ದನವನ್ನು ಹುಡುಕಿಕೊಂಡು ಹೋಗಿದ್ದಾಗ ಬೇಬಿ ಶೆಟ್ಟಿ ಅವರು ಕಾಲು ಜಾರಿ ಆಕಸ್ಮಿಕವಾಗಿ ತೋಡಿಗೆ ಬಿದ್ದಿದ್ದಾರೆ,ಕಳೆದ ನಾಲ್ಕು ದಿನಗಳಿಂದ ನಿರಂತರವಾಗಿ ಸುರಿಯುತ್ತಿದ್ದ ಮಳೆಗೆ ತೋಡಿನಲ್ಲಿ
ಭಾರಿ ಪ್ರಮಾಣದಲ್ಲಿ ನೀರು ಹರಿಯುತಿದ್ದು,ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಮುಳುಗಿ ಮೃತಪಟ್ಟಿದ್ದಾರೆ. ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





















































































































































































































































































































































































































































































































































































































































































































































































































































































































































































































































































































































































































































































































































































































































































