ಹೊಸಾಡು ಬೈಲು ಜಲಾವೃತ:ಸಮಸ್ಯೆ ಬಗೆಹರಿಸುವಂತೆ ಆಗ್ರಹ
ಕುಂದಾಪುರ:ಎಡಬಿಡದೆ ಸುರಿದ ಬಾರಿ ಮಳೆಗೆ ಹೊಸಾಡು ಬೈಲು ಜಲಾವೃತವಾಗಿದ್ದು ಗದ್ದೆಯಲ್ಲಿ ನಾಟಿ ಮಾಡಿದ ಸಸಿಗಳು ನೀರಿನಲ್ಲಿ ಮುಳುಗಿದೆ.ರಾಷ್ಟ್ರೀಯ ಹೆದ್ದಾರಿ ಚರಂಡಿ ನೀರು ತೋಡಿನ ಮೂಲಕ ಬೈಲಿಗೆ ನುಗ್ಗುತ್ತಿರುವುದರಿಂದ ಸಮಸ್ಯೆ ಸೃಷ್ಟಿಯಾಗುತ್ತಿದೆ ಎಂದು ರೈತರು ದೂರಿದ್ದಾರೆ.ಚರಂಡಿ ನೀರಿನ ಸಮಸ್ಯೆಯನ್ನು ಬಗೆ ಹರಿಸುವಂತೆ ಆಗ್ರಹಿಸಿದ್ದಾರೆ.