ಕೋಡಿ ಕನ್ಯಾಣ,ಹಂಗಾರಕಟ್ಟೆ ಬಂದರಿಗೆ ಮೀನುಗಾರಿಕೆ ಸಚಿವ ಮಂಕಾಳ ವೈದ್ಯ ಭೇಟಿ: ಮೀನುಗಾರರ ಸಮಸ್ಯೆಗಳಿಗೆ ಸ್ಪಂದನೆ

Share

ಕುಂದಾಪುರ:ಮೀನುಗಾರರ ಸಮಸ್ಯೆಗಳು ಹಂತ- ಹಂತಗಳಲ್ಲಿ ಬಗೆಹರಿಸುವ ಇಚ್ಛಾಶಕ್ತಿ ನಮ್ಮ ಸರಕಾರಕ್ಕಿದೆ ಎಂದು ಬಂದರು,ಮೀನುಗಾರಿಕೆ ಸಚಿವ ಮಂಕಾಳ ವೈದ್ಯ ಹೇಳಿದರು.
ಭಾನುವಾರ ಕೋಡಿಕನ್ಯಾಣ ಮೀನುಗಾರಿಕೆ ಬಂದರು ಪ್ರದೇಶದಕ್ಕೆ ಭೇಟಿ ನೀಡಿದ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.

ಕಡಲ್ಕೊರೆತ ಸಮಸ್ಯೆ ಕಾಸರಗೋಡಿನಿಂದ ಕಾರವಾರ- ಗೋವಾದ ತನಕ ಹಬ್ಬಿದೆ. ಇದಕ್ಕೆ ತಾತ್ಕಾಲಿಕ ಪರಿಹಾರ ಸಮಂಜಸವಲ್ಲ.ಹೀಗಾಗಿ ತಜ್ಞರ ಸಮಿತಿಯನ್ನು ನೇಮಿಸಿದ್ದು ಶಾಶ್ವತ ಪರಿಹಾರಕ್ಕೆ ಯೋಜನೆ ರೂಪಿಸಲಾಗುತ್ತಿದೆ,ತಾತ್ಕಾಲಿಕ ಪರಿಹಾರ ಬೇಕಾದಲ್ಲಿ ವಿಮರ್ಶೆ ನಡೆಸಿ ಪರಿಹಾರ ಕಂಡುಕೊಳ್ಳಲಾಗುವುದು.
ಕೋಡಿ ಕನ್ಯಾಣ,ಹಂಗಾರಕಟ್ಟೆ, ಬೆಂಗ್ರೆ ಮೀನುಗಾರರು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಇವರ ದುಃಸ್ಥಿತಿ ನೋಡಿ ನನಗೆ ದುಃಖವಾಗಿದೆ.ಹೀಗಾಗಿ ಹೂಳೆತ್ತುವುದು ಮುಂತಾದ ಸಮಸ್ಯೆಗಳಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಮೀನುಗಾರಿಕೆ,ಬಂದರು ಇಲಾಖೆ ಜಂಟಿಯಾಗಿ ಯೋಜನೆ ರೂಪಿಸಲಾಗುವುದು ಎಂದರು.
ಬಂದರು,ಮೀನುಗಾರಿಕೆ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ರಾಜ್ಯ ಸರಕಾರದ ಅನುದಾನ ಸಾಕಾಗುವುದಿಲ್ಲ.ಹೀಗಾಗಿ ಕೇಂದ್ರ ಸರಕಾರದಲ್ಲಿ ಅನುದಾನಕ್ಕೆ ಬೇಡಿಕೆ ಇಡಲಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ,ಮೊಗವೀರ ಮುಖಂಡ ಡಾ.ಜಿ.ಶಂಕರ್, ಆನಂದ ಸಿ.ಕುಂದರ್, ಮೀನುಗಾರಿಕೆ,ಬಂದರು ಇಲಾಖೆ ಅಧಿಕಾರಿ ಕ್ಯಾ.ಸ್ವಾಮಿ, ಅಂಜನಾ ದೇವಿ,ಶ್ರೀನಿವಾಸ ಮೂರ್ತಿ, ಡಯಾಸ್,ಹಂಗಾರಕಟ್ಟೆ ಬಂದರು ಅಭಿವೃದ್ಧಿ ಸಮಿತಿಯ ಅಧ್ಯಕ್ಷ ರಾಜೇಂದ್ರ ಸುವರ್ಣ, ಕೋಡಿ ಕನ್ಯಾಣ ಲಕ್ಷ್ಮಣ ಸುವರ್ಣ ಉಪಸ್ಥಿತರಿದ್ದರು.

Advertisement

Share

Leave a comment

Your email address will not be published. Required fields are marked *

You cannot copy content of this page