ಸ್ಪೋಕನ್ ಇಂಗ್ಲಿಷ್,ಕರಾಟೆ,ಯಕ್ಷಗಾನ ತರಗತಿ ಉದ್ಘಾಟನೆ
ಕುಂದಾಪುರ:ಸರಕಾರಿ ಹಿರಿಯ ಪ್ರಾಥಮಿಕ ಮೂಡ್ಲಕಟ್ಟೆ ಶಾಲೆಯಲ್ಲಿ ಸ್ಪೋಕನ್ ಇಂಗ್ಲೀಷ್ ತರಗತಿ,ಕರಾಟೆ ತರಗತಿ ಹಾಗೂ ಯಕ್ಷಗಾನ ತರಗತಿಗಳನ್ನು ಉದ್ಘಾಟನೆ ಮಾಡಲಾಯಿತು.
ಮೂಡ್ಲಕಟ್ಟೆ ತಾಂತ್ರಿಕ ಮಹಾವಿದ್ಯಾಲಯದ ವೈಸ್ ಪ್ರಿನ್ಸಿಪಾಲ್ ಮೇಲ್ವಿನ್ ಡಿಸೋಜಾ ಉದ್ಘಾಟಿಸಿದರು.ಎಸ್ ಡಿ ಎಂ ಸಿ ಅಧ್ಯಕ್ಷ ವಿಶ್ವನಾಥ್ ಶೇರೆಗಾರ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಮೂಡ್ಲಕಟ್ಟೆ ತಾಂತ್ರಿಕ ಮಹಾವಿದ್ಯಾಲಯ ಅಧ್ಯಕ್ಷ ಸಿದ್ದಾರ್ಥ್ ಶೆಟ್ಟಿ ಅವರು ಕೊಡುಗೆಯಾಗಿ ನೀಡಿದ ನೋಟ್ಸ್ ಪುಸ್ತಕಗಳನ್ನು ಪ್ರಿನ್ಸಿಪಾಲ್ ಮೇಲ್ವಿನ್ ಡಿಸೋಜಾ ವಿತರಿಸಿದರು. ಮೂಡ್ಲಕಟ್ಟೆ ಹಳೆ ವಿದ್ಯಾರ್ಥಿ ಶರತ್ ಆಚಾರ್ ಅವರು1 ನೇ ತರಗತಿಯ ವಿದ್ಯಾರ್ಥಿಗಳಿಗೆ ಬ್ಯಾಗ್ ಹಾಗೂ ಕೊಡೆಯನ್ನು ಕೊಡುಗೆಯಾಗಿ ನೀಡಿದರು. ಕಾರ್ಯಕ್ರಮದಲ್ಲಿ ಕರಾಟೆ ತರಬೇತುದಾರ ಕಿರಣ್ ಆಚಾರ್,ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಮೇಶ್ ಆಚಾರ್,ಹಳೆ ವಿದ್ಯಾರ್ಥಿ ಜಗದೀಶ್,ವಾಹನ ನಿರ್ವಹಣೆ ಸಮಿತಿಯ ಅಧ್ಯಕ್ಷ ಸುರೇಶ್ ದೇವಾಡಿಗ,ಎಸ್ ಡಿಎಂಸಿ ಉಪಾಧ್ಯಕ್ಷೆ ಶಾಂತಾ,ಸ್ಪೋಕನ್ ಇಂಗ್ಲೀಷ್ ತರಗತಿ ಶಿಕ್ಷಕಿ ದೀಪಿಕಾ,ಮುಖ್ಯ ಶಿಕ್ಷಕ ಐವನ್ ಸಂತೋಷ್ ಸಾಲಿನ್ಸ್. ಎಸ್ ಡಿ ಎಂಸಿ ಸದಸ್ಯರು,ಆಶಾ ಕಾರ್ಯಕರ್ತೆ ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕ ಐವನ್ ಸಂತೋಷ್ ಸಾಲಿನ್ಸ್ ಪ್ರಾಸ್ತಾವಿಕವಾಗಿ ಮಾತನಾಡಿದರು.ಶಿಕ್ಷಕ ಗುರುರಾಜ್ ಆಚಾರ್ ವಂದಿಸಿದರು.



















































































































































































































































































































































































































































































































































































































































































































































































































































































































































































































































































































































































































































































































































































































































































