ಚಾರಣಕ್ಕೆ ತೆರಳಿದ್ದ ಎಂಬಿಬಿಎಸ್ ಪದವಿಧರ ಯುವಕ ಹೃದಯಾಘಾತದಿಂದ ಸಾವು
ಕುಂದಾಪುರ:ಕುದುರೆಮುಖ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ನೇತ್ರಾವತಿ ಉಗಮ ಸ್ಥಾನಕ್ಕೆ ಚಾರಣಕ್ಕೆ ತೆರಳಿದ್ದ ಎಂಬಿಬಿಎಸ್ ಪದವೀಧರ ಯುವಕ ಹೃದಯಘಾತದಿಂದ ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ.ಮೈಸೂರಿನ ಜೆಪಿ ನಗರದ ನಿವಾಸಿ ರಕ್ಷಿತ್27 ಮೃತಪಟ್ಟ ದುರ್ದೈವಿ.
ತನ್ನ ಐವರು ಸ್ನೇಹಿತರೊಂದಿಗೆ ಹೊರನಾಡಿಗೆ ಬಂದಿದ್ದ ರಕ್ಷಿತ್, ಅಲ್ಲಿಂದ ನೇತ್ರಾವತಿ ಉಗಮ ಸ್ಥಾನದ ಕಡೆ ಚಾರಣಕ್ಕೆ ಹೊರಟಿದ್ದರು.ಎಳನೀರು ಗಡಿ ಸುಮಾರು 4 ಕಿ.ಮೀ ಮುಂದೆ ಸಾಗುತ್ತಿದ್ದ ವೇಳೆ ರಕ್ಷಿತ್ ಗೆ ತೀವ್ರ ತರಹದ ಎದೆ ನೋವು ಕಾಣಿಸಿಕೊಂಡಿದೆ ಎದೆ ನೋವಿನಿಂದ ಬಳಲಿದ ಸ್ನೇಹಿತನನ್ನು,ಸ್ಥಳೀಯರ ಸಹಕಾರದಿಂದ ಹೊತ್ತು ತಂದು ಕಳಸ ಆಸ್ಪತ್ರೆಗೆ ದಾಖಲಿಸಿದ್ದಾರೆ.ರಕ್ಷಿತ್ ನನ್ನು ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದರು.





















































































































































































































































































































































































































































































































































































































































































































































































































































































































































































































































































































































































































































































































































































































































































