ಕೂದಲೆಳೆ ಅಂತರದಲ್ಲಿ ಪಾರಾದ ಬೈಂದೂರು ಶಾಸಕ,ಮರ ತೆರವು ಮಾಡುವ ವೇಳೆಯೇ ಉರಳಿ ಬಿದ್ದ ಇನ್ನೊಂದು ಮರ
ಕುಂದಾಪುರ:ಹಾಲಾಡಿ ಮಾರ್ಗದ ಮುಖ್ಯ ರಸ್ತೆಯಲ್ಲಿ ಬೈಂದೂರು ಕ್ಷೇತ್ರದ ಶಾಸಕ ಗುರುರಾಜ್ ಗಂಟಿಹೊಳೆ ಅವರು ಸಾಗುತ್ತಿದ್ದ ಸಂದರ್ಭದಲ್ಲಿ ಮರವೊಂದು ಉರುಳಿ ಬಿದ್ದು ರಸ್ತೆಗೆ ಅಡ್ಡಲಾಗಿ ಬಿದ್ದಿತ್ತು,ಸಾರ್ವಜನಿಕರ ಸಂಚಾರಕ್ಕೆ ತೊಡಕನ್ನು ಉಂಟು ಮಾಡುತ್ತಿದ್ದ ಮರವನ್ನು ಶಾಸಕರು ತಮ್ಮ ಸಂಗಡಿಗರೊಂದಿಗೆ ಸೇರಿಕೊಂಡು ತೆರವು ಮಾಡುತ್ತಿದ್ದ ಸಂದರ್ಭದಲ್ಲಿ, ಅದೇ ಜಾಗದಲ್ಲಿ ಇನ್ನೊಂದು ಮರ ಉರುಳಿ ಬಿದ್ದ ಘಟನೆ ನಡೆದಿದೆ.ಕೂದಲೆಳೆ ಅಂತರದಲ್ಲಿ ಶಾಸಕರು ಪಾರಾಗಿದ್ದಾರೆ.
ಕ್ಷೇತ್ರದ ಶಾಸಕರು ರಸ್ತೆಗೆ ಅಡ್ಡಲಾಗಿ ಬಿದ್ದ ಮರವನ್ನು ಸ್ವತಃ ತಾವೇ ತೆರವು ಮಾಡುವುದರ ಮುಖೇನ ಸಮಾಜಕ್ಕೆ ಮಾದರಿ ಸಂದೇಶವನ್ನು ರವಾನಿಸಿದ್ದಾರೆ.ಅವರ ಸಾಮಾಜಿಕ ಕಳಕಳಿಯುಳ್ಳ ಮನೋಭಾವ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.






















































































































































































































































































































































































































































































































































































































































































































































































































































































































































































































































































































































































































































































































































































































































































