ಮರವಂತೆ ಕಡಲ್ಕೊರೆತ ಪ್ರದೇಶಕ್ಕೆ ಸಂಸದ ಬಿ.ವೈ ರಾಘವೇಂದ್ರ ಭೇಟಿ,ಪರಿಶೀಲನೆ

Share

Advertisement
Advertisement


ಕುಂದಾಪುರ:ಪ್ರತಿ ವರ್ಷ ಮರವಂತೆಯಲ್ಲಿ ಸಂಭವಿಸುತ್ತಿರುವ ಕಡಲ್ಕೊರೆತದಿಂದ ಸ್ಥಳೀಯರಿಗೂ ಆತಂಕದ ವಿಚಾರವಾಗಿದೆ ಸಮುದ್ರ ಕೊರೆತದಿಂದ ನಿದ್ದೆ ಇಲ್ಲದ ರಾತ್ರಿಯನ್ನು ಜನರು ಕಳೆಯುವಂತಹ ಪರಿಸ್ಥಿತಿ ಎದುರಾಗಿದೆ.ಕಡಲ್ಕೊರೆತದ ತಡೆಗೆ ಶಾಶ್ವತ ಪರಿಹಾರವನ್ನು ಕೈಗೊಳ್ಳಲು ಕೇಂದ್ರ ಸರಕಾರಕ್ಕೆ ಮನವಿಯನ್ನು ನೀಡಲಾಗುವುದು ಆದ್ಯತೆ ಮೆರೆಗೆ ಶೀಘೃ ಕ್ರಮಗಳನ್ನು ಕೈಗೊಳ್ಳಲು ಪ್ರಯತ್ನಿಸಲಾಗುದೆಂದು ಶಿವಮೊಗ್ಗ ಕ್ಷೇತ್ರದ ಸಂಸದ ಬಿ.ವೈ ರಾಘವೇಂದ್ರ ಹೇಳಿದರು.
ಬಿಪರ್‍ಜಾಯ್ ಚಂಡಮಾರುತದದಿಂದ ಕಡಲ್ಕೊರೆತ ಉಂಟಾಗಿ ಹಾನಿ ಸಂಭವಿಸಿದ ಬೈಂದೂರು ತಾಲೂಕಿನ ಮರವಂತೆ ಕರಾವಳಿ ಸಮುದ್ರ ತೀರ ಪ್ರದೇಶಕ್ಕೆ ಶುಕ್ರವಾರ ಭೇಟಿ ನೀಡಿದ ಸಂಸದರು ಹಾನಿಯ ಪ್ರಮಾಣವನ್ನು ಅವಲೋಕಿಸಿ ಮಾತನಾಡಿದರು.
ಜೂ,26 ರಂದು ಕೇಂದ್ರದಿಂದ ವಿಶೇಷ ತಂಡ ಮರವಂತೆಗೆ ಆಗಮಿಸಿ ಕಡಲ್ಕೊರೆತದ ಪರಿಸ್ಥಿತಿಯ ಬಗ್ಗೆ ವರದಿಯನ್ನು ನೀಡಲಿದ್ದಾರೆ ಆದಷ್ಟು ಬೇಗ ಕೇಂದ್ರದಿಂದ ಹಣವನ್ನು ಬಿಡುಗಡೆ ಮಾಡಲು ಕ್ರಮ ಜರುಗಿಸಲಾಗುವುದು ಮರವಂತೆ ಕಡಲ್ಕೊರೆತದ ಬಗ್ಗೆ ಬಂದರು ಮತ್ತು ಮೀನುಗಾರಿಕೆ ಸಚಿವರ ಜತೆ ಈಗಾಗಲೆ ಮಾತನಾಡಲಾಗಿದೆ ಎಂದು ಹೇಳಿದರು.ಯಡಿಯೂರಪ್ಪನವರ ಸರಕಾರದ ಅವದಿಯಲ್ಲಿ 54.ಕೋಟಿ.ರೂ ವೆಚ್ಚದಲ್ಲಿ ಮರವಂತೆಯಲ್ಲಿ ಬಂದರು ಅಭಿವೃದ್ಧಿ ಕಾಮಗಾರಿಯನ್ನು ಮಾಡಲಾಗಿದೆ.ಬಂದರಿನ ಎರಡನೇ ಹಂತದ ಕಾಮಗಾರಿಗೆ 84.ಕೋಟಿ.ರೂ ಹಣವನ್ನು ನಮ್ಮ ಬಿಜೆಪಿ ಸರಕಾರ ಬಿಡುಗಡೆ ಮಾಡಿತ್ತು ಸರಕಾರ ಬದಲಾದರು ಅಭಿವೃದ್ಧಿ ಕೆಲಸಗಳಿಗೆ ಹಿನ್ನಡೆ ಆಗದು.2ನೇ ಹಂತದ ಕಾಮಗಾರಿ ಕೆಲಸವನ್ನು ಆರಂಭಿಸಲು ಹಣವನ್ನು ಕೂಡಲೇ ಬಿಡುಗಡೆ ಮಾಡುವಂತೆ ರಾಜ್ಯ ಸರಕಾರವನ್ನು ವಿನಂತಿಸುತ್ತೇನೆ ಎಂದರು.

Advertisement

ಕಳೆದ ವರ್ಷ ಕಾಣಿಸಿಕೊಂಡಿದ್ದ ತೌಕ್ತೆ ಚಂಡಮಾರುತದಿಂದ ಮರವಂತೆಯಲ್ಲಿ ತೀವೃ ಕಡಲ್ಕೊರೆತ ಉಂಟಾಗಿ ಸಂಭವಿಸಿದ ಹಾನಿಗೆ ರಾಜ್ಯ ಮತ್ತು ಕೇಂದ್ರ ಸರಕಾರಗಳು ಯಾವುದೇ ರೀತಿ ಪರಿಹಾರದ ಕ್ರಮಗಳನ್ನು ಕೈಗೊಳ್ಳದಿರದ ಬಗ್ಗೆ ಮೀನುಗಾರರು ಸಂಸದರ ಎದುರು ತಮ್ಮ ಅಸಮಾಧಾನವನ್ನು ತೊಡಿಕೊಂಡರು.ಈ ಸಂದರ್ಭದಲ್ಲಿ ಬೈಂದೂರು ಕ್ಷೇತ್ರದ ಶಾಸಕ ಗುರುರಾಜ್ ಗಂಟಿಹೊಳೆ,ಅಪರ ಜಿಲ್ಲಾಧಿಕಾರಿ ವೀಣಾ,ಬೈಂದೂರು ತಹಶೀಲ್ದಾರ್ ಶ್ರೀಕಾಂತ್ ಎಸ್ ಹೆಗ್ಡೆ,ಆರ್‍ಐ ಮಂಜು,ಮೀನುಗಾರರ ಮುಖಂಡರಾದ ವಾಸುದೇವ ಖಾರ್ವಿ,ಚಂದ್ರ ಖಾರ್ವಿ ಮತ್ತು ಸ್ಥಳೀಯರು,ಬೈಂದೂರು ಬಿಜೆಪಿ ಮಂಡಲ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ,ಮರವಂತೆ ಗ್ರಾ.ಪಂ ಉಪಾಧ್ಯಕ್ಷ ಲೋಕೇಶ್ ಖಾರ್ವಿ ಉಪಸ್ಥಿತರಿದ್ದರು.

Advertisement
Advertisement


Share

Leave a comment

Your email address will not be published. Required fields are marked *

You cannot copy content of this page