ಹರ್ಕೂರು ಗಣಪತಿ ದೇವಸ್ಥಾನದಲ್ಲಿ ನಿಧಿ ಕಲಶ ಸ್ಥಾಪನೆ
ಕುಂದಾಪುರ:ಹರ್ಕೂರು ಗ್ರಾಮದ ಮಹಾಗಣಪತಿ ದೇವಸ್ಥಾನದ ನೂತನ ಗರ್ಭಗುಡಿ ನಿರ್ಮಾಣದ ಶಿಲಾನ್ಯಾಸ ಕಾರ್ಯಕ್ರಮದ ಮುಂದುವರಿದ ಭಾಗವಾಗಿ ದೇವಳದಲ್ಲಿ ಷಢಾಧಾರ ಕಾರ್ಯಕ್ರಮ,ನಿಧಿಕುಂಭ ಸ್ಥಾಪನೆ,ನಿಧಿ ಕಲಶ ಶುದ್ಧಿ,ವಾಸ್ತು ಬಲಿ ನಿಧಿ ಕಲಶ ಪೂಜೆ ಸಹಿತ ಇನ್ನಿತರ ನಾನಾ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು.
ಧಾರ್ಮಿಕ ಮುಖಂಡ ಅಪ್ಪಣ್ಣ ಹೆಗ್ಡೆ,ಚಿತ್ತರಂಜನ್ ಹೆಗ್ಡೆ ಹರ್ಕೂರು,ಜಯಶೀಲ ಶೆಟ್ಟಿ,ತಂತ್ರಿಗಳಾದ ಚೆನ್ನಕೇಶವ ಉಪಾಧ್ಯಾಯ,ನವೀಕರಣ ಸಮಿತಿ ಸದಸ್ಯರು,ಗ್ರಾಮಸ್ಥರು,ಅರ್ಚಕ ವೃಂದದವರು ಉಪಸ್ಥಿತರಿದ್ದರು.














































































































































































































































































































































































































































































































































































































































































































































































































































































































































































































































































































































































































































































































































































































































































