ನಾಡಕ್ಕೆ ಸರಕಾರಿ ಬಸ್ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಪ್ರತಿಭಟನೆ
ಕುಂದಾಪುರ:ಸರಕಾರಿ ಮತ್ತು ಖಾಸಗಿ ಬಸ್‍ಗಳಿಗೆ ಪರ್ಮಿಟ್ ಇದ್ದರೂ ಬಹಳಷ್ಟು ಕಡೆ ಸಂಚಾರ ಮಾಡುತ್ತಿಲ್ಲ ಕಲೆಕ್ಷನ್ ದೃಷ್ಟಿಯಲ್ಲಿಟ್ಟುಕೊಂಡು ಟ್ರಿಪ್‍ಗಳನ್ನು ಓಡಿಸುತ್ತಾ ಇದ್ದಾರೆ.ಸಾರಿಗೆ ಜನರ ಮೂಲಭೂತ ವ್ಯವಸ್ಥೆಗಳಲ್ಲಿ ಪ್ರಧಾನವಾದದ್ದು ಸರಿಯಾದ ದರದಲ್ಲಿ ಮತ್ತು ಸರಿಯಾದ ಸಮಯಕ್ಕೆ ದೊರೆಯದೆ ಹೊದರೆ ಹಲವಾರು ರೀತಿಯ ಸಮಸ್ಯೆಗಳಿಗೆ ಜನರು ಒಳಗಾಗುತ್ತಾರೆ ಎಂದು ಡಿವೈಎಫ್‍ಐ ರಾಜ್ಯಾಧ್ಯಕ್ಷ ಮುನಿರಾಜ್ ಕಾಟಿಪಳ್ಳ ಹೇಳಿದರು.
ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್ ಪಡುಕೋಣೆ ಘಟಕ,ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಬೈಂದೂರು ತಾಲೂಕು ವತಿಯಿಂದ ನಾಡ ಗ್ರಾಮ ಪಂಚಾಯತ್ ಎದುರುಗಡೆ ಬುಧವಾರ ಹಮ್ಮಿಕೊಂಡಿದ್ದ ಕೆಎಸ್‍ಆರ್‍ಟಿಸಿ ಬಸ್ ಸಂಚಾರ ಆರಂಭಿಸಲು ಆಗ್ರಹಿಸಿ ನಡೆದ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಶಕ್ತಿ ಯೋಜನೆಯಿಂದ ಗ್ರಾಮೀಣ ಭಾಗದ ಬಡ ಮಹಿಳೆಯರು ವಂಚಿತರಾಗುತ್ತಿದ್ದಾರೆ ಈ ನಿಟ್ಟಿನಲ್ಲಿ ಸರಕಾರಿ ಬಸ್‍ಗಳನ್ನು ಓಡಿಸಲು ಸರಕಾರ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ.ಕ್ರಮ ಜರುಗಿಸದೆ ಹೋದರೆ ಮುಂದಿನ ದಿನಗಳಲ್ಲಿ ಕರಾವಳಿ ಭಾಗದ ಹೆಣ್ಣು ಮಕ್ಕಳ ಧ್ವನಿಯಾಗಿ ಹೋರಾಟ ರೂಪಗೊಳ್ಳಲಿದೆ ಎಂದರು.
ಡಿವೈಎಫ್‍ಐ ಸಂಘಟನೆಯ ಹಿರಿಯ ಮುಖಂಡ ರಾಜೀವ ಪಡುಕೋಣೆ ಮಾತನಾಡಿ ನಾಡಕ್ಕೆ ಸರಕಾರಿ ಬಸ್ ಕಲ್ಪಿಸುವುದರ ಜತೆಗೆ ಈ ಭಾಗದ ಜನರಿಗೆ ಅನುಕೂಲವಾಗುವ ದೃಷ್ಟಿಯಿಂದ ಮರವಂತೆ ಮಾರಸ್ವಾಮಿ ದೇವಸ್ಥಾನದ ಎದುರಿನ ರಸ್ತೆ ಅಭಿವೃದ್ಧಿಗೊಳಿಸಬೇಕು.ಮಾರಸ್ವಾಮಿ ದೇವಳದ ಎದುರುಗಡೆ ಸರಕಾರಿ ಬಸ್‍ಗಳನ್ನು ಶಾಶ್ವತವಾಗಿ ನಿಲ್ಲಿಸಲು ಕ್ರಮ ಜರುಗಿಸಬೇಕೆಂದರು.ಸುರೇಶ್ ಕಲ್ಲೆಗಾರ್,ಜನವಾದಿ ಮಹಿಳಾ ಸಂಘಟನೆ ಬೈಂದೂರು ತಾಲೂಕು ಅಧ್ಯಕ್ಷೆ ನಾಗರತ್ನ ನಾಡ ಮತ್ತು ಕಾರ್ಯದರ್ಶಿ ನಾಗರತ್ನ ಪಡುವರಿ,ಫಿಲಿಪ್ ಡಿಸಿಲ್ವ,ಎಚ್.ನರಸಿಂಹ,ವೆಂಕಟೇಶ ಕೋಣಿ,ನಾಡ-ಪಡುಕೋಣೆ ಘಟಕದ ಅಧ್ಯಕ್ಷ ನಾಗರಾಜ ಕುರು,ಸಂಘಟನೆಯ ಸದಸ್ಯರು ಉಪಸ್ಥಿತರಿದ್ದರು.ನಾಡ ಭಾಗಗಕ್ಕೆ ಸರಕಾರಿ ಬಸ್ ವ್ಯವಸ್ಥೆ ಕಲ್ಪಿಸುವಂತೆ ಹಾಗೂ ಇತರ ಐದು ಬೇಡಿಕೆಗಳ ಈಡೇರಿಕೆಗಾಗಿ ನಾಡ ಗ್ರಾಮ ಪಂಚಾಯತ್ ಅಧ್ಯಕ್ಷರ ಮುಖೇನ ಸಂಬಂಧಿಸಿದ ಇಲಾಖೆ ಮತ್ತು ಜಿಲ್ಲಾಧಿಕಾರಿ,ಶಾಸಕರಿಗೆ ಮನವಿಯನ್ನು ಸಲ್ಲಿಸಲಾಯಿತು.























































































































































































































































































































































































































































































































































































































































































































































































































































































































































































































































































































































































































































































































































































































































































