ನಿರ್ದೇಶಕರಾಗಿ ಸುರೇಂದ್ರ ಗುಡ್ಡೆಹೋಟೆಲ್ ಆಯ್ಕೆ

ಕುಂದಾಪುರ:ರಾಜ್ಯ ಸರಕಾರಿ ಶಿಕ್ಷಕರ ನೌಕರರ ಹಾಗೂ ಇಲಾಖೆಯಲ್ಲಿನ ಇತರರ ಗೃಹ ನಿರ್ಮಾಣ ಸಹಕಾರ ಸಂಘ (ನಿ) ಬೆಂಗಳೂರು ಅದರ ರಾಜ್ಯ ನಿರ್ದೇಶಕರಾಗಿ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಸೇನಾಪುರ ಗ್ರಾಮದ ಸುರೇಂದ್ರ ಗುಡ್ಡೆಹೋಟೆಲ್ ನಾಡ ಅವರು ಆಯ್ಕೆಯಾಗಿದ್ದಾರೆ.ಸಂಸ್ಥಾಪಕ ಅಧ್ಯಕ್ಷ ಡಾ.ವಿ.ಟಿ ವೆಂಕಟೇಶಯ್ಯ ಅವರು ಪ್ರಮಾಣ ಪತ್ರವನ್ನು ಹಸ್ತಾಂತರಿಸಿದರು.ಅಧ್ಯಕ್ಷೆ ಸುಮಿತ್ರ ಮಾರುತಿ ದುರ್ಗಿ,ಉಪಾಧ್ಯಕ್ಷ ಬಸವರಾಜು ಹಟ್ಟಿಹೊಳಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.ಸುರೇಂದ್ರ ಗುಡ್ಡೆಹೋಟೆಲ್ ಅವರು ಪ್ರಸ್ತುತ ಶ್ರೀ ಸಿದ್ದಲಿಂಗೇಶ್ವರ ಕನ್ನಡ ಪ್ರೌಢಶಾಲೆಯಲ್ಲಿ (ಮಾಗಡಿ ರಸ್ತೆ ಬೆಂಗಳೂರು ದಕ್ಷಿಣ ಜಿಲ್ಲೆ) ಅಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.






























































































































































































































































































































































































































































































































































































































































































































































































































































































































































































































































































































































































































































































































































































































































































