ರಾಷ್ಟ್ರಮಟ್ಟದ ಅಬಾಕಸ್ ಸ್ಪರ್ಧೆ:ಸಹೋದರರು ಸಾಧನೆ

ಕುಂದಾಪುರ:ಪುದುಚೇರಿಯಲ್ಲಿ ನಡೆದ 21 ನೇ ರಾಷ್ಟ್ರ ಮಟ್ಟದ ಅಬಾಕಸ್ ಮತ್ತು ಮೆಂಟಲ್ ಅರಿಥ್ಮೆಟಿಕ್ಸ್ ಸ್ಪರ್ಧೆಯಲ್ಲಿ ಭಾಗವಹಿಸಿದ ಹಟ್ಟಿಯಂಗಡಿ ಸಿದ್ಧಿ ವಿನಾಯಕ ವಸತಿ ಶಾಲೆ ಸಹೋದರ ವಿದ್ಯಾರ್ಥಿಗಳಾದ ಅನ್ವಿಶ್ ಕುಮಾರ್ ಪ್ರಥಮ ಸ್ಥಾನ ಪಡೆದು ವಿನ್ನರ್ ಪ್ರಶಸ್ತಿ ಜಯಿಸಿದ್ದಾರೆ ಹಾಗೂ ವಿನಿಶ್ ಕುಮಾರ್ ದ್ವಿತೀಯ ಸ್ಥಾನ ಪಡೆದಿದ್ದಾರೆ.ಶಿಕ್ಷಕಿ ಅನುಷಾ ಸಿ ಬಂಗೇರಾ ಗಂಗೊಳ್ಳಿ ಮತ್ತು ಕಾವ್ರಾಡಿ ವಿಜಯ್ ಕುಮಾರ್ ದಂಪತಿ ಪುತ್ರರರು.ಕುಂದಾಪುರ ಸೆಂಟರ್ ಪ್ರಸನ್ನ ಕೆ.ಬಿ,ಗಂಗೊಳ್ಳಿ ಸೆಂಟರ್ನ ಶಿಕ್ಷಕಿ ಸುನೀತಾ ತರಬೇತಿ ನೀಡಿದ್ದರು.


























































































































































































































































































































































































































































































































































































































































































































































































































































































































































































































































































































































































































































































































































































































































































