ಶ್ರೀ ಮೂಕಾಂಬಿಕಾ ಭತ್ತ ಬೆಳೆಗಾರರ ಒಕ್ಕೂಟ ಬೈಂದೂರು ವಾರ್ಷಿಕ ಮಹಾಸಭೆ:2.5 ಕೋಟಿ ರೂ ವ್ಯವಾಹಾರ:ಒಟ್ಟು 1.81 ಲಕ್ಷ ರೂ. ನಿವ್ವಳ ಲಾಭ

Share

ಕುಂದಾಪುರ:ಗ್ರಾಮೀಣ ಪ್ರದೇಶದ ಕೃಷಿಕರಿಗೆ ಅನುಕೂಲವಾಗುವ ಉದ್ದೇಶದಿಂದ ಕಳೆದ ಹನ್ನೊಂದು ವರ್ಷಗಳ ಹಿಂದೆ ಶ್ರೀ ಮೂಕಾಂಬಿಕಾ ಭತ್ತ ಬೆಳೆಗಾರರ ಒಕ್ಕೂಟವನ್ನು ಹುಟ್ಟು ಹಾಕಿ ರೈತರ ಹಿತಾಶಕ್ತಿಗೆ ಅನುಗುಣವಾಗಿ ತರಬೇತಿ ಕಾರ್ಯಕ್ರಮ,ಅಧ್ಯಾಯನ ಪ್ರವಾಸ,ಸಬ್ಸಿಡಿ ದರದಲ್ಲಿ ರಾಸಾಯನಿಕ ಗೊಬ್ಬರ ವಿತರಣೆ ಸೇರಿದಂತೆ ಮೌಲ್ಯವರ್ಧಿತ ಬೆಳೆಗಳಿಗೆ ಹೆಚ್ಚಿನ ಒತ್ತು ನೀಡುವುದರ ಮೂಲಕ ಭತ್ತ ಬೆಳೆಗಾರರ ಒಕ್ಕೂಟ ರೈತÀಪರ ಕಾರ್ಯಯೋಜನೆಗಳನ್ನು ಹಾಕಿಕೊಂಡು ಯಶಸ್ವಿಯಾಗಿ ಮುಂದುವರಿಯುತ್ತಿರುವುದು ಸಂತೋಷದ ವಿಷಯವಾಗಿದೆ ಎಂದು ಕೇಂದ್ರ ಕಛೇರಿ ಕೃಷಿ ವಿಭಾಗದ ಯೋಜನಾಧಿಕಾರಿ ಮಾರುತಿ ಗೌಡ ಹೇಳಿದರು.
ಬೈಂದೂರು ತಾಲೂಕಿನ ನಾಗೂರು ಶ್ರೀ ಗೋಪಾಲಕೃಷ್ಣ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ಶ್ರೀ ಮೂಕಾಂಬಿಕಾ ಭತ್ತ ಬೆಳೆಗಾರರ ಒಕ್ಕೂಟ ಬೈಂದೂರು ಅದರ 2025-26 ನೇ ಸಾಲಿನ ವಾರ್ಷಿಕ ಮಹಾಸಭೆನ್ನುದ್ದೇಶಿಸಿ ಅವರು ಮಾತನಾಡಿದರು.
ಮೂಕಾಂಬಿಕಾ ಭತ್ತ ಬೆಳೆಗಾರ ಒಕ್ಕೂಟದ ಪುನರಶ್ಚೇತನಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಇಲ್ಲಿ ತನಕ ಸುಮಾರು 44 ಲಕ್ಷ ರೂ. ಅನುದಾನವನ್ನು ನೀಡುವ ಮೂಲಕ ಪ್ರೆÇೀತ್ಸಾಹ ನೀಡಿದೆ.ಒಕ್ಕೂಟದ ಸದಸ್ಯರು ಭತ್ತದ ಬೆಳೆ ಮಾತ್ರವಲ್ಲದೆ ಇನ್ನಿತರ ಉತ್ಪನ್ನಗಳನ್ನು ಸೃಷ್ಟಿಸುವುದರ ಮೂಲಕ ಆರ್ಥಿಕ ವೃದ್ಧಿಯನ್ನು ಹೆಚ್ಚಿಸಲು ಮುಂದಾಗಬೇಕೆಂದರು.
ವಾರ್ಷಿಕ ಮಹಾಸಭೆ ಅಧ್ಯಕ್ಷತೆ ವಹಿಸಿದ ಶ್ರೀ ಮೂಕಾಂಬಿಕಾ ಭತ್ತ ಬೆಳೆಗಾರ ಒಕ್ಕೂಟ ಅಧ್ಯಕ್ಷ ಚಂದ್ರ ಪೂಜಾರಿ ಹೊಳ್ಮಗೆ ಮಾತನಾಡಿ,ರೈತರಿಗೆ ನೆರವಾಗುವ ಉದ್ದೇಶದಿಂದ ಭತ್ತದ ಬೆಳೆಗಾರ ಒಕ್ಕೂಟವನ್ನು ಹುಟ್ಟು ಹಾಕಲಾಗಿದ್ದು.ಸಂಘ ಆರಂಭಗೊಂಡ ಎಂಟು ವರ್ಷಗಳ ಅವಧಿ ವರೆಗೆ ಸೇವಾ ಮನೋಭಾವದಲ್ಲಿ ಕೆಲಸವನ್ನು ಮಾಡಿಕೊಂಡು ಬರಲಾಗುತ್ತಿದ್ದು.ರೈತರ ಬೆಳೆಗೆ ಉತ್ತಮ ಮೌಲ್ಯವನ್ನು ದೊರಕಿಸಿಕೊಡುವ ನೆಲೆಯಲ್ಲಿ ಕಳೆದ ಮೂರು ವರ್ಷಗಳಿಂದ ಭತ್ತದ ಖರೀದಿಯನ್ನು ಮಾಡುತ್ತಿದ್ದೇವೆ.15 ಸಾವಿರ ದಿಂದ ಆರಂಭಗೊಂಡ ವ್ಯವಾಹಾರ ಈ ಸಾಲಿನಲ್ಲಿ 2.5 ಕೋಟಿ ರೂ ವ್ಯವಾಹಾರವನ್ನು ನಡೆಸಿದ್ದು.ಒಟ್ಟು 1.81 ಲಕ್ಷ ರೂ. ನಿವ್ವಳ ಲಾಭವನ್ನು ಗಳಿಸಲಾಗಿದೆ.ಒಂದೆ ಸೂರಿನಡಿ ರೈತರಿಗೆ ಸೌಲಭ್ಯಗಳು ದೊರಕಬೇಕು ಎನ್ನುವ ನೆಲೆಯಲ್ಲಿ ಕೃಷಿ ಮಾರಾಟ ಮಳಿಗೆಯನ್ನು ಮಾಡುವ ಆಲೋಚನೆ ಇದ್ದು.ಸ್ವಂತ ಭೂ ಖರೀದಿಸಲು ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ.ಎಲ್ಲರೂ ಸಹಕಾರ ನೀಡಬೇಕೆಂದು ಕೇಳಿಕೊಂಡರು.
ಸಂಘದ ಉಪಾಧ್ಯಕ್ಷ ಮಂಜಯ್ಯ ಶೆಟ್ಟಿ ಹೊಸೂರು,ನಿರ್ದೇಶಕರಾದ ರವಿರಾಜ್ ಪೂಜಾರಿ ಕೊಡೇರಿ,ಸುರೇಂದ್ರ ನಾಯ್ಕ ಹೇರೂರು,ಶಿವರಾಮ ಶೆಟ್ಟಿ ಕಮ್ಮಾರಕೊಡ್ಲು ಹೊಸಾಡು,ಗೀತಾ ಬಡಾಕೆರೆ,ಕಿರಣ್‍ಪೂಜಾರಿ ಕುಂದಾಪುರ,ಲಲಿತಾ ನಾಗೂರು,ರಾಜು ಪೂಜಾರಿ ನಾಯ್ಕನಕಟ್ಟೆ ಮತ್ತು ಸದಸ್ಯರು,ಕೃಷಿಕರು ಹಾಗೂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರಾಜೇಂದ್ರ ಬಿ.ಎನ್,ಯೋಜನಾಧಿಕಾರಿ ಸಂಜಯ್ ನಾಯ್ಕ್,ಸಹಾಯಕ ಪ್ರಬಂಧಕ ಕಿರಣ್ ಕೆ.ಬಿ,ವ್ಯವಹಾರ ಅಭಿವೃದ್ಧಿ ಪ್ರತಿನಿಧಿಗಳಾದ ಗಣೇಶ ದೇವಾಡಿಗ ಮತ್ತು ನಿತೀನ್,ಸಿಬ್ಬಂದಿಗಳು,ಸೇವಾ ಪ್ರತಿನಿಧಿಗಳು,ರಾಜೀವ ಶೆಟ್ಟಿ ಹೊಸೂರು,ಸುಮಂಗಲ ಕಾರಂತ ಉಪಸ್ಥಿತರಿದ್ದರು.ಮೂಕಾಂಬಿಕಾ ಭತ್ತ ಬೆಳೆಗಾರರ ಒಕ್ಕೂಟದ ವತಿಯಿಂದ ಅತಿಹೆಚ್ಚು ಭತ್ತ ಮಾರಾಟ,ಅಕ್ಕಿ ಖರೀದಿ ಹಾಗೂ ದಿನಸಿ ಉತ್ಪನ್ನಗಳ ಖರೀದಿ ಮತ್ತು ಗೊಬ್ಬರ ಖರೀದಿ ಮಾಡಿದ ರೈತರನ್ನು ಗೌರವಿಸಲಾಯಿತು.ಒಕ್ಕೂಟದ ಸಿಇಒ ರಾಜೇಂದ್ರ ಬಿ.ಎನ್ ಸ್ವಾಗತಿಸಿ,ನಿರೂಪಿಸಿದರು.ವಾರ್ಷಿಕ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು.
ಕರಾವಳಿ ಭಾಗದಲ್ಲಿ ಕೊಚ್ಚಲಕ್ಕಿ ಉಣ್ಣುವವರು ಸೇರಿದಂತೆ ಬಾಸುಮತಿ ಮತ್ತು ಸೋನಾ ಮಸೂರಿ ಅನ್ನ ಉಣ್ಣವರ ಸಂಖ್ಯೆ ಕೂಡ ಅಧಿಕವಿದೆ.ಆವೊಂದು ನೆಲೆಯಲ್ಲಿ ಮೂಕಾಂಬಿಕಾ ಭತ್ತದ ಬೆಳೆಗಾರರ ಒಕ್ಕೂಟದ ವತಿಯಿಂದ ಹೊಸ ಬೆಳವಣಿಗೆ ಪರಿಚಯ ಮಾಡಬೇಕು,ಬೆಳೆ ಪರಿವರ್ತನೆ ಮೂಲಕ ರೈತರಿಗೂ ಲಾಭವಾಗಲಿದೆ ಎಂದು ಕೃಷಿಕ ಸುಬ್ಬಣ್ಣ ಶೆಟ್ಟಿ ಅಭಿಪ್ರಾಯವನ್ನು ಹಂಚಿಕೊಂಡರು.

Advertisement

Share

Leave a comment

Your email address will not be published. Required fields are marked *

You cannot copy content of this page