ಲಯನ್ ಆಸರೆ ಯೋಜನೆ ಮನೆ ನಿರ್ಮಾಣ ಅಶಕ್ತರಿಗೆ ನೆರವು ವಿತರಣೆ

ಮುಳ್ಳಿಕಟ್ಟೆ:ಲಯನ್ಸ್ ಕ್ಲಬ್ ಹಕ್ಲಾಡಿ ಚೆನ್ನಕೇಶವ ಜೋನ್ 2 ರೀಜನ್ 6 ಡಿಸ್ಟ್ರಿಕ್ಟ್ 317 ಸಿ
ವತಿಯಿಂದ ಲಯನ್ ಆಸರೆ ಯೋಜನೆ ಮನೆ ನಿರ್ಮಾಣ ಅಶಕ್ತರ ನೆರವಿಗೆ ಕಾರ್ಯಕ್ರಮ, ಸನ್ಮಾನ ಹಾಗೂ ಶ್ರೀ ಗುರುಪ್ರಸಾದಿತ ಯಕ್ಷಗಾನ ಮಂಡಳಿ ಸಾಲಿಗ್ರಾಮ ಮೇಳದವರಿಂದ ಯಕ್ಷಗಾನ ಕಾರ್ಯಕ್ರಮ ಮುಳ್ಳಿಕಟ್ಟೆ ನಗುಸಿಟಿ ಮೈದಾನದಲ್ಲಿ ಶನಿವಾರ ನಡೆಯಿತು.
ಲಯನ್ ಜಿಲ್ಲಾ ಗವರ್ನರ್ ಸಪ್ನಾ ಸುರೇಶ್ ಅವರು ಫಲಾನುಭವಿಗಳಿಗೆ ಮನೆ ನಿರ್ಮಾಣದ ನೆರವು ಪತ್ರವನ್ನು ವಿತರಿಸಿ ಮಾತನಾಡಿ,ಸಂಘ ಸಂಸ್ಥೆಗಳ ಗುರಿ ದೈಯೋದ್ದೇಶ ಈಡೇರಿಕೆ ಆದಾಗ ಸಮಾಜಕ್ಕೆ ಒಳಿತಾಗಲಿದೆ.ಆ ನಿಟ್ಟಿನಲ್ಲಿ
ಮಹಿಳೆಗೆ ನೆಲೆಯನ್ನು ಒದಗಿಸಿ ಕೊಡುವ ನೆಲೆಯಲ್ಲಿ ಲಯನ್ಸ್ ಕ್ಲಬ್ ಹಕ್ಲಾಡಿ ಚೆನ್ನಕೇಶವ ಕೈಗೊಂಡಿರುವ ಕಾರ್ಯ ಶ್ಲಾಘನೀಯವಾದುದು ಎಂದು ಹೇಳಿದರು.
ಲಯನ್ಸ್ ಕ್ಲಬ್ ಹಕ್ಲಾಡಿ ಚೆನ್ನಕೇಶವ ಅಧ್ಯಕ್ಷ ಸುರೇಶ್ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.ಎಲ್ ಎನ್ ಪಿಎಂಜೆಎಫ್ ಸುರೇಶ ಪ್ರಭು ಪಿಡಿಜೆ, ಎಲ್.ಎನ್ ಪಿಎಂಜೆಎಫ್ ರಾಜೀವ್ ಕೋಟ್ಯಾನ್, ಎಲ್.ಎನ್ ಪಿಎಂಜೆಎಫ್ ಹರಿಪ್ರಸಾದ್ ರೈ, ಎಲ್.ಎನ್ ಪಿಎಂಜೆಎಫ್ ಚಂದ್ರಶೇಖರ ಕಲ್ಪತರು, ಲಯನ್ ಜಿಲ್ಲಾ ಸಾಂಸ್ಕೃತಿಕ ಸಂಯೋಜಕ ರಂಜನ್ ಕಲ್ಕೂರ,ಎಂ.ಎಂ ಲಾಂಡ್ರಿ ದುಬೈ ಉದ್ಯಮಿ ಮಂಜು ಪೂಜಾರಿ ಸೇನಾಪುರ,ಹಕ್ಲಾಡಿ ಕ್ಲಬಿನ ಕಾರ್ಯದರ್ಶಿ ಲ.ಚಂದ್ರಶೇಖರ ಶೆಟ್ಟಿ, ಕೋಶಾಧಿಕಾರಿ ಸಂತೋಷ ಮೊಗವೀರ ಮತ್ತು ಕ್ಲಬ್ಬಿನ ಸದಸ್ಯರು, ಯಕ್ಷಾಭಿಮಾನಿಗಳು ಉಪಸ್ಥಿತರಿದ್ದರು.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಕೋಡಿ ಗಂಗಾಧರ ಪೂಜಾರಿ ಮತ್ತು ಯುವ ಬಂಟರ ಸಂಘ ಕುಂದಾಪುರ ಸ್ಥಾಪಕಾಧ್ಯಕ್ಷ ಅಂಪಾರು ನಿತ್ಯಾನಂದ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಡಾ ಸ್ವಾಗತಿಸಿ,ನಿರೂಪಿಸಿದರು.
ಸಾಲಿಗ್ರಾಮ ಮೇಳದವರಿಂದ ಯಕ್ಷಗಾನ ಪ್ರದರ್ಶನ ನಡೆಯಿತು.
























































































































































































































































































































































































































































































































































































































































































































































































































































































































































































































































































































































































































































































































































































































































































