ತ್ರಾಸಿ:ನಿಂತ್ತಿದ್ದ ಲಾರಿಯಲ್ಲಿ ಚಾಲಕನ ಶವ ಪತ್ತೆ

Share

ಕುಂದಾಪುರ:ತಾಲೂಕಿನ ತ್ರಾಸಿ ರಾಷ್ಟ್ರೀಯ ಹೆದ್ದಾರಿ 66 ರ ಫ್ಲೈಓವರ್ ಸಮೀಪ ರಸ್ತೆ ಬದಿಯಲ್ಲಿ ನಿಂತ್ತಿದ್ದ ಲಾರಿಯಲ್ಲಿ ಲಾರಿ ಚಾಲಕನ ಶವ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಘಟನೆ ಶುಕ್ರವಾರ ನಡೆದಿದೆ.
ಸಮಯಕ್ಕೆ ಸರಿಯಾಗಿ ಲಾರಿ ನಿಗದಿತ ಸ್ಥಳವನ್ನು ತಲುಪದೆ ಇದ್ದ ಹಿನ್ನೆಲೆಯಲ್ಲಿ ಲಾರಿ ಮಾಲೀಕರು ಲಾರಿಯ ಪತ್ತೆಗೆ ಮುಂದಾಗಿದ್ದಂತಹ ಸಂದರ್ಭದಲ್ಲಿ ತ್ರಾಸಿ ಫ್ಲೈವರ್ ಸಮೀಪ ರಾಷ್ರೀಯ ಹೆದ್ದಾರಿ 66 ರಲ್ಲಿ ಲಾರಿ ನಿಂತಿರುವುದು ಪತ್ತೆಯಾಗಿದೆ.ಗಂಗೊಳ್ಳಿ ಠಾಣೆ ಪೆÇಲೀಸ್‍ರು ರಸ್ತೆ ಬದಿಯಲ್ಲಿ ನಿಂತ್ತಿರುವ ಲಾರಿಯನ್ನು ತಪಾಸಣೆ ಮಾಡುತ್ತಿದ್ದ ವೇಳೆ ಲಾರಿ ಒಳಗೆ ಚಾಲಕ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿರುವುದು ಕಂಡು ಬಂದಿದೆ.ಶವವನ್ನು ಕುಂದಾಪುರ ಸರಕಾರಿ ಆಸ್ಪತ್ರೆ ಶಿತಲೀಕರಣ ಘಟಕಕ್ಕೆ ರವಾನಿಸಲಾಗಿದ್ದು.ಹೆಚ್ಚಿನ ತನಿಖೆ ಯಿಂದ ಸತ್ಯಾಂಶ ಹೊರ ಬೀಳಲಿದೆ.ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಕಾಳಿದಾಸ ನಗರದ ನಿವಾಸಿ ಮನ್ಸೂರ್ ಅಲಿ ಸಾಹಬ್ (45) ಎಂದು ತಿಳಿದು ಬಂದಿದೆ.

Advertisement

Share

Leave a comment

Your email address will not be published. Required fields are marked *

You cannot copy content of this page