ಬ್ರಹ್ಮಾವರ:ವಿದ್ಯಾಲಕ್ಷ್ಮೀ ಕಾಲೇಜಿನಲ್ಲಿ ನಶ ಮುಕ್ತ ಭಾರತ ಕಾರ್ಯಕ್ರಮ ಆಯೋಜನೆ

ಬ್ರಹ್ಮಾವರ:ರೆಡ್ ಕ್ರಾಸ್ ವಿಭಾಗದ ವತಿಯಿಂದ ಬ್ರಹ್ಮಾವರ ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ನಶ ಮುಕ್ತ ಭಾರತ ಕಾರ್ಯಕ್ರಮ ನಡೆಯಿತು.
ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿತ್ತು.ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಬ್ರಹ್ಮಾವರ ಆರಕ್ಷಕ ಠಾಣೆಯ ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್ ಆದ ಶ್ರೀ ವಿಠ್ಠಲ್ ರವರು ಮತ್ತು ಶ್ರೀ ಜಯಕರರವರು ವಹಿಸಿದ್ದರು.
ಬ್ರಹ್ಮಾವರ ಪೊಲೀಸ್ ಠಾಣೆ ಸಬ್ ಇನ್ಸ್ಪೆಕ್ಟರ್ ವಿಠ್ಠಲ್ ಅವರು ಮಾತನಾಡಿ,ಮಾದಕ ವಸ್ತು ಸೇವನೆಯಿಂದ ಆಗುವ ದುಷ್ಪರಿಣಾಮದ ಕುರಿತು ಹಾಗೂ ಅದರಿಂದಾಗುವ ತೊಂದರೆ ಕುರಿತು ವಿವರಿಸಿದರುಯುವ ಜನತೆಯ ಜೀವನ ಸುಂದರವಾಗಿ ರೂಪಗೊಳ್ಳಬೇಕಾದರೆ ಮಾದಕ ವಸ್ತುಗಳ ಸೇವನೆ ಯಿಂದ ದೂರ ಉಳಿಯಬೇಕು ಎಂದು ಕಿವಿಮಾತು ಹೇಳಿದರು.
ಜಯಕರ ಮಾತನಾಡಿ, ಸೈಬರ್ ಅಪರಾಧದಿಂದ ಮೋಸ ಹೋಗುವ ರೀತಿ ಹಾಗೂ ಒಟಿಪಿ ದುರ್ಬಳಕೆ, ಅನಾಮಧೇಯ ಕರೆಗಳಿಂದ ಆಗುವ ವಂಚನೆ ಕುರಿತು ಮಾಹಿತಿ ನೀಡಿದರು.
ವಿದ್ಯಾಲಕ್ಷ್ಮೀ ಕಾಲೇಜಿನ ಸಂಸ್ಥಾಪಕ ಸುಬ್ರಹ್ಮಣ್ಯ ಮತ್ತು ಪ್ರಿನ್ಸಿಪಾಲ್ ಡಾ.ಸೀಮಾ ಭಟ್ ಕಾಲೇಜಿನ ಆಡಳಿತಾಧಿಕಾರಿ ಮಮತಾ, ವೈಸ್ ಪ್ರಿನ್ಸಿಪಾಲ್ ಸುಜಾತಾ,ಕಾಲೇಜಿನ ಸಾಂಸ್ಕೃತಿಕ ಅಧ್ಯಕ್ಷೆ ರಾಝಿಕ, ಕಾಲೇಜಿನ ರೆಡ್ ಕ್ರಾಸ್ ವಿಭಾಗದ ಮುಖ್ಯಸ್ಥ ಶೈಲಾ ಉಪಸ್ಥಿತರಿದ್ದರು.ನಶ ಮುಕ್ತ ಭಾರತ ಎಂಬ ವಿಷಯದ ಕುರಿತು ಘೋಷಣ ವಾಕ್ಯಗಳನ್ನು ಬರೆಯುವ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು.
ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು.ತೃತೀಯ ಆಹಾರ ವಿಭಾಗದ ವಿದ್ಯಾರ್ಥಿನಿ ರಕ್ಷಿತಾ ನಡೆಸಿಕೊಟ್ಟರು.ವಿದ್ಯಾರ್ಥಿನಿ ಐಶ್ವರ್ಯ ತೃತೀಯ ವ್ಯವಹಾರ ಶಾಸ್ತ್ರ ವಿಭಾಗ ಸ್ವಾಗತಿಸಿದರು.






















































































































































































































































































































































































































































































































































































































































































































































































































































































































































































































































































































































































































































































































































































































































































