ರಾಜ್ಯ ಮಟ್ಟದ ಅಬಾಕಸ್ ಸ್ಪರ್ಧೆ:ವಿನಿಶ್ ಕುಮಾರ್,ಅನ್ವಿಶ್ ಕುಮಾರ್ ಗೆ ಪ್ರಥಮ ಸ್ಥಾನ

ಕುಂದಾಪುರ:ಐಡಿಯಲ್ ಪ್ಲೇ ಆಬಾಕಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ವತಿಯಿಂದ ಮೂಡುಬಿದ್ರೆ ಆಳ್ವಾಸ್ ಪಿಯು ಕ್ಯಾಂಪಸ್‍ನಲ್ಲಿ ನಡೆದ 20ನೇ ರಾಜ್ಯ ಮಟ್ಟದ ಅಬಾಕಸ್ ಮತ್ತು ಮೆಂಟಲ್ ಅರಿಥ್ಮೆಟಿಕ್ಸ್ ಕಾಂಪಿಟೇಶನ್‍ನಲ್ಲಿ ಭಾಗವಹಿಸಿದ ಸಹೋದರರಾದ ವಿನಿಶ್ ಕುಮಾರ್ ಮತ್ತು ಅನ್ವಿಶ್ ಕುಮಾರ್ ಫ್ರಥಮ ಸ್ಥಾನ ಪಡೆದು ವಿಶೇಷ ರೀತಿಯಲ್ಲಿ ಸಾಧನೆ ಮಾಡಿದ್ದಾರೆ.ಕಾವ್ರಾಡಿ ವಿಜಯ ಕುಮಾರ್ ಮತ್ತು ಶಿಕ್ಷಕಿ ಅನುಷಾ ಸಿ ಬಂಗೇರಾ ಗಂಗೊಳ್ಳಿ ಅವರ ಪುತ್ರರು.ಹಟ್ಟಿಅಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆ 6ನೇ ಮತ್ತು 2ನೇ ತರಗತಿ ವಿದ್ಯಾರ್ಥಿಗಳು.ಕುಂದಾಪುರ ಅಬಾಕಸ್ ಸಂಸ್ಥೆಯ ಪ್ರಸನ್ನ ಕೆ.ಬಿ ಹಾಗೂ ಗಂಗೊಳ್ಳಿ ಸೆಂಟರ್‍ನ ಶಿಕ್ಷಕಿ ಸುನೀತಾ ಅವರು ತರಬೇತಿ ನೀಡಿದ್ದರು.ರಾಜ್ಯದ ವಿವಿಧ ಜಿಲ್ಲೆಗಳಿಂದ ಒಟ್ಟು 2000 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.















































































































































































































































































































































































































































































































































































































































































































































































































































































































































































































































































































































































































































































































































































































































































