ಘನತ್ಯಾಜ್ಯ ನಿರ್ವಹಣೆ ಮಾಹಿತಿ ಕಾರ್ಯಕ್ರಮ:
ಕುಂದಾಪುರ:ಶ ಓಮಿ ಇಂಡಿಯಾ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್ ಸಿ.ಎಸ್.ಆರ್ ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಸ್ವಚ್ಛ ಕರಾವಳಿ ಮಿಷನ್ ತಂಡದ ವತಿಯಿಂದ ಬೈಂದೂರು ವಲಯದ ಸರಕಾರಿ ಹಿರಿಯ ಪ್ರಾಥಮಿಕ ಅರೆಹೊಳೆ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ವೈಜ್ಞಾನಿಕ ರೀತಿಯ ಘನತ್ಯಾಜ್ಯ ನಿರ್ವಹಣೆ ಬಗ್ಗೆ ಮಾಹಿತಿ ಕಾರ್ಯಕ್ರಮ ಬುಧವಾರ ನಡೆಯಿತು.
ಅರೆಹೊಳೆ ಶಾಲೆ ಮುಖ್ಯೋಪಾಧ್ಯಾಯ ವೆಂಕಟ ಆಚಾರ್ಯ ಮಾತನಾಡಿ,ನಮ್ಮೂರಿನ ಸ್ವಚ್ಛತೆ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದರ ಮುಖೇನ ಸ್ವಚ್ಛ ಪರಿಸರ ನಿರ್ಮಾಣ ಮಾಡುವಲ್ಲಿ ಎಲ್ಲರೂ ಭಾಗಿಯಾಗಬೇಕು ಎಂದು ಹೇಳಿದರು.
ವಿಡಿಯೋ ಮತ್ತು ಚಟುವಟಿಕೆ ಮೂಲಕ ಕಸದ ದುಷ್ಪರಿಣಾಮಗಳು ಸರಿಯಾದ ವಿಂಗಡಣೆ ಮತ್ತು ವಿಲೇವಾರಿ.ಕಸದ ನಿರ್ವಹಣೆಯಲ್ಲಿ ಜನ ಸಾಮಾನ್ಯರು,ಅಧಿಕಾರಿಗಳು ಹಾಗೂ ಸಂಗ್ರಾಹಕರ ಕರ್ತವ್ಯದ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಯಿತು.ಈ ಸಂದರ್ಭದಲ್ಲಿ ನಾವುಂದ ಘನತ್ಯಾಜ್ಯ ನಿರ್ವಹಣೆ ಮೇಲ್ವಿಚಾರಕರು,ಸಾಹಸ್ ಸಂಸ್ಥೆ ಸಿಬ್ಬಂದಿಗಳು,ಶಾಲಾ ಶಿಕ್ಷಕವೃಂದವರು, ಉಪಸ್ಥಿತರಿದ್ದರು.ಶ ಓಮಿ ಇಂಡಿಯಾ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್ ಸಿ.ಎಸ್.ಆರ್ ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಸ್ವಚ್ಛ ಕರಾವಳಿ ಮಿಷನ್ ತಂಡವು ಬೈಂದೂರು ತಾಲೂಕಿನ ನಾವುಂದ ಗ್ರಾಮ ವ್ಯಾಪ್ತಿಯ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಅರಿವಿನ ಆಂದೋಲನ ಕಾರ್ಯಕ್ರಮವನ್ನು ಗಣನೀಯ ಬದಲಾವಣೆ ಮೂಲಕ ಮುಗಿಸಿದೆ.
















































































































































































































































































































































































































































































































































































































































































































































































































































































































































































































































































































































































































































































































































































































































































