ಗಗನ್ ಗಣಪತಿ ಭಟ್ಗೆ ಪ್ರಥಮ ಸ್ಥಾನ
ಮುಳ್ಳಿಕಟ್ಟೆ:ಐಡಿಯಲ್ ಪ್ಲೇ ಆಬಾಕಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ವತಿಯಿಂದ ಮೂಡುಬಿದ್ರೆ ಆಳ್ವಾಸ್ ಪಿಯು ಕ್ಯಾಂಪಸ್ನಲ್ಲಿ ನಡೆದ 20ನೇ ರಾಜ್ಯ ಮಟ್ಟದ ಅಬಾಕಸ್ ಮತ್ತು ಮೆಂಟಲ್ ಅರ್ಥಮೆಟಿಕ್ ಕಾಂಪಿಟೇಶನ್ನಲ್ಲಿ ಭಾಗವಹಿಸಿದ ತ್ರಾಸಿ ಡಾನ್ ಬಾಸ್ಕೊ ಶಾಲೆ ನಾಲ್ಕನೇ ತರಗತಿ ವಿದ್ಯಾರ್ಥಿ,ಕೆಸಿಡಿಸಿ ಅಧಿಕಾರಿ ಗಣಪತಿ ಎಸ್ ಭಟ್ ಮತ್ತು ಶಿಕ್ಷಕಿ ಗಂಗಾ ಗಣಪತಿ ಭಟ್ ಅವರ ಪುತ್ರ ಗಗನ್ ಗಣಪತಿ ಭಟ್ ಪ್ರಥಮ ಸ್ಥಾನ ಪಡೆದಿದ್ದಾರೆ.ಶಿಕ್ಷಕರಾದ ಪ್ರಸನ್ನ ಕೆ.ಬಿ ಮತ್ತು ಮಹಾಲಕ್ಷ್ಮೀ,ದೀಪಾ ಮರವಂತೆ ತರಬೇತಿ ನೀಡಿದ್ದರು.ರಾಜ್ಯದ ವಿವಿಧ ಜಿಲ್ಲೆಗಳಿಂದ ಒಟ್ಟು 2000 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.














































































































































































































































































































































































































































































































































































































































































































































































































































































































































































































































































































































































































































































































































































































































































