ಕಾಂತಾರ ಚಾಪ್ಟರ್ 1-ಸಿನಿಮಾದಲ್ಲಿ ಸಮೀಕ್ಷಾ ಹಕ್ಲಾಡಿ ಅಭಿನಯ


ಕುಂದಾಪುರ:ಕಾಂತಾರ ಚಾಪ್ಟರ್ 1 ಸಿನಿಮಾದ ಮುಖ್ಯ ಪಾತ್ರದಲ್ಲಿ ಬೈಂದೂರು ವಲಯದ ಸರಕಾರಿ ಹಿರಿಯ ಪ್ರಾಥಮಿಕ ಗುಜ್ಜಾಡಿ ಶಾಲೆ 7ನೇ ತರಗತಿ ವಿದ್ಯಾರ್ಥಿನಿ ಹಕ್ಲಾಡಿ ಗ್ರಾಮದ ನಿವಾಸಿ ಸುರೇಶ ಹಕ್ಲಾಡಿ ಅವರ ಪುತ್ರಿ ಸಮೀಕ್ಷಾ ಸುರೇಶ್ ಹಕ್ಲಾಡಿ ಅವರು ಅಭಿನಯಿಸಿದ್ದಾರೆ.ತಾಂಡವಂ ಡಾನ್ಸ್ ಸ್ಟುಡಿಯೋದಲ್ಲಿ ಸೀನಿಯರ್ ವಿಭಾಗದಲ್ಲಿ ಡಾನ್ಸ್ ಅಭ್ಯಾಸ ಮಾಡುತ್ತಿದ್ದಾರೆ.ಭತರ ನಾಟ್ಯವನ್ನು ಸೀನಿಯರ್ ವಿಭಾಗದಲ್ಲಿ ವಿದುಷೀ ಭಾಗೀರಥಿ ಎಮ್ ರಾವ್ ಮತ್ತು ಕರ್ನಾಟಕ ಶಾಸ್ತ್ರೀಯ ಸಂಗೀತ ಜೂನಿಯರ್ ವಿಭಾಗದಲ್ಲಿ ಭಾಗ್ಯೇಶ್ವರಿ ಅವರಲ್ಲಿ ಕಲಿಯುತ್ತಿದ್ದಾರೆ.ಯಕ್ಷಗಾನ ಹಾಗೂ ಇನ್ನಿತರ ಚಟುವಟಿಕೆಯಲ್ಲಿ ತೊಡಗಿಕೊಂಡಿರುವ ಸಮೀಕ್ಷಾ ಸುರೇಶ್ ಹಕ್ಲಾಡಿ 1 ರಿಂದ 5ನೇ ತರಗತಿ ವರೆಗೆ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಹಕ್ಲಾಡಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದರು.






















































































































































































































































































































































































































































































































































































































































































































































































































































































































































































































































































































































































































































































































































































































































































