ಧರಣಿ ಸಂಜೀವಿನಿ ಒಕ್ಕೂಟ ವಾರ್ಷಿಕ ಮಹಾಸಭೆ


ಕುಂದಾಪುರ:ಜಿಲ್ಲಾ ಪಂಚಾಯಿತಿ ಉಡುಪಿ,ತಾಲೂಕು ಪಂಚಾಯಿತಿ ಬೈಂದೂರು,ಕೌಶಲಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ,ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನ ಸಂಜೀವಿನಿ ಸಹಕಾರದಲ್ಲಿ ಧರಣಿ ಸಂಜೀವಿನಿ ನಾಡ ಗ್ರಾಮ ಪಂಚಾಯತಿ ಮಟ್ಟದ ಒಕ್ಕೂಟ ಆಶ್ರಯದಲ್ಲಿ ವಾರ್ಷಿಕ ಮಹಾಸಭೆ ನಾಡ ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ನಡೆಯಿತು.
ಒಕ್ಕೂಟದ ಅಧ್ಯಕ್ಷೆ ಜಯಂತಿ ಬಡಾಕೆರೆ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮ ಉದ್ಘಾಟಿಸಿದರು.ಸಂಪನ್ಮೂಲ ವ್ಯಕ್ತಿ ಸಾಂತ್ವನ ಕೇಂದ್ರದ ನಿರಂಜನಿ ಲಿಂಗತ್ವದ ಕುರಿತು ಮಾಹಿತಿ ನೀಡಿದರು.ರುಡ್ ಸೆಟ್ ಸಂಸ್ಥೆ ನಿರ್ದೇಶಕ ಬೊಮ್ಮಾಯಿ,ಕೆನರಾ ಆರ್ಥಿಕ ಸಾಕ್ಷರತಾ ಸಂಸ್ಥೆ ಆಶಾಲತ ಸ್ವ ಉದ್ಯೋಗ ಮಾಹಿತಿ ಹಾಗೂ ಸಿಎಚ್‍ಒ ಲವಿನಾ ಡಿ ಸೋಜ ಆರೋಗ್ಯ ಮಾಹಿತಿ ನೀಡಿದರು.ಒಕ್ಕೂಟದ ಪದಾಧಿಕಾರಿಗಳು,ಪಶು ಸಖಿ,ಸಂಜೀವಿನಿ ಸಂಘದ ಸದಸ್ಯರು,ಶ್ರೀ ಕುಮಾರ್ ಉಪಸ್ಥಿತರಿದ್ದರು.ನಾನಾ ವಲಂiÀiದಲ್ಲಿ ಸಾಧನೆಗೈದ ಮಹಿಳೆಯರನ್ನು ಗೌರವಿಸಲಾಯಿತು.ಬೈಂದೂರು ತಾಲೂಕು ವ್ಯವಸ್ಥಾಪಕ ಮಹೇಂದ್ರ ಪ್ರಾಸ್ತಾವಿಕವಾಗಿ ಮಾತನಾಡಿದರು.ಎಲ್‍ಸಿಆರ್‍ಪಿ ಗೀತಾ ಸ್ವಾಗತಿಸಿದರು.ಎಂಬಿಕೆ ಸುಚಿತ್ರಾ ಕೆ.ಎಸ್ ದೇವಾಡಿಗ ವರದಿ ಮಂಡಿಸಿದರು.ಎಲ್‍ಸಿಆರ್‍ಪಿ ನಾಗರತ್ನ ನಿರೂಪಿಸಿದರು.ನಾಗರತ್ನ ವಂದಿಸಿದರು.