ಓರಿಯೆಂಟೆಷನ್ ಕಾರ್ಯಕ್ರಮ ಉದ್ಘಾಟನೆ:ಓದಿನಲ್ಲಿ ನಿರಂತರತೆ ಕಾಪಾಡಿಕೊಳ್ಳುವುದು ಮುಖ್ಯ-ಸಂಸ್ಥಾಪಕ ಸುಬ್ರಹ್ಮಣ್ಯ


ಕುಂದಾಪುರ:ಬ್ರಹ್ಮವಾರ ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆಯಲ್ಲಿನ ಪ್ರಥಮ ವರ್ಷದ ವಿದ್ಯಾರ್ಥಿಗಳಿಗಾಗಿ ಓರಿಯೆಂಟೆಷನ್ ಕಾರ್ಯಕ್ರಮವನ್ನು ಗುರುವಾರ ಆಯೋಜಿಸಲಾಯಿತು.
ಸಂಸ್ಥೆಯ ಸಂಸ್ಥಾಪಕ ಸುಬ್ರಹ್ಮಣ್ಯ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಪೋಷಕರ ಜವಾಬ್ದಾರಿ ಹಾಗೂ ಕಾಲೇಜಿನಲ್ಲಿರುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿ ಮಾತನಾಡಿ,ಶಿಸ್ತು ಸಂಯಮ ಆತ್ಮವಿಶ್ವಾಸವನ್ನು ಹೊಂದಿರುವುದರಿಂದ ಉತ್ತಮ ವಿದ್ಯಾರ್ಥಿ ಆಗುವುದರ ಜತೆಗೆ ಗುರಿಯನ್ನು ಕೂಡ ಸಾಧಿಸಲು ಸಾಧ್ಯವಿದೆ.ಓದಿನಲ್ಲಿ ನಿರಂತರತೆಯನ್ನು ಕಾಪಾಡಿಕೊಳ್ಳುವುದು ಮುಖ್ಯ ಎಂದು ಅಭಿಪ್ರಾಯಪಟ್ಟರು.
ಕಾಲೇಜಿನ ಪ್ರಿನ್ಸಿಪಾಲ್ ಡಾ.ಸೀಮಾ ಜಿ ಭಟ್ ಮಾತನಾಡಿ.ಕಾಲೇಜಿನಲ್ಲಿರುವ ಲಭ್ಯವಿರುವ ಕೋರ್ಸ್‍ಗಳ ಕುರಿತು ಹಾಗೂ ಉಪನ್ಯಾಸಕರ ಪರಿಚಯ ವಿದ್ಯಾರ್ಥಿಗಳಿಗೆ ನೀಡಿದರು.ವಿಶ್ವವಿದ್ಯಾನಿಲಯದ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ಕಾಲೇಜಿನ ವಿದ್ಯಾರ್ಥಿಗಳ ಸಾಧನೆಯನ್ನು ಪ್ರಶಂಶಿಸಿದರು.ಕಾಲೇಜಿನ ನಿರ್ದೇಕಿ ಮಮತಾ,ವೈಸ್ ಪ್ರಿನ್ಸಿಪಾಲ್ ಸುಜಾತಾ ಉಪಸ್ಥಿತರಿದ್ದರು.ಆಹಾರ ವಿಭಾಗದ ಉಪನ್ಯಾಸಕಿ ಸಾಕ್ಷಿತಾ ಸ್ವಾಗತಿಸಿದರು.ವಾಣಿಜ್ಯ ಶಾಸ್ತ್ರ ಉಪನ್ಯಾಸಕಿ ಪ್ರಿಯ ನಿರೂಪಿಸಿದರು.ಕನ್ನಡ ವಿಭಾಗದ ಉಪನ್ಯಾಸಕ ವಿಕಾಸ್ ಮೇಟಿ ವಂದಿಸಿದರು.