ಗಾಳಿ ಆರ್ಭಟಕ್ಕೆ ನಲುಗಿದ ಕುಂದಾಪ್ರ

ಕುಂದಾಪುರ:ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಬಿಸಿದ ಗಾಳಿ ಅಬ್ಬರಕ್ಕೆ ಅಕ್ಷರಹ ಸಹ ಕುಂದಾಪ್ರ ಮತ್ತು ಬೈಂದೂರು ತಾಲೂಕಿನ ಪ್ರದೇಶಗಳು ನಲುಗಿವೆ.ಆರ್ಭಟಿಸಿದ ಗಾಳಿ ಹೊಡೆತಕ್ಕೆ ಹಲವಾರು ಕಡೆ ವಿದ್ಯುತ್ ಕಂಬಗಳು,ಮರಗಳು ನೆಲಕ್ಕೆ ಉರುಳಿ ಬಿದ್ದಿವೆ.ಗಾಳಿ ರಭಸಕ್ಕೆ ಪೇಟೆಯಲ್ಲಿ ಅಂಗಡಿಗಳ ಬೋರ್ಡ್ ಮುರಿದು ಬಿದ್ದಿದೆ.ಮನೆಗಳ ಮೇಲೆ ಮರ ಬಿದ್ದು ವ್ಯಾಪಕ ಹಾನಿ ಉಂಟಾಗಿದ್ದು.ವಿದ್ಯುತ್ ಸರಬರಾಜಿಗೆ ತೊಂದರೆ ಉಂಟಾಗಿತ್ತು.ಸಂಜೆಯಾಗುತ್ತಲೆ ನದಿಗಳ ನೀರಿನ ಮಟ್ಟ ಏರಿಕೆ ಆಗಿದೆ.