ಸ್ಮಶಾನಕ್ಕೆ ದಾರಿ ಕಲ್ಪಿಸುವಂತೆ ಆಗ್ರಹಿಸಿ ಗುಜ್ಜಾಡಿ ಪಂಚಾಯಿತಿ ಎದುರು ಆಹೋರಾತ್ರಿ ಧರಣಿ ಸತ್ಯಾಗ್ರಹ

ಕುಂದಾಪುರ:ತಾಲೂಕಿನ ಗುಜ್ಜಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಂಚುಗೋಡು ಸನ್ಯಾಸಿಬಲ್ಲೆ ಸ್ಮಶಾನ ಹಾಗೂ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ಅನಾದಿ ಕಾಲದ ರಸ್ತೆಯನ್ನು ಖಾಸಗಿ ಜಾಗದ ಮಾಲೀಕರು ಬಂದ್ ಮಾಡಿರುವುದನ್ನು ವಿರೋಧಿಸಿ.ಸಾರ್ವಜನಿಕ ಸ್ಮಶಾನವನ್ನು ಧ್ವಂಸ ಮಾಡಿದ್ದಾರೆ ಎಂದು ಆರೋಪಿಸಿ ಕಂಚುಗೋಡು ಸನ್ಯಾಸಿ ಬಲ್ಲೆ ಗ್ರಾಮಸ್ಥರು ಗುಜ್ಜಾಡಿ ಗ್ರಾಮ ಪಂಚಾಯಿತಿ ಎದುರುಗಡೆ ಅಹೋರಾತ್ರಿ ಧರಣಿ ಸತ್ಯಾಗ್ರಹದ ಮೂಲಕ ಪ್ರತಿಭಟನೆಯನ್ನು ಶುಕ್ರವಾರ ನಡೆಸಿದರು.ಸ್ಮಶಾನ ಸಂಪರ್ಕಕ್ಕೆ ದಾರಿ ಕಲ್ಪಿಸುವುದರ ಜತೆಗೆ ತಪ್ಪಿತಸ್ಥರ ವಿರುದ್ಧ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಸುಮಾರು ಎರಡು ಶತಮಾನಕ್ಕೂ ಹೆಚ್ಚು ಕಾಲ ಕಂಚುಗೋಡು ಸನ್ಯಾಸಿ ಬಲ್ಲೆ ಸ್ಮಶಾನ ಹಾಗೂ ನಾಗದೇವಸ್ಥಾನ,ರಾಮನಾಥ ಮಹಮ್ಮಾಯಿ ಮತ್ತು ನವದುರ್ಗೆ ದೇವಸ್ಥಾನಕ್ಕೆ ಸಂರ್ಪಕ್ಕ ಹೊಂದಿರುವ ರಸ್ತೆಯನ್ನು ಖಾಸಗಿ ಜಾಗದ ಮಾಲೀಕರು ಕಳೆದ ಎರಡು ವರ್ಷಗಳಿಂದ ಬಂದ್ ಮಾಡಿದ್ದಾರೆ.ರಸ್ತೆ ಸಂಪರ್ಕ ವ್ಯವಸ್ಥೆ ಕಡಿತಮಾಡಿದ್ದರಿಂದ ಸ್ಮಶಾನ ಸಂಪರ್ಕಕ್ಕೆ ಮತ್ತು ದೇವಸ್ಥಾನಕ್ಕೆ ರಸ್ತೆ ಇಲ್ಲದಂತಾಗಿದೆ.ಸ್ಮಶಾನ ಸಂಪರ್ಕಕ್ಕೆ ದಾರಿ ವ್ಯವಸ್ಥೆ ಇಲ್ಲದೆ ಶವವನ್ನು ದಫನ ಮಾಡಲು ತೊಂದರೆ ಉಂಟಾಗುತ್ತಿದ್ದು.ಸತ್ತ ಜೀವಕ್ಕೆ ಮುಕ್ತಿ ನೀಡಲು ಊರೂರು ಸುತ್ತ ಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.ಹೆಣವನ್ನು ಸುಡಲು ತೊಂದರೆ ಉಂಟಾಗುತ್ತಿದೆ.ದೇವಸ್ಥಾನದ ಅಭಿವೃದ್ಧಿಯನ್ನು ಕೂಡ ಮಾಡಲಾಗುತ್ತಿಲ್ಲ.ಸ್ಮಶಾನಕ್ಕೆ ರಸ್ತೆ ಸಂಪರ್ಕ ವ್ಯವಸ್ಥೆ ಕಲ್ಪಿಸುವಂತೆ ಕಳೆದ ಎರಡು ವರ್ಷಗಳಿಂದ ಗುಜ್ಜಾಡಿ ಪಂಚಾಯಿತಿಗೆ ಅಲೆದು ಅಲೆದು ಸಾಕಾಗಿ ಹೋಗಿದೆ.ಅಧಿಕಾರಿ ವರ್ಗದವರು ಹಣ ಬಲದ ಮುಂದೆ ಸಾರ್ವಜನಿಕ ಸಮಸ್ಯೆಗೆ ಸ್ಪಂದನೆ ಮಾಡುತ್ತಿಲ್ಲ ಎಂದು ಆಪಾದಿಸಿರುವ ಗ್ರಾಮದ ಜನರು.ಸ್ಮಶಾನವನ್ನು ಧ್ವಂಸ ಮಾಡಲಾಗಿದೆ ಎಂದು ದೂಷಿಸಿದ್ದಾರೆ.ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.ಜುಲೈ 7 ರಂದು ಅಣಕು ಶವಯಾತ್ರೆ ನಡೆಸಿ ಗ್ರಾಮಸ್ಥರು ಗುಜ್ಜಾಡಿ ಪಂಚಾಯಿತಿ ಎದುರುಗಡೆ ಪ್ರತಿಭಟನೆ ನಡೆಸಿದ್ದರು.ಕುಂದಾಪುರ ತಹಶೀಲ್ದಾರ್,ಇಒ,ಆರ್‍ಐ ಭೇಟಿ ನೀಡಿದ್ದರು.ಗಂಗೊಳ್ಳಿ ಠಾಣೆ ಪಿಎಸ್‍ಐ ಪವನ್ ನಾಯ್ಕ್ ನೇತೃತ್ವದಲ್ಲಿ ಪೆÇಲೀಸ್ ರಕ್ಷಣೆ ನೀಡಲಾಗಿದೆ.