ಯುವಕ ಮಂಡಲ ತ್ರಾಸಿ 59ನೇ ವಾರ್ಷಿಕೋತ್ಸವ ಸಂಭ್ರಮ


ಕುಂದಾಪುರ:ಸಾಮಾಜಿಕ ಧಾರ್ಮಿಕ ಶೈಕ್ಷಣಿಕ ಕಾರ್ಯಗಳೊಂದಿಗೆ ಊರಿನ ಅಭಿವೃದ್ಧಿಗೆ ಶ್ರಮಿಸುತ್ತಿರುವ ಯುವಕ ಮಂಡಲದ ಕಾರ್ಯ ಇತರ ಸಂಘಟನೆಗಳಿಗೆ ಮಾದರಿ ಆಗಿದೆ ಎಂದು ಯುವಕ ಮಂಡಲದ ಗೌರವಾಧ್ಯಕ್ಷ ತ್ರಾಸಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಿಥುನ್ ಎಂ.ಡಿ ಬಿಜೂರು ಹೇಳಿದರು.
ಕಲ್ಲಾನಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ವಠಾರದಲ್ಲಿ ನಡೆದ ಯುವಕ ಮಂಡಲ ತ್ರಾಸಿ ಅದರ 59ನೇ ವಾರ್ಷಿಕೋತ್ಸವ ಸಮಾರಂಭ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಂಘದ 60ನೇ ವರ್ಷದ ಸವಿನೆನಪಿಗಾಗಿ ಸುಮಾರು 20 ಲಕ್ಷ.ರೂ ವೆಚ್ಚದಲ್ಲಿ ಸ್ವತಃ ಕಟ್ಟಡ ನಿರ್ಮಾಣ ಸಹಿತ ತ್ರಾಸಿ ಜಂಕ್ಷನ್‍ನಲ್ಲಿ ಸುಮಾರು 5 ಲಕ್ಷ.ರೂ ವೆಚ್ಚದಲ್ಲಿ ಸುಸಜ್ಜಿತ ಬಸ್‍ಸ್ಟ್ಯಾಂಡ್ ನಿರ್ಮಿಸುವ ಯೋಜನೆ ಹಾಕಲಾಗಿದೆ ಎಂದರು.
ತ್ರಾಸಿ ಇಗರ್ಜಿ ಧರ್ಮಗುರು ರೊಜಾರಿಯೋ ಫರ್ನಾಂಡೆಸ್ ಉದ್ಘಾಟಿಸಿ ಶುಭಹಾರೈಸಿದರು.ಯುವಜನ ಕ್ರೀಡಾ ಇಲಾಖೆ ಕುಂದಾಪುರ ಕುಸುಮಾಕರ ಶೆಟ್ಟಿ,ಉದ್ಯಮಿ ಶಿವ ಆರ್ ಪೂಜಾರಿ ಬೆಂಗಳೂರು,ನಿವೃತ್ತ ಪಶುವೈದ್ಯಾಧಿಕಾರಿ ರಾಘವೇಂದ್ರ ಶೆಟ್ಟಿ,ನಿವೃತ್ತ ಮುಖ್ಯೋಪಾಧ್ಯಾಯ ಧಾಮಸ್ ರೊಡ್ರಿಗಸ್,ಲಿಪ್ಟನ್ ಒಲಿವೆರಾ,ಭಾವನಾ ಆರ್.ದೇವಾಡಿಗ ತ್ರಾಸಿ,ರಾಘವೇಂದ್ರ ಶೆಟ್ಟಿ ಉಪ್ರಳ್ಳಿ ಉಪಸ್ಥಿತರಿದ್ದರು.ಕಲಿಯುವಿಕೆ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು,ಆಶಾ ಹಾಗೂ ಆರೋಗ್ಯ ಕಾರ್ಯಕರ್ತೆಯರನ್ನು,ಪವರ್ ಮ್ಯಾನ್,ಸ್ವಚ್ಛತಾ ಸಿಬ್ಬಂದಿ,ಗ್ರಾಮ ಸಹಾಯಕರು ಸೇರಿದಂತೆ ಒಟ್ಟು 50ಕ್ಕೂ ಅಧಿಕ ಜನರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.ಯುವಕ ಮಂಡಲ ತ್ರಾಸಿ ಅಧ್ಯಕ್ಷ ವಿನಯ್ ಪೂಜಾರಿ ಸ್ವಾಗತಿಸಿದರು.ಸುಂದರ ಜಿ ಗಂಗೊಳ್ಳಿ ನಿರೂಪಿಸಿದರು.ಜಗದೀಶ್ ಆಚಾರ್ಯ ವಂದಿಸಿದರು.ಲಕ್ಕಿ ಕೂಪನ್ ಡ್ರಾ ಫಲಿತಾಂಶವನ್ನು ಪ್ರಕಟಿಸಲಾಯಿತು.