ಬ್ಯಾಗ್ ಮರಳಿಸುವಂತೆ ಮನವಿ
ಕುಂದಾಪುರ:ಮಾರಣಕಟ್ಟೆ ಮೇಳದ ಯಕ್ಷಗಾನ ಕಲಾವಿದರಾದ ಐರ್ಬೈಲು ಆನಂದ ಶೆಟ್ಟಿ ಅವರ ಮಗಳು ಸೀಮಾ ಶೆಟ್ಟಿ ಎಂಬುವರು ಏ.೨೩ ರ ಬುಧವಾರ ರಾತ್ರಿ ಐರ್ಬೈಲ್‌ನಲ್ಲಿ ಯಕ್ಷಗಾನವನ್ನು ವೀಕ್ಷಿಸಿ ಆಟೋದಲ್ಲಿ ಸಿದ್ದಾಪುರ ನೇರಳಕಟ್ಟೆ ನೆಂಪು ಬಗ್ವಾಡಿ ಕ್ರಾಸ್ ಹಕ್ಲಾಡಿ ಮಾರ್ಗದಲ್ಲಿ ಚಲಿಸುತ್ತಿರುವಾಗ ಆಟೋದ ಹಿಂಭಾಗದಲ್ಲಿದ್ದ ಬೆಲೆ ಬಾಳುವ ವಸ್ತುಗಳನ್ನೊಳಗೊಂಡ ಬ್ಯಾಗ್ ಮಾರ್ಗ ಮಧ್ಯೆ ಬಿದ್ದು ಹೋಗಿರುತ್ತದೆ.
ಬ್ಯಾಗ್‌ನಲ್ಲಿ ಆಧಾರ್ ಕಾರ್ಡ್,ಪಾನ್ ಕಾರ್ಡ್,ಎಟಿಎಂ ಕಾರ್ಡ್,ಚುನಾವಣಾ ಗುರುತಿನ ಚೀಟಿ,೨೦ ಪವನ್ ಚಿನ್ನ ಹಾಗೂ ೨೦ ಸಾವಿರ.ರೂ ಇದ್ದಿದ್ದು ಬುಧವಾರ ರಾತ್ರಿ ಐರ್ಬೈಲ್‌ನಲ್ಲಿ ಯಕ್ಷಗಾನವನ್ನು ನೋಡಿಕೊಂಡು ಐರ್ಬೈಲ್‌ನಲ್ಲಿ ನಿಂದ ಬಂಟ್ವಾಡಿಗೆ ಆಟೋದಲ್ಲಿ ಬರುತ್ತಿರುವಾಗ ದಾರಿ ಮಧ್ಯೆ ತಮ್ಮ ಬ್ಯಾಗ್ ಬಿದ್ದು ಹೋಗಿದೆ.ಸಿಕ್ಕಿದವರು ಮಾನವೀಯತೆ ನೆಲೆಯಲ್ಲಿ ಮರಳಿಸುವಂತೆ ಸೀಮಾ ಶೆಟ್ಟಿ ಅವರು ವಿನಂತಿಸಿಕೊAಡಿದ್ದಾರೆ.ಸಿಕ್ಕಿದವರು ಹತ್ತಿರದ ಪೊಲೀಸ್ ಠಾಣೆ ಅಥವಾ ಈ ನಂಬರ್ ಅನ್ನು ಸಂಪರ್ಕಿಸ ಬಹುದು ಸಂಖ್ಯೆ-9972216491/8762606213.ಈ ಸಂಬAಧ ಶಂಕರನಾರಾಯಣ ಠಾಣೆಯಲ್ಲಿ ದೂರು ದಾಖಲಾಗಿದೆ.