ಕುಂದಾಪುರ\ತೀರ್ಥಹಳ್ಳಿ:ಸ್ಕೂಟಿಗೆ ಬಸ್ ಡಿಕ್ಕಿ,ವ್ಯಕ್ತಿ ಸಾವು

ಕುಂದಾಪುರ:ಆಗುAಬೆ ಕಡೆ ಯಿಂದ ತೀರ್ಥ ಹಳ್ಳಿಗೆ ಸಾಗುತ್ತಿದ್ದ ಬಸ್ ತೀರ್ಥಹಳ್ಳಿ ಎಂಬಲ್ಲಿ ಕುಂದಾಪುರ ಕಡೆಗೆ ಸಾಗುತ್ತಿದ್ದ ಸ್ಕೂಟಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟಿ ಸವಾರ ತ್ರಾಸಿ ಗ್ರಾಮದ ಮೊವಾಡಿ ನಿವಾಸಿ ಗುರುರಾಜ ಎಸ್ ಕಾಂಚನ್ (೪೩) ಸಾವನ್ನಪ್ಪಿದ್ದ ಘಟನೆ ಮಂಗಳವಾರ ನಡೆದಿದೆ.
ಏ.೨೫ ರಂದು ಮನೆಯಲ್ಲಿ ಯಕ್ಷಗಾನ ಕಾರ್ಯಕ್ರಮ ನಡೆಯುತ್ತಿರುವ ಹಿನ್ನೆಲೆಯಲ್ಲಿ ತೀರ್ಥಹಳ್ಳಿ ಯಿಂದ ಗುರುರಾಜ ಕಾಂಚನ್ ಅವರು ಸ್ಕೂಟಿಯಲ್ಲಿ ಕುಂದಾಪುರಕ್ಕೆ ಬರುತ್ತಿರುವಾಗ ಇವೊಂದು ಘಟನೆ ನಡೆದಿದೆ ಎಂದು ಅವರ ಸಂಬAಧಿ ಸಂಜಯ್ ಪೂಜಾರಿ ತಿಳಿಸಿದ್ದಾರೆ.