ಬ್ರಹ್ಮಾವರ:ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ತಂತ್ರಜ್ಞಾನ ಮಾಹಿತಿ ಕಾರ್ಯಗಾರ

ಬ್ರಹ್ಮಾವರ:ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಬ್ರಹ್ಮಾವರ ಇಲ್ಲಿನ ಬಿ.ಸಿ.ಎ ವಿಭಾಗದ ವತಿಯಿಂದ ವಿದ್ಯಾರ್ಥಿಗಳಿಗೆ ಉದಯೋನ್ಮುಖ ತಂತ್ರಜ್ಞಾನಗಳು ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಡೈರೆಕ್ಟರ್ ಇಂಚಾರ್ಜ್,ಪಿಪಿಸಿ ಕೆರಿಯರ್ ಕೌನ್ಸಿಲಿಂಗ್ ಕೇಂದ್ರ ಡಾ.ಪಿ.ಎಸ್ ಐತಾಳ್ ಅವರು, ನ್ಯಾನೋ ತಂತ್ರಜ್ಞಾನ, ವರ್ಚುಯಲ್ ರಿಯಾಲಿಟಿ, ಕ್ಲೌಡ್ ಕಂಪ್ಯೂಟಿಂಗ್ ,ಕ್ವಾಂಟಮ್ ಕಂಪ್ಯೂಟಿಂಗ್ ,ಐಒಟಿ, 3 ಡಿ ಪ್ರಿಂಟಿಂಗ್,ಮುಂತಾದ ಉದಯೋನ್ಮುಖ ತಂತ್ರಜ್ಞಾನದ ಬಗ್ಗೆ ಮಾಹಿತಿ ನೀಡಿದರು.ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಬ್ರಹ್ಮಾವರ ಇಲ್ಲಿನ ಸಂಸ್ಥಾಪಕರಾದ ಸುಬ್ರಹ್ಮಣ್ಯ, ನಿರ್ದೇಶಕಿ ಮಮತಾ ಹಾಗೂ ಕಾಲೇಜಿನ ಪ್ರಿನ್ಸಿಪಾಲ್ ಡಾ ಸೀಮಾ ಜಿ ಭಟ್,ಬಿ.ಸಿ.ಎ ವಿಭಾಗದ ಮುಖ್ಯಸ್ಥೆ ಅನಿತಾ ಪ್ರಸಾದ್, ಉಪನ್ಯಾಸಕಿಯರಾದ ವನಿತಾ, ರಕ್ಷಿತಾ, ಸಂಜನಾ ಹಾಗೂ ಸಂಸ್ಥೆಯ ಎಲ್ಲಾ ಉಪನ್ಯಾಸಕರು ಹಾಗೂ ಉಪನ್ಯಾಸಕೇತರರು, ವಿದ್ಯಾರ್ಥಿ ವೃಂದದವರು ಉಪಸ್ಥಿತರಿದ್ದರು.ವಿದ್ಯಾರ್ಥಿನಿ ಮಂಜು ಶ್ರೀ ಸ್ವಾಗತಿಸಿದರು ,ವಿದ್ಯಾರ್ಥಿನಿ ದಿವ್ಯಾ ಪರಿಚಯಿಸಿದರು.ವಿದ್ಯಾರ್ಥಿನಿ ಹರ್ಷಿತಾ ವಂದಿಸಿದರು, ಮುಜೈನಾ ನಿರೂಪಿಸಿದರು.