ಬ್ರಹ್ಮಾವರ:ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆಯ ಫ್ಯಾಶನ್ ಡಿಸೈನ್ ವಿಭಾಗದ ವಿದ್ಯಾರ್ಥಿಗಳಿಂದ ಕೈಮಗ್ಗ ಘಟಕಕ್ಕೆ ಕೈಗಾರಿಕಾ ಭೇಟಿ

ಬ್ರಹ್ಮಾವರ:ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಇಲ್ಲಿನ ಫ್ಯಾಶನ್ ಡಿಸೈನ್ ವಿಭಾಗದ ವಿದ್ಯಾರ್ಥಿಗಳು ಕೈಮಗ್ಗ ತಯಾರಿಕಾ ಘಟಕಕ್ಕೆ ಭೇಟಿ ನೀಡಿದರು.
ಉಡುಪಿ ಬ್ರಹ್ಮಗಿರಿ ಇಲ್ಲಿನ ತಾಳಿಪಾಡಿ ನೇಕಾರರ ಸಂಘ ಮತ್ತು ನೇಯ್ಗೆ ಘಟಕಕ್ಕೆ ಭೇಟಿ ನೀಡಿದ ವಿದ್ಯಾರ್ಥಿಗಳು ಹಳೆಯ ಸಾಂಪ್ರದಾಯಿಕ ನೇಯ್ಗೆ ತಯಾರಿಕಾ ವಿಧಾನವನ್ನು ವೀಕ್ಷಿಸಿ,ಮಾಹಿತಿಯನ್ನು ಪಡೆದು ಕೊಂಡರು. ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಚರ್ಚಿಸಿದರು.
ವಿಭಾಗ ಮುಖ್ಯಸ್ಥೆ ಉಪನ್ಯಾಸಕಿ ಅಶ್ವಿನಿ ಮತ್ತು ಸ್ವಾತಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.