ಹೊಳ್ಮಗೆ ನೇತ್ರಹೈಗುಳಿ,ಸಪರಿವಾರ ದೈವಸ್ಥಾನದ ವಾರ್ಷಿಕ ಗೆಂಡೆ ಸೇವೆ ಸಂಪನ್ನ


ಕುಂದಾಪುರ:ಹಕ್ಲಾಡಿ ಗ್ರಾಮದ ಹೊಳ್ಮಗೆ ಶ್ರೀ ನೇತ್ರ ಹೈಗುಳಿ ಹಾಗೂ ಸಪರಿವಾರ ದೈವಸ್ಥಾನದಲ್ಲಿ ವಾರ್ಷಿಕವಾಗಿ ನಡೆಯುವ ಗೆಂಡ ಸೇವೆ ಹಾಗೂ ಕೋಲ ಸೇವೆ,ಮಂಗಳಾರತಿ,ಹಣ್ಣುಕಾಯಿ ಸೇವೆ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ಶುಕ್ರವಾರ ನಡೆಯಿತು.ದೈವವನ್ನು ನಂಬಿದ ಭಕ್ತರು ಶ್ರೀ ಕ್ಷೇತ್ರಕ್ಕೆ ಆಗಮಿಸಿ ಶ್ರೀ ದೇವರ ದರ್ಶನವನ್ನು ಪಡೆದು ಹರಕೆಯನ್ನು ಸಲ್ಲಿಸಿದರು.ಶ್ರೀ ನೇತ್ರ ಹೈಗುಳಿ ಹಾಗೂ ಸಪರಿವಾರ ದೈವಗಳ ವಾರ್ಷಿಕ ಹಬ್ಬ ಪ್ರತಿ ವರ್ಷ ಮಾ.14 ರಂದು ಆಚರಣೆಗೊಳ್ಳುತ್ತದೆ.