ಆಲೂರು:ಸಾವಿನಲ್ಲೂ ಸಾರ್ಥಕತೆ ಮೆರೆದ ರತ್ನಾಕರ ಜೊಯಿಸ್

ಕುಂದಾಪುರ:ತಾಲೂಕಿನ ಆಲೂರು ಗ್ರಾಮದ ನಿವಾಸಿ ರತ್ನಾಕರ ಜೊಯಿಸ್ (48) ಅವರು ತಮ್ಮ ಅಂಗಾಂಗಗಳನ್ನು ದಾನ ಮಾಡುವುದರ ಮುಖೇನ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.
ಜನವರಿ.21 ರಂದು ಕಾರಿನಲ್ಲಿ ಸಾಗುತ್ತಿದ್ದ ರತ್ನಾಕರ ಜೊಯಿಸ್ ಅವರ ಕಾರಿಗೆ ವಿರುದ್ಧ ದಿಕ್ಕಿನಲ್ಲಿ ಬಂದಿದ್ದ ಲಾರಿ ಅರಾಟೆ ಸೇತುವೆ ಡಿವೈಡರ್ ಬಳಿ ಡಿಕ್ಕಿ ಹೊಡೆದಿದೆ.ಅಪಘಾತದಲ್ಲಿ ಗಂಭೀರ ಸ್ವರೂಪದ ಗಾಯದೊಂದಿಗೆ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದ ಅವರು ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದರು.ಆರೋಗ್ಯದಲ್ಲಿ ಧಿಡೀರ್ ಏರುಪೇರು ಉಂಟಾಗಿದ್ದರಿಂದ ಗುರವಾರ ದಂದು ಚಿಕಿತ್ಸೆ ಫಲಕಾರಿ ಆಗದೆ ಮಣಿಪಾಲ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.ಕುಟುಂಬಸ್ಥರ ನಿರ್ಣಯದಂತೆ ರತ್ನಾಕರ ಜೊಯಿಸ್ ಅವರ ಪ್ರಮುಖ ಅಂಗಾಂಗಗಳನ್ನು ದಾನ ಮಾಡಿ ಸಾಮಾಜಿಕ ಕಳಕಳಿ ಮೆರೆದಿದ್ದಾರೆ.ಮೃತರ ಸದ್ಗತಿಗಾಗಿ ತಮ್ಮ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡುವುದರ ಮುಖೇನ ವಿಶೇಷವಾದ ರೀತಿಯಲ್ಲಿ ಗೌರವವನ್ನು ಸಲ್ಲಿಸಿದರು.
ರತ್ನಾಕರ ಜೊಯಿಸ್ ಅವರು ಇಬ್ಬರು ಗಂಡು ಮಕ್ಕಳು,ಪತ್ನಿ,ತಂದೆ,ತಾಯಿ,ಒಬ್ಬ ಸಹೋದರಿ,ಇಬ್ಬರು ಸಹೋದರ ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.