ಶ್ರೀ ಉಮಾಮಹೇಶ್ವರ ದೇವರ ರಥೋತ್ಸವ ಸಂಪನ್ನ

Share

Advertisement
Advertisement

ಕುಂದಾಪುರ:ಬೈಂದೂರು ತಾಲೂಕಿನ ಉಪ್ಪುಂದ ಶೆಟ್ರಮನೆ ಮೂಲಸ್ಥಾನವಾದ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ದಿನದಂದು ರಥೋತ್ಸವ ಕಾರ್ಯಕ್ರಮ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ಅದ್ದೂರಿಯಾಗಿ ಬುಧವಾರ ನಡೆಯಿತು.
ದೇವಸ್ಥಾನದ ಪ್ರಾಂಗಣದಿಂದ ಮೂಲಸ್ಥಾನದ ಅಶ್ವತ್ಥಕಟ್ಟೆಯವರೆಗೆ ನಿರ್ಮಿಸಿದ ರಥಬೀದಿಯಲ್ಲಿ ನೂತನ ರಥಯಾತ್ರೆ ಜರುಗಿತು.ಸಾವಿರು ಭಕ್ತರು ಕ್ಷೇತ್ರಕ್ಕೆ ಆಗಮಿಸಿ ಶ್ರೀ ದೇವರ ರಥೋತ್ಸವವನ್ನು ಕಣ್ತುಂಬಿ ಕೊಂಡರು.ತೀರ್ಥ ಪ್ರಸಾದವನ್ನು ಸ್ವೀಕರಿಸಿದರು.
ಅಖಿಲ ಭಾರತ ವ್ಯವಸ್ಥ ಪ್ರಮುಖ ರಾಷ್ಟ್ರೀಯ ಸ್ವಯಂಸೇವಕ ಸಂಘ ನಾಗಪುರ ಮಂಗೇಶ ಬೆಂಡೆ ಅವರು ನೂತನ ರಥಕ್ಕೆ ಚಾಲನೆ ನೀಡಿದರು.
ರಥೋತ್ಸವ ಕಾರ್ಯಕ್ರಮದ ಅಂಗವಾಗಿ ಪಂಚಕುಂಡಗಳಲ್ಲಿ ಅನಿವಾಸಹೋಮ, ನೂತನ ರಥ ಶುಧ್ದಿ ಹೋಮ,ರಥಾ ಪೂಜಾ, ಅಶ್ವಥಕಟ್ಟೆಯಲ್ಲಿಯ ಅಶ್ವತ್ಥರಾಮಧ್ಯಾನ ಮಂಟಪದಲ್ಲಿ ರಾಮತಾರಕ ಹೋಮ,ಪೂಜಾ ಬಲಿ ಕಾರ್ಯಕ್ರಮ ನಡೆಯಿತು.
ಕುಲದೇವತೆ ಶ್ರೀ ದುರ್ಗಾಪರಮೇಶ್ವರಿ ಹಣಬಿನಕಟ್ಟೆಯಲ್ಲಿ ನೇಮದಂತೆ ಪೂಜಾ ಕಾರ್ಯಕ್ರಮ,ಅಹೋರಾತ್ರಿ ಭಜನಾ ಕಾರ್ಯಕ್ರಮ ನಡೆಯಿತು.
ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ,ಶ್ರೀ ಉಮಾಮಹೇಶ್ವರ ದೇವಾಲಯವನ್ನು ಕುಟುಂಬಿಕರು ಒಟ್ಟು ಸೇರಿ ಬಹಳಷ್ಟು ಸುಂದರವಾಗಿ ನಿರ್ಮಿಸಿದ್ದಾರೆ.ಸುಮಾರು ಎಪ್ಪತ್ತೈದು ವರ್ಷಗಳ ಹಿಂದೆ ನಿಂತು ಹೋಗಿದ್ದ ರಥೋತ್ಸವ ಸೇವೆಯನ್ನು ಶಿವರಾತ್ರಿ ಪರ್ವಕಾಲದಲ್ಲಿ ಮತ್ತೆ ಆರಂಭಗೊಂಡಿರುವುದು ಎಲ್ಲರಿಗೂ ಸಂತೋಷವಾಗಿದೆ ಎಂದರು.
ಈ ಸಂದರ್ಭದಲ್ಲಿ
ಬೈಂದೂರು ಕ್ಷೇತ್ರದ ಶಾಸಕ ಗುರುರಾಜ ಗಂಟಿಹೊಳೆ,ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ, ಪ್ರಕಾಶ್ಚಂದ್ರ ಶೆಟ್ಟಿ, ಸುರೇಶ್ ಶೆಟ್ಟಿ,ಪ್ರಭಾಕರ್ ಶೆಟ್ಟಿ,ದಿವಾಕರ್ ಶೆಟ್ಟಿ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ರಾಜು ಪೂಜಾರಿ, ಶರತ್ ಶೆಟ್ಟಿ, ಪ್ರಜ್ವಲ್ ಶೆಟ್ಟಿ, ಅನಿಲ್, ಉಪ್ಪುಂದ ಪಂಚಾಯಿತಿ ಅಧ್ಯಕ್ಷ ಮೋಹನ್ ಚಂದ್ರ ಉಪ್ಪುಂದ,ಕೆ.ಸಿ ರಾಜೇಶ್, ಉದ್ಯಮಿ ವಿಠಲ ಹೆಗ್ಡೆ ಬೆಳಗಾಂ, ಉಪ್ಪುಂದ ದುರ್ಗಾಪರಮೇಶ್ವರಿ ದೇವಸ್ಥಾನದ ಅಧ್ಯಕ್ಷ ಸತೀಶ್ ಶೆಟ್ಟಿ,ಮದನ್ ಕುಮಾರ್ ಉಪ್ಪುಂದ,ಜಿ ರವೀಂದ್ರನಾಥ ಶೆಟ್ಟಿ,ಮತ್ತಿತರರ ಜನಪ್ರತಿನಿಧಿಗಳು ಭೇಟಿ ನೀಡಿ ದೇವರ ದರ್ಶನ ಪಡೆದರು.
ಸಿದ್ದಮ್ಮ ಮಾದಯ್ಯ ಶೆಟ್ಟಿ ಫ್ಯಾಮಿಲಿ ಚಾರಿಟೇಬಲ್ ಟ್ರಸ್ಟ್‍ನ ಅಧ್ಯಕ್ಷರಾದ ಯು.ಸೀತಾರಾಮ ಶೆಟ್ಟಿ,ಸದಸ್ಯರಾದ ನಾರಾಯಣ ಎಂ ಶೆಟ್ಟಿ,ಯು.ಬಿ ಶೆಟ್ಟಿ,ಭುಜಂಗಯ್ಯ ಶೆಟ್ಟಿ,ಹರೀಶ್ ಕುಮರ್ ಶೆಟ್ಟಿ ಹಾಗೂ ಸಹದೋರರು
ಉಪಸ್ಥಿತರಿದ್ದರು.
ಫೆಬ್ರವರಿ 27 ರ ಗುರುವಾರದಂದು ಬ್ರಹ್ಮಕಲಾಶಾಭಿಷೇಕ,ಮಹಾಅನ್ನಸಂತರ್ಪಣೆ ನಡೆಯಲಿದೆ.

Advertisement
Advertisement
Advertisement
Advertisement


Share

Leave a comment

Your email address will not be published. Required fields are marked *

You cannot copy content of this page