ಉಮಾಮಹೇಶ್ವರ ದೇವರಿಗೆ ಚಂಡಿಕಾ ಹೋಮ ಸಮರ್ಪಣೆ




ಕುಂದಾಪುರ:ಉಪ್ಪುಂದ ಮಾದಯ್ಯ ಶೆಟ್ರಮನೆ ಮೂಲಸ್ಥಾನದಲ್ಲಿ ನೂತನವಾಗಿ ನಿರ್ಮಾಣ ಮಾಡಿರುವ ಶಿಲಾಮಯ ಮಂದಿರ ಲೋಕಾರ್ಪಣೆ ಹಾಗೂ ಶ್ರೀ ಉಮಾಮಹೇಶ್ವರ,ಶ್ರೀ ನಂದಿಕೇಶ್ವರ ಹಾಗೂ ಪರಿವಾರ ದೇವತೆಗಳ ಪುನರ್ ಪ್ರತಿಷ್ಠಾಪನೆ ಅಂಗವಾಗಿ ಶ್ರೀ ದೇವರಿಗೆ ಪಂಚಕುಂಡಗಳಲ್ಲಿ ಅಧಿವಾಸಹೋಮ,
ತತ್ವಹೋಮ,ವಿಶೇಷ ಚಂಡಿಕಾ ಹವನ,ಬಲಿ ಪೂಜೆ,ಪ್ರಸಾದ ವಿತರಣೆ ಕಾರ್ಯಕ್ರಮ ಮಂಗಳವಾರ ನಡೆಯಿತು.
ಸಂಜೆ ಕಟ್ಟೆ ಉತ್ಸವ, ಅಷ್ಟಾವಧಾನ ಸೇವೆ ಜರುಗಿತು.
ಯು.ಸದಾನಂದ ಶೆಟ್ಟಿ ಮಾತನಾಡಿ,ಶ್ರೀ ದೇವರ ದೇವತಾ ಕಾರ್ಯಕ್ರಮಗಳು ಯಾವುದೇ ರೀತಿಯ ವಿಘ್ನವಿಲ್ಲದೆ ನೆರವೇರುತ್ತಿದ್ದು.ಭಕ್ತರ ಸಮೂಹವೇ ಕ್ಷೇತ್ರಕ್ಕೆ ಹರಿದು ಬರುತ್ತಿದೆ.ನಾಳೆ ದಿನ ನಡೆಯುವ ಶ್ರೀ ದೇವರ ರಥೋತ್ಸವ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕೇಳಿಕೊಂಡರು.
ಜ್ಯೋತಿ ರತ್ನಾಕರ ಶೆಟ್ಟಿ ಅವರು ಮಾತನಾಡಿ,ಶ್ರೀ ದೇವರ ದೇವತಾ ಕಾರ್ಯಕ್ರಮ ಫ್ರೆಬ್ರವರಿ 21 ರಿಂದ ಆರಂಭಗೊಂಡು ಫೆಬ್ರವರಿ 27ಕ್ಕೆ ಸಂಪನ್ನಗೊಳ್ಳಲಿದೆ.ನಾಳೆ ನಡೆಯುವ ಶ್ರೀ ದೇವರ ರಥೋತ್ಸವ ಕಾರ್ಯಕ್ರಮದಲ್ಲಿ ಊರಪರ ಊರಿನ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕುಟುಂಬಸ್ಥರ ಪರವಾಗಿ ಕೇಳಿಕೊಂಡರು .
ಈ ಸಂದರ್ಭದಲ್ಲಿ
ಸಿದ್ದಮ್ಮ ಮಾದಯ್ಯ ಶೆಟ್ಟಿ ಫ್ಯಾಮಿಲಿ ಚಾರಿಟೇಬಲ್ ಟ್ರಸ್ಟ್‍ನ ಅಧ್ಯಕ್ಷರಾದ ಯು.ಸೀತಾರಾಮ ಶೆಟ್ಟಿ,ಸದಸ್ಯರಾದ ನಾರಾಯಣ ಎಂ ಶೆಟ್ಟಿ,ಯು.ಬಿ ಶೆಟ್ಟಿ,ಭುಜಂಗಯ್ಯ ಶೆಟ್ಟಿ,ಹರೀಶ್ ಕುಮರ್ ಶೆಟ್ಟಿ ಹಾಗೂ ಸಹದೋರರು
ಉಪಸ್ಥಿತರಿದ್ದರು.
ಫ್ರೆಬ್ರವರಿ 26 ರಂದು ನೂತನ ರಥಯಾತ್ರೆ ನಡೆಯಲಿದೆ.
ಫೆಬ್ರವರಿ 27 ರ ಗುರುವಾರದಂದು ಬ್ರಹ್ಮಕಲಾಶಾಭಿಷೇಕ,ಮಹಾಅನ್ನಸಂತರ್ಪಣೆ ನಡೆಯಲಿದೆ.