ಉಪ್ಪುಂದ ಶ್ರೀ ಉಮಾಮಹೇಶ್ವರ ದೇವರ ಪುನರ್‍ಪ್ರತಿಷ್ಠೆ,ಶಿಲಾಮಯ ಮಂದಿರ ಲೋಕಾರ್ಪಣೆ

Share

Advertisement
Advertisement

ಕುಂದಾಪುರ:ಉಪ್ಪುಂದ ಮಾದಯ್ಯ ಶೆಟ್ರಮನೆ ಮೂಲಸ್ಥಾನದಲ್ಲಿ ನೂತನವಾಗಿ ನಿರ್ಮಾಣ ಮಾಡಿರುವ ಶಿಲಾಮಯ ಮಂದಿರ ಲೋಕಾರ್ಪಣೆ ಹಾಗೂ ಶ್ರೀ ಉಮಾಮಹೇಶ್ವರ,ಶ್ರೀ ನಂದಿಕೇಶ್ವರ ಹಾಗೂ ಪರಿವಾರ ದೇವತೆಗಳ ಪುನರ್ ಪ್ರತಿಷ್ಠಾಪನೆ,ನೂತನ ಯಾಗಮಂಟಪದಲ್ಲಿ ನವಗ್ರಹ ಮೂರ್ತಿಗಳ ಸ್ಥಾಪನೆ ಮತ್ತು ಶ್ರೀ ಉಮಾಮಹೇಶ್ವರ ಜ್ಞಾನಪಂಟಪಗಳನ್ನೊಳಗೊಂಡ ನೂತನ ರಾಜಗೋಪುರ ಸಮರ್ಪಣೆ ಕಾರ್ಯಕ್ರಮ ತತ್ಕರಕಮಲಸಂಜಾತರಾದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳವರ ದಿವ್ಯ ಉಪಸ್ಥಿತಿಯಲ್ಲಿ ಸೋಮವಾರ ನಡೆಯಿತು.
ದಕ್ಷಿಣಾಮ್ನಾಯ ಶ್ರೀ ಶೃಂಗೇರಿ ಶಾರದಾಪೀಠಾಧೀಶ್ವರರಾದ ಜಗದ್ಗುರು ಶ್ರೀ ವಿಧುಶೇಖರಭಾರತೀ ಮಹಾಸ್ವಾಮಿಗಳನ್ನು ಭವ್ಯ ಮೆರವಣಿಗೆ ಮೂಲಕ ಬರಮಾಡಿಕೊಳ್ಳಲಾಯಿತು.ಸ್ವಾಮಿಗಳ ಪಾದ ಪೂಜೆಯನ್ನು ನೆರವೇರಿಸಲಾಯಿತು.ಸ್ವಾಮಿಗಳು ಮಂತ್ರಾಕ್ಷತೆ ನೀಡಿ ಆರ್ಶೀವಚನ ಮಾಡಿದರು.ಸಾವಿರಾರು ಭಕ್ತರು ಕ್ಷೇತ್ರಕ್ಕೆ ಆಗಮಿಸಿ ಶ್ರೀ ದೇವರ ಪ್ರಸಾದವನ್ನು ಸ್ವೀಕರಿಸಿದರು.ವಿದ್ಯುತ್ ದೀಪಾಲಂಕಾರದಿಂದ ದೇವಾಲಯವನ್ನು ಸುಂದರಗೊಳಿಸಲಾಗಿತ್ತು.
ದಕ್ಷಿಣಾಮ್ನಾಯ ಶ್ರೀ ಶೃಂಗೇರಿ ಶಾರದಾಪೀಠಾಧೀಶ್ವರರಾದ ಜಗದ್ಗುರು ಶ್ರೀ ವಿಧುಶೇಖರಭಾರತೀ ಮಹಾಸ್ವಾಮಿಗಳು ಆರ್ಶೀವಚನ ನೀಡಿ ಮಾತನಾಡಿ,ದೇವರ ಸಾನಿಧ್ಯವು ಅಭಿವೃದ್ಧಿಗೊಂಡಾಗ ಊರಿಗೆ ಶ್ರೇಯಸ್ಸು ದೊರೆಯುತ್ತದೆ.ಭಕ್ತಿಯಿಂದ ಬೇಡಿಕೊಂಡು ದೇವರ ಪೂಜೆ ಮಾಡುವುದರಿಂದ ದೇವರ ಆರ್ಶೀವಾದವನ್ನು ಪಡೆಯಬಹುದಾಗಿದೆ ಎಂದರು.
ಯು.ಬಿ ಶೆಟ್ಟಿ ಅವರು ಮಾತನಾಡಿ,ನೂರಾರು ವರ್ಷಗಳ ಇತಿಹಾಸವನ್ನು ಹೊಂದಿರುವ ಮಾದಯ್ಯ ಶೆಟ್ರಮನೆ ಮೂಲಸ್ಥಾನವನ್ನು ತಾಯಿಯ ಆಶಯ ಮತ್ತು ಕನಸು ಹಾಗೂ ನಮ್ಮ ಸಹೋದರರ ಆಲೋಚನೆ ಮತ್ತು ಯೋಚನೆ ಮೂಲಕ ಸಾನಿಧ್ಯವನ್ನು ಅಭಿವೃದ್ಧಿಪಡಿಸಲಾಗಿದೆ.ಗ್ರಾಮಸ್ಥರು ಹಿರಿಯರು ಬಂಧುಗಳ ಸಹಕಾರದಿಂದಾಗಿ ಇವೊಂದು ಕಾರ್ಯ ಆಗಿದೆ ಎಂದು ಹೇಳಿದರು.
ಸಿದ್ದಮ್ಮ ಮಾದಯ್ಯ ಶೆಟ್ಟಿ ಫ್ಯಾಮಿಲಿ ಚಾರಿಟೇಬಲ್ ಟ್ರಸ್ಟ್‍ನ ಅಧ್ಯಕ್ಷರಾದ ಯು.ಸೀತಾರಾಮ ಶೆಟ್ಟಿ,ಸದಸ್ಯರಾದ ನಾರಾಯಣ ಎಂ ಶೆಟ್ಟಿ,ಯು.ಬಿ ಶೆಟ್ಟಿ,ಭುಜಂಗಯ್ಯ ಶೆಟ್ಟಿ,ಹರೀಶ್ ಕುಮರ್ ಶೆಟ್ಟಿ ಹಾಗೂ ಸಹದೋರರು
ಉಪಸ್ಥಿತರಿದ್ದರು.
ಫೆಬ್ರವರಿ 27 ರ ಗುರುವಾರದಂದು ಬ್ರಹ್ಮಕಲಾಶಾಭಿಷೇಕ,ಮಹಾಅನ್ನಸಂತರ್ಪಣೆ ನಡೆಯಲಿದೆ.

Advertisement
Advertisement
Advertisement
Advertisement


Share

Leave a comment

Your email address will not be published. Required fields are marked *

You cannot copy content of this page