ಪ್ರಗತಿಪರ ಕೃಷಿಕ ಸುಬ್ಬಣ್ಣ ಶೆಟ್ಟಿ ಅವರಿಗೆ ಗೌರವದ ಸನ್ಮಾನ


ಕುಂದಾಪುರ:ಬೈಂದೂರು ತಾಲೂಕಿನ ಕಿರಿಮಂಜೇಶ್ವರ ಗ್ರಾಮದ ಪ್ರಗತಿಪರ ಕೃಷಿಕರಾದ ಸುಬ್ಬಣ್ಣ ಶೆಟ್ಟಿ ಅವರನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಶ್ರೀ ಮೂಕಾಂಬಿಕಾ ಭತ್ತ ಬೆಳೆಗಾರರ ಒಕ್ಕೂಟ ನಾಯ್ಕನಕಟ್ಟೆ ವತಿಯಿಂದ ಶ್ರೀಗೋಪಾಲಕೃಷ್ಣ ಕಲ್ಯಾಣ ಮಂಟಪ ನಾಗೂರುನಲ್ಲಿ ಭಾನುವಾರ ನಡೆದ ವಾರ್ಷಿಕ ಮಹಾಸಭೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಪ್ರಗತಿಪರ ಕೃಷಿಕರಾದ ಸುಬ್ಬಣ್ಣ ಶೆಟ್ಟಿ ಅವರು ಪ್ರಸ್ತುತ ವರ್ಷದಲ್ಲಿ ಶ್ರೀ ಮೂಕಾಂಬಿಕಾ ಬೆಳೆಗಾರರ ಒಕ್ಕೂಟಕ್ಕೆ ಸುಮಾರು 250 ರಿಂದ 260 ಕ್ವಿಂಟಾಲ್ ಭತ್ತವನ್ನು ನೀಡುವುದರ ಮೂಲಕ ಬೈಂದೂರು ತಾಲೂಕಿನಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.ಸುಬ್ಬಣ್ಣ ಶೆಟ್ಟಿ ಅವರು ಮುಂಗಾರಿನಲ್ಲಿ ಭತ್ತವನ್ನು ಬೆಳೆಯುತ್ತಿದ್ದು.ಹಿಂಗಾರಿನಲ್ಲಿ ಕಲ್ಲಂಗಡಿ ಹಣ್ಣನ್ನು ಬೆಳೆಯುತ್ತಾರೆ.ತಮ್ಮ ಪೂರ್ತಿ ಸಮಯವನ್ನು ಕೃಷಿಗಾಗಿ ವಿನಿಯೋಗ ಮಾಡುತ್ತಿರುವ ಸುಬ್ಬಣ್ಣ ಶೆಟ್ಟಿ ಅವರು ಕೃಷಿ ಕ್ಷೇತ್ರವನ್ನು ವ್ಯವಹಾರಿಕಾ ಕ್ಷೇತ್ರವನ್ನಾಗಿ ಪರಿಗಣಿಸಿಕೊಂಡು ವರ್ಷಕ್ಕೆ ಲಕ್ಷಾಂತರ ರೂಪಾಯಿ ಆದಾಯ ಗಳಿಸುತ್ತಿದ್ದಾರೆ.ಹಡವು ಬಿದ್ದ ಭೂಮಿಗಳನ್ನು ಲಿಜಿಗೆ ಪಡೆದು ಕೃಷಿಯನ್ನು ಮಾಡುತ್ತಿರುವ ಸುಬ್ಬಣ್ಣ ಶೆಟ್ಟಿ ಅವರು ಉತ್ತಮ ಹೈನುಗಾರರು ಕೂಡ ಹೌದು.ಕೃಷಿ ಜತೆಗೆ ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು.ಕಿರಿಮಂಜೇಶ್ವರ ಗ್ರಾಮ ಪಂಚಾಯಿತಿ ಸದಸ್ಯರಾಗಿ,ಹಾಲು ಸೊಸೈಟಿ ಅಧ್ಯಕ್ಷರಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ.
ಪ್ರಗರಿಪರ ಕೃಷಿಕರಾದ ಸುಬ್ಬಣ್ಣ ಶೆಟ್ಟಿ ಅವರು ಶ್ರೀ ಮೂಕಾಂಬಿಕಾ ಭತ್ತ ಬೆಳೆಗಾರರ ಒಕ್ಕೂಟದ ವತಿಯಿಂದ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿ,ಸನ್ಮಾನವನ್ನು ಸ್ವೀಕರಿಸಿದ್ದು ಬಹಳಷ್ಟು ಖುಷಿ ಆಗಿದ್ದು,ಕೃಷಿಯಲ್ಲಿ ತೊಡಗಿಕೊಳ್ಳಲು ಇನ್ನಷ್ಟು ಪ್ರೇರಣೆ ನೀಡಿದೆ ಎಂದು ತಮ್ಮ ಅಭಿಪ್ರಾಯವನ್ನು ಮಾಧ್ಯಮದವರ ಜತೆ ಹಚ್ಚಿಕೊಂಡರು.
ಪ್ರಗತಿಪರ ಕೃಷಿಕರಾದ ಸುಬ್ಬಣ್ಣ ಶೆಟ್ಟಿ ಅವರ ಕೃಷಿ ಕಾಯಕವನ್ನು ಗುರುತಿಸುವ ಕಾರ್ಯ ಜಿಲ್ಲಾಡಳಿತ ಮಾಡಬೇಕಾಗಿದೆ.