ಶ್ರೀ ಮೂಕಾಂಬಿಕಾ ಭತ್ತ ಬೆಳೆಗಾರರ ಒಕ್ಕೂಟದ ವಾರ್ಷಿಕ ಮಹಾಸಭೆ, ದಶಮಾನೋತ್ಸವ ಕಾರ್ಯಕ್ರಮ











ಬೈಂದೂರು:ಶ್ರೀ ಮೂಕಾಂಬಿಕಾ ಭತ್ತ ಬೆಳೆಗಾರರ ಒಕ್ಕೂಟ ಬೈಂದೂರು ಅದರ 2024-25ನೇ ಸಾಲಿನ ವಾರ್ಷಿಕ ಮಹಾಸಭೆ ಮತ್ತು ದಶಮಾನೋತ್ಸವ ಕಾರ್ಯಕ್ರಮ ಹಾಗೂ ನಾಯ್ಕನಕಟ್ಟೆಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಗ್ರಾಮೀಣ ಮಳಿಗೆ ಉದ್ಘಾಟನಾ ಕಾರ್ಯಕ್ರಮ ಶ್ರೀಗೋಪಾಲಕೃಷ್ಣ ಕಲ್ಯಾಣ ಮಂಟಪ ನಾಗೂರುನಲ್ಲಿ ಭಾನುವಾರ ನಡೆಯಿತು.
ರೈತ ಗೀತೆಯೊಂದಿಗೆ ಕಾರ್ಯಕ್ರಮವನ್ನು ಆರಂಭಿಸಲಾಯಿತು.ಮೂಕಾಂಬಿಕಾ ಬೆಳೆಗಾರರ ಒಕ್ಕೂಟದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರಾಜೇಂದ್ರ ಸಾಧನೆಯ ವರದಿಯನ್ನು ಮಂಡಿಸಿದರು.ಒಕ್ಕೂಟಕ್ಕೆ ಅತಿ ಹೆಚ್ಚು ಪ್ರಮಾಣದಲ್ಲಿ ಭತ್ತವನ್ನು ನೀಡಿದ ಸುಬ್ಬಣ್ಣ ಶೆಟ್ಟಿ ಹಾಗೂ ರುಕ್ಮಿಣಿ,ಸಂಜು ಪೂಜಾರಿ ಮತ್ತು ಯೋಗ ಧನ್ವಿ ಮರವಂತೆ ಅವರನ್ನು,ಮಾಜಿ ನಿರ್ದೇಶಕರನ್ನು ಸನ್ಮಾನಿಸಲಾಯಿತು.
ವಾರ್ಷಿಕ ಮಹಾಸಭೆ ಹಾಗೂ ಗ್ರಾಮೀಣ ಮಳಿಗೆಯನ್ನು ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಅವರು ಉದ್ಘಾಟಿಸಿ ಮಾತನಾಡಿ,ಮೂಕಾಂಬಿಕಾ ಭತ್ತ ಬೆಳೆಗಾರರ ಒಕ್ಕೂಟದ ಫಲಶ್ರುತಿ ಎಂಬಂತೆ ಹಡವು ಬಿದ್ದ ಗದ್ದೆಯಲ್ಲಿ ಭತ್ತದ ಬೆಳೆಯನ್ನು ಕಾಣಲು ಸಾಧ್ಯವಾಗಿರುವುದನ್ನು ನೋಡಬಹುದಾಗಿದೆ ಎಂದು ಹೇಳಿದರು.ಮಹಿಳೆಯರಿಗೆ ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳಲು ಸಹಕಾರಿ ಆಗಿದೆ ಎಂದರು.
ವಿಜಯ ಕುಮಾರ್ ಶೆಟ್ಟಿ ವಾರ್ಷಿಕ ವರದಿ ಬಿಡುಗಡೆಗೊಳಿಸಿ ಶುಭ ಹಾರೈಸಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೃಷಿ ಅಧಿಕಾರಿ ಮನೋಜ್ ಮೆನೆಜಸ್ ಮಾತನಾಡಿ,ಹಲವಾರು ಸಮೀಕ್ಷೆ ಹಾಗೂ ಎಡರು ತೋಡರುಗಳ ನಡುವೆ ಮೂಕಾಂಬಿಕಾ ಭತ್ತ ಬೆಳೆಗಾರರ ಒಕ್ಕೂಟವನ್ನು ಆರಂಭಿಸಲಾಗಿದ್ದು,ಗೊದಾಮು ನಿರ್ಮಾಣ ರಸಗೊಬ್ಬರ ವಿತರಣೆ ಸೇರಿದಂತೆ ರೈತರಿಗೆ ಅನುಕೂಲಕರ ವಾಗಿರುವಂತಹ ಹಲವಾರು ಯೋಜನೆಗಳನ್ನು ಜಾರಿಗೆ ತರಲಾಗಿದೆ.ರೈತರ ಸಹಕಾರದಿಂದ ಒಕ್ಕೂಟ ಇಂದು ಹೆಮ್ಮರವಾಗಿ ಬೆಳೆದಿದೆ ಎಂದು ಹೇಳಿದರು.
ನಿಖಿಲೇಶ್ ಎಂ.ಸಿ ಮಣ್ಣಿನ ಫಲವತ್ತತೆ ಕುರಿತು ಮಾತನಾಡಿದರು.
ಶ್ರೀ ಮೂಕಾಂಬಿಕಾ ಭತ್ತ ಬೆಳೆಗಾರರ ಒಕ್ಕೂಟ ಬೈಂದೂರು ಅಧ್ಯಕ್ಷ ಚಂದ್ರ ಪೂಜಾರಿ ಅಧ್ಯಕ್ಷತೆ ವಹಿಸಿ ಮಾತನಾಡಿ,ಸಣ್ಣ ಸಣ್ಣ ಗುಂಪುಗಳನ್ನು ಮಾಡಿ ದೊಡ್ಡ ದೊಡ್ಡ ಆಸೆಗಳನ್ನು ಇಟ್ಟುಕೊಂಡು ಮೂಕಾಂಬಿಕಾ ಭತ್ತ ಬೆಳೆಗಾರರ ಒಕ್ಕೂಟವನ್ನು ಆರಂಭಿಸಲಾಗಿದ್ದು ಆರಂಭಿಕ ಹಂತದಲ್ಲಿ ನಷ್ಟವನ್ನು ಅನುಭವಿಸಲಾಗಿತ್ತು.ರೈತರ ಸಹಕಾರದಿಂದ ಸಂಸ್ಥೆವು ಪ್ರಸ್ತುತ ಆರ್ಥಿಕ ವರ್ಷದಲ್ಲಿ 2.16 ಕೋಟಿ ವ್ಯವಹಾರವನ್ನು ಮಾಡಲಾಗಿದ್ದು,3.63 ಲಕ್ಷ.ರೂ ನಿವ್ವಳ ಲಾಭಗಳಿಸಲಾಗಿದೆ ಎಂದರು.ಡಾ.ಕೆ ಆರ್ ಹುಲ್ಲು ನಾಚೆ ಗೌಡರು.ಖ್ಯಾತ ಮಣ್ಣು ಪುನರುಜ್ಜೀವನ ತಜ್ಞರು ಉಮೇಶ್. ಯೋಜನಾಧಿಕಾರಿಗಳು.ಕೃಷಿ ವಿಭಾಗ ಕೇಂದ್ರ ಕಚೇರಿ,
ಮಂಜುನಾಥ ಉಡುಪ,ನಿರ್ದೇಶಕರಾದ ರವಿರಾಜ್ ಪೂಜಾರಿ ಕೊಡೇರಿ,ರಾಜು ಪೂಜಾರಿ ನಾಯ್ಕನಕಟ್ಟೆ,ಶಿವರಾಮ್ ಶೆಟ್ಟಿ ಹೊಸಾಡು,ಗೀತಾ ಬಡಾಕೆರೆ,ಕಿರಣ್ ಪೂಜಾರಿ ಕುಂದಾಪುರ,ಲಲಿತಾ ನಾಗೂರು,ಸುರೇಂದ್ರ ನಾಯ್ಕ ಹೇರೂರು,ಬೈಂದೂರು ತಾಲೂಕು ಕೇಂದ್ರ ಒಕ್ಕೂಟದ ಅಧ್ಯಕ್ಷ ವಾಸು ಮೇಸ್ತ,ಭಜನಾ ಪರಿಷತ್ ಅಧ್ಯಕ್ಷ ಕೃಷ್ಣ ಪೂಜಾರಿ,ರಘುರಾಮ ಪೂಜಾರಿ,ಜಿಲ್ಲಾ ಜನಜಾಗೃತಿ ಕಾರ್ಯ ಸಮಿತಿ ಸದಸ್ಯ ಮಹಾಬಲೇಶ್ವರ ಆಚಾರ್ಯ,ಭಜನಾ ಪರಿಷತ್ ಉಪಾಧ್ಯಕ್ಷ ಮಂಜು ಪೂಜಾರಿ,ಕೃಷಿ ವಿಭಾಗ ಕೇಂದ್ರ ಸಮಿತಿ ಉಮೇಶ್,ಉಪ್ಪಂದ ವಲಯ ಅಧ್ಯಕ್ಷ ಚಂದ್ರಶೇಖರ ದೇವಾಡಿಗ,ತ್ರಾಸಿ ವಲಯ ಅಧ್ಯಕ್ಷೆ ಪ್ರಮೀಳಾ ಗಾಣಿಗ,ವಿವಿಧ ವಲಯ ಮತ್ತು ಒಕ್ಕೂಟದ ಅಧ್ಯಕ್ಷರು,ಸದಸ್ಯರು,ಸಿಬ್ಬಂದಿಗಳು ಉಪಸ್ಥಿತರಿದ್ದರು.
ಬೈಂದೂರು ತಾಲೂಕು ಯೋಜನಾಧಿಕಾರಿ ವಿನಾಯಕ ಪೈ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.ಭರತ್ ವಂದಿಸಿದರು.ರೈತಾಪಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವುದರ ಮೂಲಕ ಗಮನ ಸೆಳೆದರು.
ವರದಿ ಜಗದೀಶ್ ದೇವಾಡಿಗ
ಸಂಪರ್ಕ ಸಂಖ್ಯೆ:9916284048
ನಿಮ್ಮ ಸುದ್ದಿಯನ್ನು ಪ್ರಕಟಿಸಲು ಸಂಪರ್ಕಿಸಿ, ನಿರಂತರವಾಗಿ ಸುದ್ದಿಗಳನ್ನು ಓದಲು ನಮ್ಮ ವಾಟ್ಸ್ ಆ್ಯಪ್ ಗ್ರೂಪ್ ಸೇರಿಕೊಳ್ಳಿ.