ವಿಶ್ವ ಪ್ರಸಿದ್ಧ ತ್ರಾಸಿ-ಮರವಂತೆ ಬೀಚ್ ಸ್ಕೈ ಡೈನಿಂಗ್‍ನಲ್ಲಿ ಕುಳಿತು ಪ್ರಕೃತಿ ಸೌಂದರ್ಯವನ್ನು ಸವಿದ ಪ್ರವಾಸಿಗರು

Share

ಕುಂದಾಪುರ:ಧಾರವಾಡ ಅಗ್ರಿಕಲ್ಚರ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿರುವ 1972 ರ ಬ್ಯಾಚಿನ ವಿದ್ಯಾರ್ಥಿಗಳ ತಂಡ ತಮ್ಮ ಕುಟುಂಬಿಕರೊಂದಿಗೆ ವಿಶ್ವ ಪ್ರಸಿದ್ಧ ತ್ರಾಸಿ ಮರವಂತೆ ಬೀಚ್‍ಗೆ ಶನಿವಾರ ಭೇಟಿ ನೀಡಿ ಸ್ಕೈ ಡೈನಿಂಗ್‍ನಲ್ಲಿ ಕುಳಿತು ಪ್ರಕೃತಿ ಸೌಂದರ್ಯವನ್ನು ಆಶ್ವಾಧಿಸುತ್ತಾ ಬೀಚ್‍ನಲ್ಲಿ ಮೋಜು ಮಸ್ತಿ ಮಾಡುತ್ತಾ ತಮ್ಮ ಸುಂದರ ಕ್ಷಣಗಳನ್ನು ಕಳೆದರು.
ಟೀಮ್ ಮಂತ್ರಾಸ್ ಅವರಿಂದ ತ್ರಾಸಿ ಬೀಚ್‍ನಲ್ಲಿ ನಿರ್ಮಾಣವಾಗಿರುವ ಸ್ಕೈಡೈನಿಂಗ್ ರಾಜ್ಯದ ಎರಡನೇ ತಾಣವಾಗಿದೆ.ಸಮುದ್ರ ಮಟ್ಟದಿಂದ ಸುಮಾರು 90 ರಿಂದ 100 ಮೀಟರ್ ಎತ್ತರದಲ್ಲಿರುವ ಸ್ಕೈಡೈನಿಂಗ್‍ನಲ್ಲಿ ಕುಳಿತು ಬೀಚ್ ಸೌಂದರ್ಯ ಮತ್ತು ಸೌಪರ್ಣಿಕಾ ನದಿಯ ರಮಣೀಯ ದೃಶ್ಯವನ್ನು ಕಣ್ತುಂಬಿಕೊಳ್ಳಬಹುದು.
ಬಳ್ಳಾರಿ,ಬೆಂಗಳೂರು ದಾವಣಗೆರೆ ಧಾರವಾಡ,ಗುಲ್ಬರ್ಗ,ಕೂರ್ಗ ಸೇರಿದಂತೆ ರಾಜ್ಯದ ಇನ್ನಿತರ ಜಿಲ್ಲೆಗಳಲ್ಲಿ ವಾಸಿಸುತ್ತಿದ್ದರು.52 ವರ್ಷಗಳ ಕಾಲದ ಸ್ನೇಹವನ್ನು ಇಂದಿಗೂ ಜೋಪಾನವಾಗಿಟ್ಟುಕೊಂಡಿರುವುದು ಸ್ನೇಹದ ಮಹತ್ವ ಏನು ಎನ್ನುವುದು ಜಗತ್ತಿಗೆ ಸಾರಿದ್ದಾರೆ.ರಾಜಕೀಯ,ಬ್ಯಾಂಕ್,ಕೃಷಿ ಇನ್ನಿತರ ಕ್ಷೇತ್ರದಲ್ಲಿ ತೊಡಗಿಕೊಂಡಿದ್ದ ಅವರು ತಮ್ಮ ನಿವೃತ್ತಿ ಜೀವನದಲ್ಲಿಯೂ ಜೊತೆಯಾಗಿ ಕಾಲ ಕಳೆಯುತ್ತಿರುವುದು ಇಂದಿನ ಯುವಕರಿಗೆ ಮಾದರಿ ಆಗಿದೆ.ಇದಕ್ಕೆ ಪುಷ್ಠಿ ನೀಡುವಂತೆ ಅವರ ಪತ್ನಿಯರು ಕೂಡ ಪರಸ್ಪರ ಸ್ನೇಹಮಯ ಸಂಬಂಧ ಹೊಂದಿರುವುದು ಕೂಡ ಸಾಕ್ಷಿ.ಈ ತಂಡವೂ ಕುಟುಂಬ ಸಮೇತರಾಗಿ ವರ್ಷಕ್ಕೆ ಒಂದು ಬಾರಿ ಕರ್ನಾಟಕದ ಬೇರೆ ಬೇರೆ ಪ್ರವಾಸಿ ತಾಣಕ್ಕೆ ಭೇಟಿ ನೀಡುತ್ತದೆ.
ಮಾಜಿ ಕೃಷಿ ಸಚಿವ ಶಿವಶಂಕರ ರೆಡ್ಡಿ ಅವರು ಸ್ಕೈಡೈನಿಂಗ್‍ನಲ್ಲಿ ವಿಹಾರಿಸಿ ಮಾತನಾಡಿ,ಸ್ಕೈಡೈನಿಂಗ್ ಎನ್ನುವುದು ವಿಶೇಷವಾದ ಆಕರ್ಷಣೀಯ ಕೇಂದ್ರವಾಗಿದ್ದು ಸಮುದ್ರ ಮಟ್ಟದಿಂದ ಮೇಲಕ್ಕೆ ಕುಳಿತು ಪ್ರಕೃತಿ ಸೌಂದರ್ಯದ ವಿಹಂಗಮ ನೋಟವನ್ನು ಕಣ್ತುಂಬಿಕೊಳ್ಳಲು ಅವಕಾಶವಿದೆ.ಎಲ್ಲರೂ ಭೇಟಿ ನೀಡುವಂತ ಸ್ಥಳವಾಗಿದೆ ಎಂದು ಅಭಿಪ್ರಾಯವನ್ನು ಹಂಚಿಕೊಂಡರು.
ಕೆ.ಜಿ ಮಂಜಪ್ಪ ಶಿವಮೊಗ್ಗ ಅವರು ಮಾತನಾಡಿ.ಧಾರವಾಡ ಅಗ್ರಿಕಲ್ಚರ್ ಕಾಲೇಜಿನಲ್ಲಿ 1969 ರಿಂದ 1972 ರ ಬ್ಯಾಚ್‍ನಲ್ಲಿ ಡಿಗ್ರಿ ಮುಗಿಸಿ ರಾಜಕೀಯ ಸರಕಾರಿ ಕೃಷಿ ಇನ್ನಿತರ ಕ್ಷೇತ್ರಗಳಲ್ಲಿ ತೊಡಗಿಕೊಂಡಿದ್ದು.ಹಲವು ವರ್ಷಗಳಿಂದಲೂ ನಾವು ಸ್ನೇಹಮಯ ಜೀವನವನ್ನು ಸಾಗಿಸುತ್ತಿದ್ದೇವೆ.ವರ್ಷಕ್ಕೆ ಒಂದು ಬಾರಿ ಪ್ರವಾಸವನ್ನು ಕೈಗೊಳ್ಳುತ್ತಿದ್ದು ಈ ಸಲ ತ್ರಾಸಿಯಲ್ಲಿರುವ ಸ್ಕೈಡೈನಿಂಗ್‍ಗೆ ಭೇಟಿ ನೀಡಿದ್ದೇವೆ.ಪ್ರವಾಸದ ಅನುಭವ ಖುಷಿ ಕೊಟ್ಟಿದೆ ಎಂದರು.
ಪ್ರಕೃತಿ ರಮಣೀಯ ಸೌಂದರ್ಯಕ್ಕೆ ಮಾರುಹೋಗಿದ್ದ ಪ್ರವಾಸಿಗರಾದ ಸುಕನ್ಯಾ,ಲಲಿತಾ ದಯಾನಂದ,ಹರಿಣಿ ಬೆಂಗಳೂರು ತಮ್ಮ ಅನುಭವನ್ನು ಹಂಚಿಕೊಂಡಿದ್ದು ಜಗತ್ತಿನ ಅದ್ಭುತ ಸೌಂದರ್ಯಗಳಲ್ಲಿ ಇದು ಒಂದಾಗಿದೆ ಎಂದು ಬಣ್ಣಿಸಿದ್ದಾರೆ.ಈ ಸಂದರ್ಭದಲ್ಲಿ ಧಾರವಾಡ ಅಗ್ರಿಕಲ್ಚರ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿರುವ 1969 -1972 ರ ಬ್ಯಾಚ್‍ನ ಸ್ನೇಹಿತರು,ಅವರ ಪತ್ನಿಯರು ಮತ್ತಿತರರು ಉಪಸ್ಥಿತರಿದ್ದರು.
ವರದಿ-ಜಗದೀಶ್

Advertisement

Share

Leave a comment

Your email address will not be published. Required fields are marked *

You cannot copy content of this page