ಅನುಷ್ಠಾನಗೊಂಡಿರುವ ನೀರಾವರಿ ಯೋಜನೆ ಸ್ಥಳೀಯರ ಅಭಿಪ್ರಾಯದೊಂದಿಗೆ ಮುಂದುವರಿಕೆ-ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ




ಬೈಂದೂರು:ಸುಮಾರು 72 ಕೋಟಿ.ರೂ ವೆಚ್ಚದಲ್ಲಿ ಬೈಂದೂರು ತಾಲೂಕಿನ ಕಂಬದಕೋಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೇರಂಜಾಲು ಎಂಬಲ್ಲಿ ನಡೆಯುತ್ತಿರುವ ಹೇರಂಜಾಲು ಗುಡೇ ದೇವಸ್ಥಾನ ಏತ ನೀರಾವರಿ ಕಾಮಗಾರಿ ಪ್ರದೇಶಕ್ಕೆ ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಅವರು ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಶಾಸಕರು,
ಬಹು ಚರ್ಚಿತ ಗುಡೇ ದೇವಸ್ಥಾನ ಏತ ನೀರಾವರಿ ಯೋಜನೆ ಸ್ಥಳೀಯರು ಹಾಗೂ ರೈತರ ವಿಶ್ವಾಸವನ್ನು ಪಡೆದುಕೊಂಡು ಒಂದಿಷ್ಟು ಬದಲಾವಣೆಯೊಂದಿಗೆ ಕಾಮಗಾರಿ ಕೆಲಸವನ್ನು ಪೂರ್ಣಗೊಳಿಸಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲು ಪ್ರಯತ್ನಿಸಲಾಗುವುದು ಎಂದು ಹೇಳಿದರು.
ಯೋಜನೆ ವಿರುದ್ಧವಾಗಿ ಒಂದಿಷ್ಟು ವಿರೋಧಗಳು ಕಂಡು ಬಂದಿರುವ ಹಿನ್ನೆಲೆಯಲ್ಲಿ ಗೊಂದಲಗಳ ಕುರಿತು ಅಧಿಕಾರಿಗಳ ಜೊತೆ ಚರ್ಚಿಸಿದ್ದೇನೆ ಎಂದು ತಿಳಿಸಿದರು.ಸ್ಥಳೀಯ ಸಮಸ್ಯೆಗಳ ಕುರಿತು ಮಾಹಿತಿ ಪಡೆದುಕೊಂಡು ರೈತರ ವಿಶ್ವಾಸ ಪಡೆದು ಜನರಿಗೆ ತೊಂದರೆಯಾಗದಂತೆ ಕಾಮಗಾರಿ ಪೂರ್ಣಗೊಳ್ಳಲಿದೆ. 1.8 ನೀರಿನ ಗುರಿಯನ್ನು ಇಟ್ಟುಕೊಂಡು ಸ್ಥಳೀಯರ ಬಳಕೆಗೆ ಉಪಗೋಗಿಸಲು ಮೊದಲ ಆದ್ಯತೆ ನೀಡಬೇಕು.ಹೆಚ್ಚುವರಿ ನೀರನ್ನು ಮಾತ್ರ ಕೆರೆಗೆ ತುಂಬಿಸುವ ಅಥವಾ ಕುಡಿಯುವ ನೀರಿನ ಬಳಕೆಗೆ ಉಪಯೋಸುವಂತೆ ಕ್ರಮ ಕೈಗೊಳ್ಳಬೇಕೆಂದು ಹೇಳಿದರು.ಸಚಿವರನ್ನು ಭೇಟಿ ಮಾಡಿ ಮಾತುಕತೆ ನಡೆಸಿ
ಮುಂದಿನ ದಿನಗಳಲ್ಲಿ ಸೌಪರ್ಣಿಕಾ ನದಿಯ ಅರೆಹೊಳೆ ಭಾಗದಲ್ಲಿ ಸಿಹಿ ನೀರಿನ ಡ್ಯಾಂ ನಿರ್ಮಾಣ ಮಾಡಲು ಕ್ರಮಗಳನ್ನು ಕೈಗೊಂಡು,ಈ ಭಾಗದ ಕೆರೆಗಳಿಗೆ ನೀರನ್ನು ತುಂಬಿಸುವ ಕಾರ್ಯಕ್ಕೂ ಕ್ರಮಗಳನ್ನು ಕೈಗೊಳ್ಳುವುದರ ಮುಖೇನ ರೈತರ ಹಿತ ಕಾಪಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಹಿರಿಯ ರೈತರಾದ ಮಾಲಿಂಗ ಪೂಜಾರಿ,ಖಂಬದಕೋಣೆ ಗ್ರಾ.ಪಂ ಮಾಜಿ ಅಧ್ಯಕ್ಷ ಸುಕೇಶ ಶೆಟ್ಟಿ,ರಮೇಶ ದೇವಾಡಿಗ,ಮಾಚ ಪೂಜಾರಿ,ರಾಜು ಗಾಣಿಗ ಹಾಗೂ ಸ್ಥಳೀಯ ರೈತರು,ಅಧಿಕಾರಿಗಳು ಹಾಜರಿದ್ದರು.