ಮರವಂತೆ-ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿ ಜಗದೀಶ ಪಿ.ಪೂಜಾರಿ ಹಕ್ಕಾಡಿ ಹಾಗೂ ಉಪಾಧ್ಯಕ್ಷರಾಗಿ ಸತೀಶ ಕುಮಾರ್ ಶೆಟ್ಟಿ ಆಯ್ಕೆ

ಕುಂದಾಪುರ:ಮರವಂತೆ-ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘ ನಾವುಂದ ಅದರ ಪ್ರಧಾನ ಕಚೇರಿಯಲ್ಲಿ ನೂತನ ಆಡಳಿತ ಮಂಡಳಿಯ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಸಭೆ ಗುರುವಾರ ನಡೆಯಿತು. ಮರವಂತೆ-ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘ ನಾವುಂದ ಅದರ ನೂತನ ಆಡಳಿತ ಮಂಡಳಿ ಅಧ್ಯಕ್ಷರಾಗಿ ಜಗದೀಶ ಪಿ.ಪೂಜಾರಿ ಹಕ್ಕಾಡಿ ಹಾಗೂ ಉಪಾಧ್ಯಕ್ಷರಾಗಿ ಸತೀಶ ಕುಮಾರ್ ಶೆಟ್ಟಿ ಆಯ್ಕೆಯಾಗಿದರು.
ಅಧ್ಯಕ್ಷ ಜಗದೀಶ ಪಿ.ಪೂಜಾರಿ ಹಕ್ಕಾಡಿ ಮಾತನಾಡಿ,ಸಾರ್ವಜನಿಕರಿಗೆ ಅನುಕೂಲವಾಗುವ ಉದ್ದೇಶದಿಂದ ಅರೆಹೊಳೆ ಕುದ್ರುಕೋಡು ಮಧ್ಯ ಭಾಗದಲ್ಲಿ ನಮ್ಮ ಸಂಘದ ವತಿಯಿಂದ ರೇಷನ್ ಅಂಗಡಿಯನ್ನು ತೆರೆಯುವ ಉದ್ದೇಶವನ್ನು ಹೊಂದಲಾಗಿದೆ.ಮುಂದಿನ ಐದು ವರ್ಷಗಳ ಅವಧಿಯಲ್ಲಿ ರೈತಪರ ಜನಪರ ಯೋಜನೆಗಳನ್ನು ಅನುಷ್ಠಾನ ಮಾಡಲು ಪ್ರಯತ್ನಿಸಲಾಗುವುದು ಎಂದರು.
ಉಪಾಧ್ಯಕ್ಷ ಸತೀಶ್ ಕುಮಾರ್ ಶೆಟ್ಟಿ ಮಾತನಾಡಿ,ಪ್ರಣಾಳಿಕೆಯಲ್ಲಿ ಘೋಷಿಸಿದ ಅಂಶಗಳನ್ನು ಜಾರಿಗೆ ತರುವುದರ ಮುಖೇನ ಭ್ರಷ್ಟಚಾರ ಮುಕ್ತ ರೈತಪರ ಆಡಳಿತವನ್ನು ನೀಡಲಾಗುವುದು ಎಂದರು.
ಸಂಘದ ಹಿರಿಯ ನಿರ್ದೇಶಕ ನರಸಿಂಹ ದೇವಾಡಿಗ ಶುಭಹಾರೈಸಿದರು.ನೂತನ ನಿರ್ದೇಶಕರಾಗಿ ಆಯ್ಕೆಗೊಂಡಿರುವ ಶ್ರೀನಿವಾಸ ಪೂಜಾರಿ,ಗಣೇಶ ಪೂಜಾರಿ,ಪ್ರಭಾಕರ ಎಂ. ಖಾರ್ವಿ,ಹರಿಶ್ಚಂದ್ರ ಆಚಾರ್ಯ,ಲಕ್ಷ್ಮೀ,ಶಕುಂತಲಾ,ಗಣೇಶ ಪೂಜಾರಿ,ವೀರೇಂದ್ರ ಹೆಗ್ಡೆ,ರಾಮ ಕಂತಿಹೊಂಡ,ಸುರೇಶ ಉಪಸ್ಥಿತರಿದ್ದರು.ಚುನಾವಣಾಧಿಕಾರಿ ಸುನೀಲ್ ಕುಮಾರ್ ಹಾಜರಿದ್ದರು.ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುರೇಶ ಅಳ್ವೆಗದ್ದೆ ಸ್ವಾಗತಿಸಿ,ವಂದಿಸಿದರು.