ಉಪ್ಪುಂದ:ಶ್ರೀ ಉಮಾಮಹೇಶ್ವರ ದೇವರ ಪುನರ್ ಪ್ರತಿಷ್ಠೆ,ಶ್ರೀ ಮನ್ಮಹಾರಥೋತ್ಸವ ಕಾರ್ಯಕ್ರಮ

ಕುಂದಾಪುರ:ಬೈಂದೂರು ಪರಿಸರದಲ್ಲಿ ಉಪ್ಪುಂದ ಮಾದಯ್ಯ ಶೆಟ್ರಮನೆ ಮೂಲಸ್ಥಾನದಲ್ಲಿ ನೂತನವಾಗಿ ನಿರ್ಮಾಣ ಮಾಡಿರುವ ಶಿಲಾಮಯ ಮಂದಿರ ಲೋಕಾರ್ಪಣೆ,ಶ್ರೀ ಉಮಾಮಹೇಶ್ವರ,ಶ್ರೀ ನಂದಿಕೇಶ್ವರ ಹಾಗೂ ಪರಿವಾರ ದೇವತೆಗಳ ಪುನರ್ ಪ್ರತಿಷ್ಠಾಪನೆ ಅಷ್ಟಬಂಧ ಬ್ರಹ್ಮಕಲಶಾಭಿಷೇಕ ರಾಜಗೋಪುರ ಸಮರ್ಪಣೆ ಹಾಗೂ ಶ್ರೀ ಮನ್ಮಹಾರಥೋತ್ಸವ ಕಾರ್ಯಕ್ರಮ ಫೆಬ್ರವರಿ ಪ್ರಾರಂಭವಾಗಿ 21 ರಿಂದ ಫೆಬ್ರವರಿ 27 ರ ಗುರುವಾರದ ತನಕ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ವಿಜೃಂಭಣೆಯಿಂದ ನಡೆಯಲಿದೆ.
ಅವಿಭಾಜಿತ ದಕ್ಷಿಣ ಕನ್ನಡ ಉಡುಪಿ ಜಿಲ್ಲೆಯ ಪರಿಸರದಲ್ಲಿ ಕೆಲವು ಪ್ರತಿಷ್ಠಿತ ಬಂಟ ಕುಟುಂಬಗಳ ಮೂಲ ಸ್ಥಾನವೆನಿಸಿದ ಮಾದಯ್ಯ ಶೆಟ್ರಮನೆಗೆ ಇರುವ ಉಪ್ಪುಂದದ ಶ್ರೀ ಉಮಾಮಹೇಶ್ವರ ದೇವಸ್ಥಾನ ಒಂದು ಅಪರೂಪ ದೇವಾಲಯವಾಗಿದೆ.ಧಾರ್ಮಿಕ ಹಿನ್ನೆಲೆಯನ್ನು ಹೊಂದಿರುವ ಈ ಮನೆತನದ ಹಿರಿಯ ತಲೆಮಾರಿನ ವ್ಯಕ್ತಿಯಾಗಿರುವ ದಿವಂಗತ ಸಿದ್ದಮ್ಮ ಶೆಟ್ಟಿ ಅವರ ವಿಶಾಲ ಮನೆಯ ಒಂದು ಭಾಗವಾಗಿರುವ ಈ ದೇವಸ್ಥಾನ ಆಕರ್ಷಕವಾಗಿ ಶಿಲಾಮಯ ರೂಪದಲ್ಲಿ ನವೀಕರಣಗೊಂಡಿದ್ದು ಅದರ ಲೋಕಾರ್ಪಣೆ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಲಿದೆ.
ಸುಮಾರು 500 ವರ್ಷಗಳಷ್ಟು ಹಳೆಯದೆಂದು ಕುಟುಂಬಿಕರು ನಂಬಿರುವ ಇವೊಂದು ದೇವಾಲಯದ ಜೀರ್ಣೋದ್ಧಾರ ಕಾರ್ಯವನ್ನು ಈಗಾಗಲೇ ದಿವಂಗತ ಸಿದ್ದಮ್ಮ ಶೆಟ್ಟಿ ಅವರ ಮಕ್ಕಳು 1997 ರಿಂದ 2000 ಇಸವಿಯಲ್ಲಿ ಪೂರ್ಣಗೊಳಿಸಿರುತ್ತಾರೆಅದರ ಮುಂದುವರಿದ ಭಾಗವಾಗಿ ಶ್ರೀಮತಿ ಸಿದ್ದಮ್ಮ ಮಾದಯ್ಯ ಶೆಟ್ಟಿ ಫ್ಯಾಮಿಲಿ ಚಾರಿಟೇಬಲ್ ಟ್ರಸ್ಟಿನ ಮುಖಾಂತರ ಇದರ ಪುನರುತ್ಥಾನ ಕಾರ್ಯಕ್ರಮಗಳನ್ನು ಕಳೆದ ಮೂರು ವರ್ಷಗಳಿಂದ ನಡೆಸಿಕೊಂಡು ಬರಲಾಗುತ್ತಿದೆ.
ಪುನರುತಾನ ಈ ದೇವಾಲಯದ ಸ್ಥಾನದಲ್ಲಿ ವಿಶಾಲವಾದ ಶಿಲಾಮಯ ಕಲಾತ್ಮಕವಾದ ನೂತನ ಮಂದಿರ ಹಾಗೂ ಶ್ರೀ ಉಮಾಮಹೇಶ್ವರ ಜ್ಞಾನಮಂಟಪವನ್ನೊಳಗೊಂಡ ರಾಜಗೋಪುರ,ನಂದಿಕೇಶ್ವರ ಮಂದಿರ ಮತ್ತು ನವಗ್ರಹ ಸಹಿತ ಯಾಗ ಮಂಟಪ ,ಭೋಜನ ಶಾಲೇ ಇತ್ಯಾದಿ ಅವಶ್ಯಕತೆ ಸೌಕರ್ಯಗಳನ್ನು ಈಗಾಗಲೇ ನಿರ್ಮಾಣ ಕಾರ್ಯಗಳು ಪೂರ್ಣಗೊಂಡಿದ್ದುಲೋಕಾರ್ಪಣೆಗೆ ಸಿದ್ಧಗೊಂಡಿದೆ.
ಈ ಮನೆತನದ ಬಸವ ದೇವರೊಂದಿಗೆ ಈ ದೇವಾಲಯದಲ್ಲಿ ಉಮಾಮಹೇಶ್ವರ ಅಭಿದಾನದಿಂದ ಪೆÇಜೆಗೊಳ್ಳಲಿದೆ.ನರ್ಮದಾ ನದಿ ಪಾತ್ರದಲ್ಲಿ ತೇದುನಯನಗೊಳ್ಳುವ ನರ್ಮದಾಬಾಣ ಎಂದು ಕರೆಯಲ್ಪಡುವ ಸಹಜ ಶಿವಲಿಂಗ.ಹಿಂದಿದ್ದ ಚಿಕ್ಕಗಾತ್ರದ ಲಿಂಗದ ಸ್ಥಾನದಲ್ಲಿ ಕಾಶಿಯಿಂದ ತಂದ 21 ಅಂಗುಲ ಪ್ರಮಾಣ ಲಿಂಗವೀಗ ಪುನರ್ ಪ್ರತಿಷ್ಠೆ ಗೊಳ್ಳಲಿದೆ.ಹಾಗೆ ಲಿಂಗದ ಹಿಂದಿರುವ 27 ಇಂಚಿನ ಉಮಾಮಹೇಶ್ವರ ಮೂರ್ತಿ,ವಿಷ್ಣು ಮೂರ್ತಿ ,ಗಣಪತಿ,ದೇವಿ, ವೀರಭದ್ರ ಮೂರ್ತಿಗಳು ಮತ್ತು ದೇವಿ ಮೂರ್ತಿಗಳು ಪ್ರತಿಷ್ಠಾಪನೆಗೊಳ್ಳುತ್ತಿದ್ದು.ಶಿವಪಂಚಾಯಿತನದ ಕಲ್ಪನೆಯಲ್ಲಿ ಸಾಕಾರಗೊಳ್ಳುತ್ತಿದೆ.
ಈ ಸಲದ ವಿಶೇಷ ಏನೆಂದರೆ 75 ವರ್ಷದ ಹಿಂದೆ ನಡೆಯುತ್ತಿದ್ದ ರಥೋತ್ಸವವನ್ನು ದೇವಾಲಯದ ಪುನರುತ್ಥಾನದ ಕಾಲದಲ್ಲಿ ಅಂತಹ ರಥೋತ್ಸವವನ್ನು ಮಹಾಶಿವರಾತ್ರಿ ದಿನದಂದು ನಡೆಯಬೇಕ್ಕೆನ್ನುವುದು ದಿವಂಗತ ಸಿದ್ದಮ್ಮ ಶೆಟ್ಟಿ ಅವರ ಸಂಕಲ್ಪಕ್ಕೆ ಅನುಗುಣವಾಗಿ ಚಾರಿಟೇಬಲ್ ಟ್ರಸ್ಟಿನ ಅಧ್ಯಕ್ಷರಾದ ಅವರ ಹಿರಿಯ ಮಗ ಯು.ಸೀತಾರಾಮ ಶೆಟ್ಟಿ ಮತ್ತು ಸಹೋದರರು ಸೇರಿ ನವೀಕೃತವಾದ ರಥವನ್ನು ತಂದು ಅದಕ್ಕಾಗಿ ವಿಶೇಷವಾದಂತಹ ನೂತನ ರಥಬೀದಿ ನಿರ್ಮಿಸಲಾಗಿದೆ.ದೇವಸ್ಥಾನದ ಪ್ರಾಂಗಾಣದಲ್ಲಿರುವ ಶ್ರೀ ಅಶ್ವಥರಾಮ ಜ್ಞಾನ ಮಂದಿರ ಸುತ್ತು ಹಾಕಿ ಬರುವಂತೆ ರಥ ಬೀದಿಯನ್ನು ಕೂಡ ಸಜ್ಜುಗೊಳಿಸಲಾಗಿದೆ.ಈ ಎಲ್ಲಾ ಧಾರ್ಮಿಕ ವಿಧಿವಿಧಾನ ಕಾರ್ಯಕ್ರಮಗಳು ವೇದಮೂರ್ತಿ ಆಗಮಶ್ರೇಷ್ಠ ಶಂಕರ ಪರಮೇಶ್ವರ ಭಟ್ ಕಟ್ಟೆ ಅವರ ಪ್ರಧಾನ ಆಚಾರ್ಯಕತ್ವದಲ್ಲಿ ನಡೆಯಲಿದೆ.
ದಿನಾಂಕ 24-02-2025 ಸೋಮವಾರದಂದು ನಡೆಯಲಿರುವ ಶ್ರೀದೇವರ ಪುನರ್ ಪ್ರತಿಷ್ಠಾ ಮಹೋತ್ಸವ ಕಾರ್ಯಕ್ರಮದಲ್ಲಿ ಶೃಂಗೇರಿ ಶಾರದಪೀಠಾಧೀಶ್ವರರಾದ ಜಗದ್ಗುರು ಶ್ರೀ ಭಾರತಿತಿರ್ಥ ಮಹಾಸ್ವಾಮಿಗಳವರ ಪರಮಾನುಗ್ರಹದಿಂದ ತತ್ಕರಕಮಲಶಂಜಾತರಾದ ಜಗದ್ಗುರು ಶ್ರೀ ವಿಧುಶೇಖರಭಾರತೀ ಮಹಾಸ್ವಾಮಿಗಳವರು ನಮ್ಮ ಶ್ರದ್ಧಾಭಕ್ತಿ ಪುರಸ್ಸರ ಪ್ರಾರ್ಥನೆಯನ್ನು ಅಂಗೀಕರಿಸಿ ನಮ್ಮ ಕ್ಷೇತ್ರಕ್ಕೆ ಚಿತ್ತೈಸಲಿದ್ದು. ಪುನರ್ ಪ್ರತಿಷ್ಠೆ ಹಾಗೂ ಶಿಖರ ಪ್ರತಿಷ್ಠೆ ಕಾರ್ಯಗಳು ಅವರ ಉಪಸ್ಥಿತಿಯಲ್ಲಿ ನಡೆಯಲಿದೆ.
ಹಾಗೂ ಜ್ಞಾನ ಮಂಟಪನ್ನು ಒಳಗೊಂಡ ನೂತನ ಗೋಪುರವು ಮಹಾಸ್ವಾಮಿಗಳ ಅಮೃತಸರದಿಂದ ಲೋಕಾರ್ಪಣೆಗೊಳ್ಳಲಿದೆ.
ವಿಶೇಷವಾಗಿ 24.ರಂದು ನಡೆಯಲಿರುವ ಮಹಾರುದ್ರಯಾಗದ ಅಂಗವಾಗಿ ನಡೆಯಲಿರುವ ಪೂರ್ಣಾಹುತಿಯಲ್ಲಿ ಬಂಧು ಬಾಂಧವರು,ಊರಪರೂರ ಸದ್ಭಕರು ಭಾಗವಹಿಸಿ ಮಹಾಅನ್ನಸಂತರ್ಪಣೆ ಕಾರ್ಯಕ್ರಮದಲ್ಲಿ ಹಾಜರಿರಬೇಕೆಂದು ಶ್ರೀಮತಿ ಸಿದ್ದಮ್ಮ ಮಾದಯ್ಯ ಶೆಟ್ಟಿ ಫ್ಯಾಮಿಲಿ ಚಾರಿಟೇಬಲ್ ಟ್ರಸ್ಟ್‍ನ ಅಧ್ಯಕ್ಷರಾದ ಯು.ಸೀತಾರಾಮ ಶೆಟ್ಟಿ,ಸದಸ್ಯರಾದ ನಾರಾಯಣ ಎಂ ಶೆಟ್ಟಿ,ಯು.ಬಿ ಶೆಟ್ಟಿ,ಭುಜಂಗಯ್ಯ ಶೆಟ್ಟಿ,ಹರೀಶ್ ಕುಮರ್ ಶೆಟ್ಟಿ ಹಾಗೂ ಸಹದೋರರು ವಿನಂತಿಸಿಕೊಂಡಿದ್ದಾರೆ.





















































































































































































































































































































































































































































































































































































































































































































































































































































































































































































































































































































































































































































































































































































































































































