ಲಯನ್ಸ್ ಪ್ರಾಂತೀಯ ಸಮ್ಮೇಳನ,ಕನಕ 2025 ಕಾರ್ಯಕ್ರಮ ಉದ್ಘಾಟನೆ

Share

Advertisement
Advertisement

ಕುಂದಾಪುರ:ಕಳೆದ ಹತ್ತೊಂಭತ್ತು ವರ್ಷಗಳಿಂದ ಅಂತರಾಷ್ಟ್ರೀಯ ಲಯನ್ಸ್ ಕ್ಲಬ್ ಮೂಲಕ ಮುಂಬೈ ಸೇರಿದಂತೆ ಉಡುಪಿ ಜಿಲ್ಲೆಯ ಭಾಗದಲ್ಲಿ ಸಾಮಾಜಿಕ ಕಾರ್ಯಗಳನ್ನು ಮಾಡಿಕೊಂಡು ಬರಲಾಗುತ್ತಿದ್ದು.ಅಶಕ್ತರ ಬಾಳಿಗೆ ನೆರವನ್ನು ಒದಗಿಸಿಕೊಡುವುದರ ಜತೆಗೆ ಸೇವಾ ಕಾರ್ಯಗಳನ್ನು ಮಾಡುತ್ತಾ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಒತ್ತನ್ನು ನೀಡಲಾಗುತ್ತಿದೆ ಎಂದು ಉದ್ಯಮಿಗಳಾದ ಲಯನ್ ಪ್ರಾಂತೀಯ ಅಧ್ಯಕ್ಷ ಎಂಜೆಎಫ್ ಕನಕ ಜಗದೀಶ ಶೆಟ್ಟಿ ಕುದ್ರಕೋಡು ಹೇಳಿದರು.
ಲಯನ್ಸ್ ಇಂಟರ್ ನ್ಯಾಷನಲ್ ಪ್ರಾಂತ್ಯ 4 ಜಿಲ್ಲೆ 317ಸಿ ವತಿಯಿಂದ ಜ್ಯುವೆಲ್ ಪಾರ್ಕ್ ಹೆಮ್ಮಾಡಿಯಲ್ಲಿ ಶನಿವಾರ ನಡೆದ ಲಯನ್ಸ್ ಪ್ರಾಂತೀಯ ಸಮ್ಮೇಳನ ಕನಕ-2025 ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಲಯನ್ಸ್ ಬಳಗ ಹಾಗೂ ಮನೆಯವರ ಸಹಕಾರ ದಿಂದ ಉದ್ಯಮ ಕ್ಷೇತ್ರದ ಜತೆಗೆ ಸಾಮಾಜಿಕ ಕ್ಷೇತ್ರದಲ್ಲಿ ತೊಡಗಿಕೊಂಡು ಕೆಲಸವನ್ನು ಮಾಡಲು ಸಾಧ್ಯವಾಗಿದೆ ಎಂದರು.ಪ್ರಾಂತೀಯ ಸಮ್ಮೇಳನ ಯಶಸ್ವಿಯಾಗಿ ನಡೆಯಲು ಸಹಕರಿಸಿದ ಪ್ರಾಂತ್ಯದ ಹತ್ತು ಕ್ಲಬ್ಬಿನ ಸದಸ್ಯರಿಗೆ ಧನ್ಯವಾದವನ್ನು ಅರ್ಪಿಸಿದರು.
ವೈಚಾರಿಕ ಚಿಂತಕರಾದ ಅಶೋಕ ಹಂಚಲಿ ವಿಜಯಪುರ ಅವರು ಮಾತನಾಡಿ,ಇಟ್ಟಿಕೆ ಕಲ್ಲು ಮಣ್ಣು ಸಿಮೆಂಟ್ ನಿಂದ ದೇಶ ಕಟ್ಟಲು ಸಾಧ್ಯವಿಲ್ಲ.ಸೇವಾ ಮನೋಭಾವ ಹಾಗೂ ಪರೋಪಕಾರ ಮನೋಭಾವದಿ ಬಾಳುದರಿಂದ ಸಾಧ್ಯವಿದೆ ಎಂದು ಅಭಿಪ್ರಾಯಪಟ್ಟರು.
ಲಯನ್ಸ್ ಪ್ರಾಂತ್ಯ 4 ಜಿಲ್ಲೆ 317ಎ ಪ್ರಥಮ ಮಹಿಳೆ ಸುಮಂಗಲಾ ಜಗದೀಶ್ ಶೆಟ್ಟಿ ಉದ್ಘಾಟಿಸಿ ಶುಭಹಾರೈಸಿದರು.ಜಿಲ್ಲಾ ದ್ವಿತೀಯ ಉಪ ಗವರ್ನರ್ ಎಂಜೆಎಫ್ ರಾಜೀವ ಕೋಟ್ಯಾನ್,ಜಲ್ಲಾ ಮಾಜಿ ಗರ್ವನರ್ ಎಂಜೆಎಫ್ ಎಸ್.ಎಂ ಹೆಗ್ಡೆ,ಛೇರಮನ್ ಜಿ.ಗೋಕುಲ್ ಶೆಟ್ಟಿ,ಕಾರ್ಯದರ್ಶಿ ಲ.ವಿಶ್ವನಾಥ ಶೆಟ್ಟಿ,ಪ್ರಾದೇಶಿಕ ಸಭೆ ಸಮಿತಿ ಖಜಾಂಚಿ ನರಸಿಂಹ ದೇವಾಡಿಗ,ನಾವುಂದ ಕ್ಲಬ್ಬಿನ ಅಧ್ಯಕ್ಷ ಸಮರ ಶೆಟ್ಟಿ ಮತ್ತು ಕಾರ್ಯದರ್ಶಿ ರಾಜೀವ ದೇವಾಡಿಗ ಹಾಗೂ ಲಯನ್ಸ್ ಕ್ಲಬ್ಬಿನ ಪ್ರಮುಖರಾದ ಬಿ.ಅರುಣ್ ಕುಮಾರ್ ಹೆಗ್ಡೆ,ಗಿರೀಶ್ ಶ್ಯಾನುಭಾಗ್,ಡಾ.ಶಿವಕುಮಾರ್,ವಿ.ಎಸ್ ಉಮರ್,ವರುಣ್ ಶೆಟ್ಟಿ,ಮೆಲ್ವಿನ್ ಅರಾನ್ಹಾ,ಹರೀಶ್ ಪೂಜಾರಿ,ಸೋಮನಾಥ ಹೆಗಡೆ,ಮಹೇಶ್ ಕುಮಾರ್,ಬಿ ಸತೀಶ್,ಎಲ್‍ಎನ್‍ಎಚ್ ಶ್ರೀನಿವಾಸ್ ಪೈ,ಗಿರೀಶ್ ರಾವ್,ಕೆ.ಜಯಕರ ಶೆಟ್ಟಿ,ಪ್ರಕಾಶ್ ಟಿ ಸೊನ್ಸ್,ಸಂಸ್ಥಾಪಕ ಪಿಡಿಜಿ ಎನ್.ಎಂ ಹೆಗ್ಡೆ,ನಾರಾಯಣ ಶೆಟ್ಟಿ,ಎಂಜೆಎಫ್ ರಮಾನಂದ,ಪ್ರಕಾಶ್ ಬೆಟ್ಟಿನ್,ದಿಮಕರ ಶೆಟ್ಟಿ ಹಾಗೂ ದಿಶಾ ರಾಣಿ ಉಪಸ್ಥಿತರಿದ್ದರು.ವೈದ್ಯಕೀಯ ನೆರವು,ಪ್ರತಿಭಾ ಪುರಸ್ಕಾರ ವಿತರಿಸಲಾಯಿತು.ಬ್ಯಾನರ್ ಪ್ರಸ್ಟೆಂಶನ್‍ನಲ್ಲಿ ಪ್ರಥಮ ಸ್ಥಾನ ಪಡೆದ ಬೈಂದೂರು-ಉಪ್ಪÅಂದ ಕ್ಲಬ್,ದ್ವಿತೀಯ ಸ್ಥಾನ ಪಡೆದ ಚೆನ್ನಕೇಶವ ಹಕ್ಲಾಡಿ,ತೃತೀಯ ಸ್ಥಾನ ಪಡೆದ ಕುಂದಾಪುರ ಕ್ಲಬ್‍ಗೆ ಪ್ರಶಸ್ತಿ ವಿತರಿಸಲಾಯಿತು.ಪ್ರಾಂತ್ಯ-4 ಜಿಲ್ಲೆಯ ಹತ್ತು ಕ್ಲಬ್ಬಿನ ಅಧ್ಯಕ್ಷರು,ಪದಾಧಿಕಾರಿಗಳು,ಸದಸ್ಯರು ಭಾಗವಹಿಸಿದ್ದರು.ಗೋಕುಲ್ ಶೆಟ್ಟಿ ಸ್ವಾಗತಿಸಿದರು.ವಿಶ್ವನಾಥ ಶೆಟ್ಟಿ ಮತ್ತು ಮಾಲಿನಿ ಸತೀಶ ನಿರೂಪಿಸಿದರು.ನರಸಿಂಹ ದೇವಾಡಿಗ ವಂದಿಸಿದರು.ಚಿಂತನಾ ಹೆಗ್ಡೆ ಅವರಿಂದ ಯಕ್ಷಗಾನ ನಾಟ್ಯ ವೈಭವ ಜರುಗಿತು.ವೈಭವದ ಮೆರವಣಿಗೆ ನೋಡುಗರ ಮನ ಸೆಳೆಯಿತು.

Advertisement
Advertisement
Advertisement
Advertisement


Share

Leave a comment

Your email address will not be published. Required fields are marked *

You cannot copy content of this page